EarthQuake: ವಿಜಯಪುರ ಸೇರಿದಂತೆ ಹಲವೆಡೆ ಭೂಕಂಪ; ಮನೆಯಿಂದ ಹೊರಬಂದ ಜನರು..!

ವಿಜಯಪುರದ ಜಲನಗರ, ಕೀರ್ತಿ ನಗರ, ಟ್ರಜರಿ ಕಾಲೋನಿ, ಗಣೇಶ್ ನಗರ, ನವಭಾಗ್ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ದೊಡ್ಡದಾದ ಶಬ್ಧವಾಗಿದೆ.

Written by - Puttaraj K Alur | Last Updated : Sep 5, 2021, 10:17 AM IST
  • ವಿಜಯಪುರ ಜಿಲ್ಲೆಯ ಹಲವೆಡೆ ಭೂಕಂಪ, ರಿಕ್ಟರ್ ಮಾಪಕದಲ್ಲಿ 3.9ರಷ್ಟು ಕಂಪನದ ತೀವ್ರತೆ ದಾಖಲು
  • ದೊಡ್ಡ ಶಬ್ಧಕ್ಕೆ ಬೆಚ್ಚಿಬಿದ್ದು ಮನೆಯಿಂದ ಓಡಿ ಹೊರಬಂದ ಜನರು
  • ಮಹಾರಾಷ್ಟ್ರದ ಕೊಲ್ಹಾಪುರ ಭೂಕಂಪನದ ಕೇಂದ್ರ ಬಿಂದು, ಜಿಲ್ಲಾಡಳಿತದಿಂದ ಮಾಹಿತಿ ಸಂಗ್ರಹ
EarthQuake: ವಿಜಯಪುರ ಸೇರಿದಂತೆ ಹಲವೆಡೆ ಭೂಕಂಪ; ಮನೆಯಿಂದ ಹೊರಬಂದ ಜನರು..! title=
ವಿಜಯಪುರ ಸೇರಿದಂತೆ ಜಿಲ್ಲೆಯ ಹಲವೆಡೆ ಭೂಕಂಪ ಸಂಭವಿಸಿದೆ. (Photo Courtesy: @Zee News)

ವಿಜಯಪುರ: ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭೂಕಂಪ(EarthQuake) ಸಂಭವಿಸಿದೆ. ಶನಿವಾರ ರಾತ್ರಿ 11.55ರ ಸುಮಾರಿಗೆ 2 ಬಾರಿ ದೊಡ್ಡ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.9ರಷ್ಟು ಕಂಪನದ ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರದ ಕೊಲ್ಹಾಪುರ ಭೂಕಂಪನದ ಕೇಂದ್ರಬಿಂದುವಾಗಿದ್ದು, ಈ ಬಗ್ಗೆ ಜಿಲ್ಲಾಡಳಿತವು ಮಾಹಿತಿ ಸಂಗ್ರಹಿಸುತ್ತಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಅಧಿಕಾರಿಗಳು ಕೂಡ ಯಾವ್ಯಾವ ಪ್ರದೇಶದಲ್ಲಿ ಭೂಕಂಪನವಾಗಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆಲಮಟ್ಟಿಯ ಭೂಕಂಪ ಮಾಪನ ಕೇಂದ್ರದಿಂದಲೂ ಅವರು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಜಯಪುರ(Vijayapura)ದ ಜಲನಗರ, ಕೀರ್ತಿ ನಗರ, ಟ್ರಜರಿ ಕಾಲೋನಿ, ಗಣೇಶ್ ನಗರ, ನವಭಾಗ್ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಹಾಗೂ ಬಾಗಲಕೋಟೆ(Bagalkot)ಯ ಹಲವು ಪ್ರದೇಶಗಳಲ್ಲಿ ದೊಡ್ಡದಾಗಿ ವಿಚಿತ್ರವಾದ ಶಬ್ಧವಾಗಿದೆ. ಇದಲ್ಲದೆ ಈ ಭಾಗದ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.

ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಸಾವು ಖಚಿತ, ಶವಸಂಸ್ಕಾರ ಉಚಿತ!: ಕಾಂಗ್ರೆಸ್ ವ್ಯಂಗ್ಯ

ಭೂಮಿ ಕಂಪಿಸಿದ ಕೂಡಲೇ ಭಯ ಭೀತರಾದ ಜನರು ಮಕ್ಕಳೊಂದಿಗೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆಂದು ತಿಳಿದುಬಂದಿದೆ.  ತಿಕೋಟ, ಬಸವನ ಬಾಗೇವಾಡಿ, ನಿಡಗುಂದಿ, ಕೊಲ್ಹಾರ, ಮನಗೂಳಿ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಲ್ಲಿ ಅನೇಕ ಬಾರಿ ಭೂಕಂಪನವಾಗಿರುವ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ಭೂವಿಜ್ಞಾನಿಗಳು ಕೂಡ ಈ ಬಗ್ಗೆ ಅಧ್ಯಯನ ನಡೆಸಿದ್ದಾರೆಂದು ತಿಳಿದುಬಂದಿದೆ. ಭೂಮಿಯೊಳಗೆ ಕಲ್ಲಿನ ಪದರಗಳು ಸರಿದಾಗ ಈ ರೀತಿಯ ವಿಚಿತ್ರ ಶಬ್ಧ(Different Sound)ದ ಅನುಭವವಾಗುತ್ತದೆ. ಆದರೆ ಇದು ಭೂಕಂಪನವಲ್ಲವೆಂದು ಈಗಾಗಲೇ ವರದಿ ನೀಡಿದ್ದಾರಂತೆ.

ಇದನ್ನೂ ಓದಿ: ಜಾತಿ ಗಣತಿ ವರದಿ ಒಪ್ಪಿಕೊಳ್ಳದ ಬಿಜೆಪಿ ನಾಯಕರಿಂದ ಕುಂಟುನೆಪ: ಸಿದ್ದರಾಮಯ್ಯ

‘ನಾವು ಊಟ ಮಾಡಿ ಮಲಗಿದ್ದೇವು. ಜೋರಾದ ಶಬ್ಧವಾಯಿತು. ಏನಾಯಿತು ಎಂದು ನೋಡುವಷ್ಟರಲ್ಲಿ ಮತ್ತೊಮ್ಮೆ ದೊಡ್ಡ ಶಬ್ಧವಾಯಿತು. ಹೀಗಾಗಿ ನಾವು ಆತಂಕದಿಂದ ಮಕ್ಕಳನ್ನು ಕರೆದುಕೊಂಡು ಮನೆಯಿಂದ ಹೊರಬಂದೆವು. ಮನೆಯಲ್ಲಿದ್ದ ಪಾತ್ರೆ-ಪಗಡೆಗಳು ಕೆಳಗೆ ಬಿದ್ದವು. ಭೂಕಂಪನದ ಶಬ್ಧ ದೊಡ್ಡದಾಗಿತ್ತು’ ಅಂತಾ ಸ್ಥಳೀಯರು ಹೇಳಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಈಗಾಗಲೇ ಈ ಭಾಗದ ಜನರು ಆತಂಕದಲ್ಲಿದ್ದಾರೆ. ಇದೀಗ ಭೂಕಂಪನವಾಗಿರುವುದು ಅವರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News