Lokasabha Election 2024: ಕಾಂಗ್ರೆಸ್‌ಗೆ ಸುಲಭ ತುತ್ತಾಗಲಿದೆಯಾ ಬೆಳಗಾವಿ?- ಇಲ್ಲಿದೆ ಅಸಲಿ ಗ್ರೌಂಡ್‌ ರಿಪೋರ್ಟ್‌

Written by - Zee Kannada News Desk | Last Updated : Feb 29, 2024, 01:57 PM IST
  • ಇನ್ನು ಈ‌ ಬಾರಿಯೂ ಸತೀಶ್ ಜಾರಕಿಹೊಳಿ ಅವರಿಗೆ ಟಿಕೆಟ್‌ ನೀಡಬಾರದೆಂದು ಬೆಂಬಲಿಗರು ಹೈಕಮಾಂಡ್ ಕ್ಕೆ ಒತ್ತಡ ಹಾಕುತ್ತಿದ್ದಾರೆ.
  • ಸಚಿವ ಸತೀಶ್ ಜಾರಕಿಹೊಳಿ ಪರ ಒಲವು ತೋರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ
  • ಈ ಹಿನ್ನಲೆ ಬಿಜೆಪಿ ಭದ್ರಕೋಟೆಯಾಗಿದ್ದ ಬೆಳಗಾವಿ ಕಾಂಗ್ರೆಸ್ ಪಾಲಾಗಬೇಕಾಯಿತು.
Lokasabha Election 2024: ಕಾಂಗ್ರೆಸ್‌ಗೆ ಸುಲಭ ತುತ್ತಾಗಲಿದೆಯಾ ಬೆಳಗಾವಿ?- ಇಲ್ಲಿದೆ ಅಸಲಿ ಗ್ರೌಂಡ್‌ ರಿಪೋರ್ಟ್‌ title=

ಲೋಕಸಭಾ ಚುನಾವಣೆ ಅಂದ್ರೆ ಪ್ರಜಾಪ್ರಭುತ್ವದ ಹಬ್ಬ. ದೇಶಕ್ಕೆ ಪ್ರಧಾನ ಮಂತ್ರಿಯನ್ನ ಆರಿಸೋಕೆ ಜನಪ್ರತಿನಿಧಿಗಳನ್ನು ಚುನಾಯಿಸಿ ಕಳುಹಿಸುವ ಗುರುತರವಾದ ಕೆಲಸ. ಕಾನೂನು, ಆಡಳಿತ ಮತ್ತು ಸಂವಿಧಾನಬದ್ಧ ಸಂಸದರ ಚುನಾವಣೆಯಲ್ಲಿ ಭಾಗಿಯಾಗುವುದು ಜವಾಬ್ದಾರಿ ಮತ್ತು ಹೊಣೆಗಾರಿಕೆ ಕೂಡ. ಸಂಸದರೆಂಬುದೇ ಮಹತ್ವದ ಗೌರವ ಮತ್ತು ತನ್ನದೇ ಆದ ಘನತೆಯನ್ನ ಉಳಿಸಿಕೊಂಡಿರುವ ಸಂವಿಧಾನಬದ್ಧ ಅಧಿಕಾರ. ಹೀಗಾಗಿ ಸಂಸದರನ್ನ ಆಯ್ಕೆ ಮಾಡಲು ಮತದಾರ ಪ್ರಭುಗಳು ಕೂಡ ಬಹು ಎಚ್ಚರಿಕೆಯಿಂದ ಸೈದ್ಧಾಂತಿಕ ಮತ್ತು ಅಭಿವೃದ್ಧಿಯ ಮಾನದಂಡಗಳನ್ನು ಬಳಸಿ ಹಕ್ಕನ್ನು ಚಲಾಯಿಸುತ್ತಾನೆ. ಇಲ್ಲಿ ಒಮ್ಮೆ ಮತದಾರನ ನಾಡಿಮಿಡಿತ ಅರಿತ ವ್ಯಕ್ತಿ ದೆಹಲಿ ಪ್ರವೇಶಿಸಿ 5 ವರ್ಷ ಸಂಸದರಾಗಿ ಅಧಿಕಾರ ಚಲಾಯಿಸುತ್ತಾರೆ. ಈ ರೀತಿಯ ಸಂಸತ್‌ ಅಭ್ಯರ್ಥಿ, ಮತದಾರರ ಮನದಾಳ ಮತ್ತು ಕ್ಷೇತ್ರಗಳ ಲೆಕ್ಕಾಚಾರದ ಸಮಗ್ರ ಮಾಹಿತಿಯನ್ನು ಓದುಗರ ಮುಂದಿಡುವುದೇ ಲೋಕ ಲೆಕ್ಕಾಚಾರ, ಸಂಸದರ ರಿಪೋರ್ಟ್‌ ಕಾರ್ಡ್‌

ಲೋಕಸಭೆ ಚುನಾವಣೆಗೆ ಕೆಲವು ದಿನಗಳು ಮಾತ್ರ ಬಾಕಿಯಿದೆ. ದಿನಾಂಕ ಘೋಷಣೆಗೆ ದಿನಗಳು ಸಮೀಪಿಸುತ್ತಿರುವಂತೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ  ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಕಾಂಗ್ರೆಸ್, ಬಿಜೆಪಿಯಲ್ಲಿ ಅಕಾಂಕ್ಷಿಗಳು ಟಿಕೆಟ್‌ ಪಡೆಯಲು ತೆರೆಮರೆಯಲ್ಲಿ ಭಾರಿ ಪೈಪೋಟಿಯೂ ನಡೆಸುತ್ತಿದ್ದಾರೆ. ಕಬ್ಬು, ಮೆಕ್ಕೆಜೋಳ ತರಕಾರಿಗಳಿಗೆ ಪ್ರಸಿದ್ದಿ ಪಡೆದಿರುವ ಕ್ಷೇತ್ರ ಬೆಳಗಾವಿ. ಈ ಕ್ಷೇತ್ರದಲ್ಲಿ ಲಿಂಗಾಯತ, ಕುರುಬ, ಮರಾಠ  ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದೆ.. ಬೆಳಗಾವಿ ಜಿಲ್ಲೆಯ  ಒಟ್ಟು 9 ಕ್ಷೇತ್ರಗಳು ಲೋಕಸಭಾ ವ್ಯಾಪ್ತಿಗೆ ಬರಲಿದೆ. ಅಂದ್‌ ಹಾಗೆ ಬೆಳಗಾವಿ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯಾಗಿದ್ದು ಭದ್ರಕೋಟೆ ಒಡೆಯಲು ಕಾಂಗ್ರೆಸ್ ಭಾರೀ ರಣತಂತ್ರ ಮಾಡಿಕೊಂಡಿದೆ.. 

ಕ್ಷೇತ್ರ : ಬೆಳಗಾವಿ

ಸಂಸದೆ : ಮಂಗಳಾ ಅಂಗಡಿ, ಬಿಜೆಪಿ
ಪಡೆದ ಮತಗಳು :4,35,202
ಸಮೀಪದ ಪ್ರತಿಸ್ಪರ್ಧಿ : ಸತೀಶ್ ಜಾರಕಿಹೊಳಿ, ಕಾಂಗ್ರೆಸ್
ಪಡೆದ ಮತಗಳು: 4,32,299
ಅಸೆಂಬ್ಲಿ ಕ್ಷೇತ್ರಗಳ ಸಂಖ್ಯೆ : 09
ಒಟ್ಟು ಮತದಾರರು : 12.5 ಲಕ್ಷ ಮತಗಳು

ಸಂಸದರ ಸಾಧನೆ

* ಒಂದಿಷ್ಟು ಅಭಿವೃದ್ಧಿ, ಇನ್ನಷ್ಟು ನೆನಗುದಿಗೆ
* ಸುರೇಶ ಅಂಗಡಿ ಕನಸಿನ ಯೋಜನೆಗೆ ಸ್ವಲ್ಪ ಯಶಸ್ವು
* ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳು-27
* ಸಂಸತ್ತಿನಲ್ಲಿ ಪಾಲ್ಗೊಂಡ ಚರ್ಚೆಗಳು-01
* ಸಂಸತ್ತಿನಲ್ಲಿ ಸರಾಸರಿ ಹಾಜರಾತಿ-ಶೇ.68
* ಬೆಳಗಾವಿಯಲ್ಲಿ ನವೀಕೃತ ರೈಲ್ವೆ ನಿಲ್ದಾಣ
* 210 ಕೋಟಿ ರೂ.ವೆಚ್ಚದಲ್ಲಿ ಹೈಟೆಕ್‌ ಸ್ಪರ್ಶ
* ಘಟಪ್ರಭಾ-ಗೋಕಾಕ್‌ ರೈಲ್ವೆ ನಿಲ್ದಾಣ ಅಭಿವೃದ್ಧಿ
* ಬೆಳಗಾವಿ-ಗೋವಾ ರೈಲು ಸಂಚಾರ ಪುನಾರಂಭ
* 441 ಕೋಟಿ ರೂ.ವೆಚ್ಚದಲ್ಲಿ ಜಲಜೀವನ ಮಿಷನ್‌
* 220 ಕೋಟಿ ರೂ. ವಿಮಾನ ನಿಲ್ದಾಣದ 2ನೇ ಟರ್ಮಿನಲ್‌

ಮಂಗಳಾ ಅಂಗಡಿ ಪಾಸಿಟಿವ್‌ 

1. 4 ಬಾರಿ ಅಂಗಡಿ ಮನೆತನಕ್ಕ ಬಿಜೆಪಿ ಗೆಲುವು
2. ಕ್ಷೇತ್ರಕ್ಕೆ ಹಲವು ಯೋಜನೆಗಳು 
3. ಪ್ರಧಾನಿ ನರೇಂದ್ರ ಮೋದಿ ಅಲೆ
4. ಜೆಡಿಎಸ್ ಜೊತೆಗಿನ ಮೈತ್ರಿಯ ಲಾಭ
5. ಕಾಂಗ್ರೆಸ್‌ ಪಕ್ಷದಲ್ಲಿ ಗುಂಪುಗಾರಿಕೆ 
6. ಕಡಿಮೆ ಅವಧಿಯಲ್ಲಿ ಹೆಚ್ಚು ಅನುದಾನ
7. ಅಯೋಧ್ಯೆ ರಾಮಮಂದಿರ ವರದಾನ

ಮಂಗಳಾ ಅಂಗಡಿ ನೆಗೆಟಿವ್‌

1. ಸ್ಥಳೀಯ ಮಟ್ಟದಲ್ಲಿ ರಾಜಕೀಯ
2. ಕ್ಷೇತ್ರದಲ್ಲಿ ಅತಿಯಾದ ಸಂಬಂಧವಿಲ್ಲ
3. ಶಾಸಕರ ಜೊತೆ ಸಮನ್ವಯ ಕೊರತೆ 
4. ಮತ ಹಿಡಿದಿಟ್ಟುಕೊಳ್ಳುವಲ್ಲಿ ವಿಫಲ
5. ರಾಷ್ಟ್ರ ನಾಯಕರ ಮೇಲೆ ಅವಲಂಬನೆ
6. ಬೆಳಗಾವಿ-ಧಾರವಾಡ ರೈಲ್ವೆ ಮಾರ್ಗ ವಿಳಂಬ

ಅಚ್ಚರಿ ಅಂದ್ರೆ ಅರಭಾವಿಯ ಮುಸ್ಲಿಂ ಮತದಾರರು ಬಿಜೆಪಿ ಅಭ್ಯರ್ಥಿಗೆ ಜೈ ಅಂದಿದ್ದಾರೆ. ಕ್ಯಾಂಡಿಡೇಟ್‌ ಯಾರೇ ಆದ್ರೂ ಬಿಜೆಪಿಯೇ ಗೆಲ್ಲುತ್ತದೆ. ಶಾಸಕ ಬಾಲಚಂದ್ರ ಜಾರಕಿಹೊಳಿಯೇ ನಮಗೆ ಮುಖ್ಯ ಅಂತಾರೆ..ಹಾಗಾದ್ರೆ ಕಾಂಗ್ರೆಸ್‌ ಪಕ್ಷ ಚುನಾವಣೆಗೆ ಸಜ್ಜಾಗಿಲ್ಲವಾ..? ಇನ್ನೂ ಅಭ್ಯರ್ಥಿಯೇ ಆಯ್ಕೆ ಆಗಿಲ್ಲ ಅಂತ ನಿದ್ದೆ ಮಾಡ್ತಿದ್ಯಾ..? ಹಾಗೇನಿಲ್ಲ. ಸಿದ್ದರಾಮಯ್ಯ ಸಂಪುಟದ ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ ಸ್ಪರ್ಧೆ ಮಾಡ್ತಾರಾ ಇಲ್ಲವಾ..? ಅಥವಾ ಬೇರೆ ಯಾರಿಗೆ ಟಿಕೆಟ್‌.. ಪುತ್ರಿ ಪ್ರಿಯಾಂಕ ಪರ ಡೆಲ್ಲಿಲಿ ಲಾಬಿ ನಡೆಸಿದ್ದಾರೆ ಅಂತ ಹೇಳಲಾಗ್ತಿದೆ. 

ಈ ಮಧ್ಯೆ ಕಾಂಗ್ರೆಸ್‌ ಪಕ್ಷದಲ್ಲಿ ಯಾರಿಗೆ ಟಿಕೆಟ್‌ ಅನ್ನೋದೇ ಬಹುಚರ್ಚಿತ ವಿಚಾರ. ಸಚಿವ ಸತೀಶ್ ಜಾರಕಿಹೊಳಿ ಸ್ಪರ್ಧಿಸಿದ್ರೆ ಓಕೆ. ಅಥವಾ ಆಪ್ತರಾದ ಡಾ.ಗೀರಿಶ್ ಸೊನವಲಕ್ಕರ ಹೆಸರು ಚಾಲ್ತಿಗೆ ಬಂದಿದೆ. ರಾಜಕಾರಣ ಕುಡಿ ಸೊನವಲಕ್ಕರ ಪರವಾಗಿ ಕಾಂಗ್ರೆಸ್‌ ಕಾರ್ಯರ್ತರು ಕೂಗು ಎಬ್ಬಿಸಿದ್ದಾರೆ.ಇದೆಲ್ಲಾ ಸರಿ.. ಈ ಸಲ ಅದೃಷ್ಟಪರೀಕ್ಷೆಗೆ ಇಳಿಯೋರು ಯಾರು..? ಹಾಲಿ ಸಂಸದೆ ಮಂಗಳಾ ಅಂಗಡಿ ಅವರಿಗೆ ಟಿಕೆಟ್‌ ಸಿಗುತ್ತಾ.. ಮಿಸ್‌ ಆಗುತ್ತದಾ..? ಅಥವಾ ಬೇರೆ ರಣಕಲಿಯನ್ನ ಹುಡುಕಿಕೊಂಡಿದ್ಯಾ ಕೇಸರಿ ಬ್ರಿಗೇಡ್‌ ಅನ್ನೋದು ಇನ್ನೂ ಸಸ್ಪೆನ್ಸ್‌.. ಸದಾ ಅಚ್ಚರಿಗಳನ್ನ ನೀಡೋ ಹೈಕಮಾಂಡ್‌ ಜಗದೀಶ್‌ ಶೆಟ್ಟರ್‌ ಕಡೆಯೂ ಓರೆನೋಟ ನೆಟ್ಟಿದೆ ಅಂತ ಹೇಳಲಾಗ್ತಿದೆ.ಯಾಕಂದ್ರೆ ಕಾಂಗ್ರೆಸ್‌ನಿಂದ ಘರ್‌ ವಾಪ್ಸಿ ಟೈಮಲ್ಲೇ ಈ ಕುರಿತು ಚರ್ಚೆ ನಡೆಸಿದೆ ಅಂತ ಹೇಳಲಾಗ್ತಿದೆ. ಇತ್ತ ಸತೀಶ್‌ ಜಾರಕಿಹೊಳಿ ಅಥವಾ ಪುತ್ರಿ ಪ್ರಿಯಾಂಕ ಅವರ ಹೆಸರು ಕಾಂಗ್ರೆಸ್‌ ವಲಯಲ್ಲಿ ಕೇಳಿ ಬರ್ತಿದೆ..

ಈ ಬಾರಿಯ ರಣಕಣ

1. ಸತೀಶ್‌ ಜಾರಕಿಹೊಳಿ  ಕಾಂಗ್ರೆಸ್
2. ಕೀರಣ ಸಾದನ್ನವರ, ಕಾಂಗ್ರೆಸ್
3. ಮೊಹನ್ ಕಾತರಕಿ , ಕಾಂಗ್ರೆಸ್‌
4. ಡಾ.ಗಿರೀಶ್ ಸೊನವಲಕ್ಕರ, ಕಾಂಗ್ರೆಸ್
5. ಮಂಗಳಾ ಅಂಗಡಿ, ಬಿಜೆಪಿ/ಜೆಡಿಎಸ್‌
5. ಜಗದೀಶ್ ಶೆಟ್ಟರ್, ಬಿಜೆಪಿ
6. ಪ್ರತಾಪ್ ರಾವ್ ಪಾಟೀಲ, ಜೆಡಿಎಸ್

ಒಟ್ನಲ್ಲಿ ಬೆಳಗಾವಿ ಸಂಸತ್‌ ಕ್ಷೇತ್ರದಲ್ಲಿ ಕುಂದಾ ಯಾರಿಗೆ ಎಂಬುದೇ ಈ ಸಲದ ದೊಡ್ಡ ಪ್ರಶ್ನೆ. ಪತಿ ಸುರೇಶ್‌ ಅಂಗಡಿ ಅವರು ರೈಲ್ವೆ ಮಂತ್ರಿಯಾಗಿದ್ದಾಗ ಅಪೂರ್ಣಗೊಂಡಿದ್ದ ಯೋಜನೆಗಳು ಬಹುತೇಕ ಅಂತಿಮ ಹಂತ ತಲುಪಿವೆ. ಆದ್ರೆ ಮತದಾರರ ಪ್ರಭುಗಳ ಚಿತ್ತ ಹೇಗಿದೆ, ಯಾವ ಕಡೆ ವಾಲಲಿದೆ ಅನ್ನೋದು ಯಕ್ಷಪ್ರಶ್ನೆ...

ಬೆಳಗಾವಿ ಲೋಕಸಭಾ ಕ್ಷೇತ್ರದ ಇತಿಹಾಸ :

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 1971 ರಿಂದ 1977 ವರೆಗೆ ಕೊಟ್ರಶೆಟ್ಟಿ ಅಪ್ಪಯ್ಯ ಕರವೀರಪ್ಪ  ಕಾಂಗ್ರೆಸ್ ಪಕ್ಷದಿಂದ ಜಯಗೊಳಿಸಿದ . ಮತ್ತೆ 1980 ರಿಂದ ಕಾಂಗ್ರೆಸ್ ಅಭ್ಯರ್ಥಿಗಳು ಸುಕುಮಾರಪ್ಪ ಬಸಪ್ಪ ಸದ್ನಾಳ ಬೆಳಗಾವಿ ಲೋಕಸಭಾ ವ್ಯಾಪ್ತಿಯಲ್ಲಿ ಆಯ್ಕೆಯಾಗುತ್ತಾ ಕ್ಷೇತ್ರದಲ್ಲಿ  1991 ವರೆಗೆ ಬಂದಿದ್ದಾರೆ.  ಶಿವಾನಂದ ಕೌಜಲಗಿ  ಜೆಡಿ ಅಭ್ಯರ್ಥಿಯಾಗಿ 1996ರಲ್ಲಿ ಆಯ್ಕೆಗೊಂಡರು. 1998 ರಲ್ಲಿ ಬಾಬಾಗೌಡ ರುದ್ರಗೌಡ ಪಾಟೀಲ್ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದರು 1999ರಲ್ಲಿ ಅಮರಸಿಂಹ ಪಾಟೀಲ್  ಸ್ಪರ್ಧೆ ಸ್ಪರ್ಧಿಸಿ 2004ವರೆಗೆ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ನಂತರ 2009 ಸರೇಶ್ ಅಂಗಡಿ ಬೆಳಗಾವಿಯನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿಕೊಂಡು . ನಂತರ ಅವರು ಕಳೆದ 2020 ರ ಕೋವಿಡ ನಿಂದ ಮೃತಪಟ್ಟರು ಅನುಕಂಪದ ಮೇಲೆ ಉಪಚುನಾವಣೆಯಲ್ಲಿ ಬಿಜೆಪಿ ಮಂಗಳಾ ಅಂಗಡಿ ಗೆಲ್ಲುವ ಕಾಣುವ ಮೂಲಕ ಬಿಜೆಪಿ  ಭದ್ರಕೋಟೆ ಭದ್ರಗೊಳಿಸುತ್ತಾರೆ.

ಇನ್ನು ಈ‌ ಬಾರಿಯೂ ಸತೀಶ್ ಜಾರಕಿಹೊಳಿ ಅವರಿಗೆ ಟಿಕೆಟ್‌ ನೀಡಬಾರದೆಂದು ಬೆಂಬಲಿಗರು ಹೈಕಮಾಂಡ್ ಕ್ಕೆ ಒತ್ತಡ ಹಾಕುತ್ತಿದ್ದಾರೆ.  ಒಂದು ವೇಳೆ ಟಿಕೇಟ್ ಕೊಡುವದ್ದಾರೆ ಪ್ರೀಯಾಂಕ ಜಾರಕಿಹೊಳಿ ಅವರಿಗೆ ನೀಡಬೇಕೆಂದು ಅಭಿಮಾನಿಗಳು ಒತ್ತಡ ಹೇರುತ್ತಿರುವ ಜೊತೆಗೆ ಹೈಕಮಾಂಡ್ ಸಹ ಸಚಿವ ಸತೀಶ್ ಜಾರಕಿಹೊಳಿ ಪರ ಒಲವು ತೋರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.ಸತೀಶ್ ಜಾರಕಿಹೊಳಿ ಜೊತೆಗೆ ಆಪ್ತರಾದ ಡಾ// ಗೀರಿಶ್ ಸೊನವಲಕ್ಕರ, ಪ್ರೀಯಾಂಕ ಜಾರಕಿಹೊಳಿ, ಮೋಹನ್ ಕಾತರಕಿ, ವಿನಾಯಕ ನವಲಗಟ್ಟಿ, ಮೃನಾಲ ಹೆಬ್ಬಾಳ್ಕರ್, ಕೂಡ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನಲೆ ಬಿಜೆಪಿ  ಭದ್ರಕೋಟೆಯಾಗಿದ್ದ ಬೆಳಗಾವಿ ಕಾಂಗ್ರೆಸ್ ಪಾಲಾಗಬೇಕಾಯಿತು. 

ಇನ್ನೂ ಹಾಲಿ ಶಾಸಕರು ಸಚಿವರು ಆಗಿರುವ ಸತೀಶ್ ಜಾರಕಿಹೊಳಿ ವಿರುದ್ಧ ಗುಂಪೊಂದು  ಈ ಬಾರಿಯೂ ಸಹ ಲೋಕಫೈಟ್ ನಲ್ಲಿ ಕಣಕ್ಕಿಳಿಯುವ ತಂತ್ರ ರೂಪಿಸಿದ್ದೆ.ಹೀಗಾಗಿ ಜಿಲ್ಲೆಯಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬೇಡಾ ರಾಜ್ಯದ ಮಟ್ಟದಲ್ಲಿ ರಾಜಕೀಯ ಮಾಡಲಿ ನಮ್ಮ ನಾಯಕರು ಅಂತಾ ಕೂಗು.ಇನ್ನೂ ಇದರ ಮಧ್ಯೆ ಡಾ// ಗೀರಿಶ್ ಸೊನವಲಕ್ಕರ  ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿರುವುದು  ರಾಜಕೀಯ ಒಡನಾಟ ಇಟ್ಟುಕೊಂಡಿರುವ ಅವರೀಗ ತೆರೆಮರೆಯಲ್ಲಿ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿರುವುದು ಗೊತ್ತಾಗಿದೆ.‘ಒಂದೋ  ಸತೀಶ್ ಜಾರಕಿಹೊಳಿ ಅವರಿಗೆ ಟಿಕೆಟ್‌ ನೀಡಬೇಕು. ಇಲ್ಲವೇ ಅವರು ಸೂಚಿಸಿದವರನ್ನು ಅಭ್ಯರ್ಥಿ ಮಾಡಬೇಕು’ ಎಂಬುದು ಸತೀಶ್ ಜಾರಕಿಹೊಳಿ  ಬೆಂಬಲಿಗರ ಒತ್ತಾಯವೂ ಆಗಿದೆ. ಹೈಕಮಾಂಡ್‌ ಕೂಡ ಸತೀಶ್ ಜಾರಕಿಹೊಳಿ  ಅವರ ಅಭಿಪ್ರಾಯ ಕೋರಿರುವುದು ಗೊತ್ತಾಗಿದೆ. ಸುಮಾರು 12 ಜನರ ಆಕಾಂಕ್ಷಿಗಳ  ಪಟ್ಟಿ ಕಾಂಗ್ರೇಸ್ ಗೆ ಸೇರಿದೆ. ಇನ್ನು ಬಿಜೆಪಿ  ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕೇಳಿರುವುದು ಬಿಜೆಪಿ ಪಕ್ಷಕ್ಕೆ ತಲೆಬಿಸಿ ಮಾಡಿದೆ. ಸದ್ಯ ಹಾಲಿ ಸಂಸದೆ ಮಂಗಳಾ ಅಂಗಡಿ  ಇದ್ದರೂ ಸಹ ಮತಗಳಿಕೆ ಆದಾರದ ಮೇಲೆ ಮತ್ತು ಶಾಸಕರುಗಳ ಸಂಖ್ಯೆಯ ಮೇಲೆ ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದೆ.

2023 ರ ಮೇನಲ್ಲಿ ನಡೆದಿದ್ದ ವಿಧಾನಸಭೆಯ ಚುನಾವಣೆಯಲ್ಲಿ ಲೋಕಸಭೆ ವ್ಯಾಪ್ತಿಯಲ್ಲಿನ ತನ್ನ ಸಾಧನೆ ಮುಂದಿಟ್ಟುಕೊಂಡು ಪಟ್ಟು ಹಿಡಿದಿದೆ. ಕ್ಷೇತ್ರದಲ್ಲಿ ಪರಿಶಿಷ್ಟರ ಬಳಿಕ ಲಿಂಗಾಯತ,ಕುರುಬ ,ಮರಾಠ ಸಮುದಾಯದ ಪ್ರಾಬಲ್ಯ ಹೆಚ್ಚಿರುವ ಅಂಶವನ್ನೂ ಹೇಳಿಕೊಳ್ಳುತ್ತಿದೆ.ಇನ್ನು ಅಭ್ಯರ್ಥಿ ಆಯ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠರು ಸಭೆ ನಡೆಸಿ ,ಬೆಳಗಾವಿ ಕ್ಷೇತ್ರದ 9 ವಿಧಾನಸಭಾ ಕ್ಷೇತ್ರಗಳ ಮುಖಂಡರಿಂದ ಸಲಹೆ ಸ್ವೀಕರಿಸಿದ್ದಾರೆ. 2023ರ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಾಲ್ಕು   ಕ್ಷೇತ್ರಗಳಲ್ಲಿ ಗೆದ್ದಿದ್ದು, ಒಟ್ಟಾರೆ 9 ಕ್ಷೇತ್ರಗಳಿದ್ದು ಐದು  ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಬಾರಿ ಸಪೋರ್ಟ್ ಅಸಗುತ್ತದ್ದೆ ಎಂದು  ಕೇಳುತ್ತಿರುವುದು ಕುತೂಹಲ ಮೂಡಿಸಿದೆ.

ಒಟ್ಟಾರೆ ಬೆಳಗಾವಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾವು ಹೆಚ್ಚುತ್ತಿದ್ದು,  ಟಿಕೆಟ್ ಪಡೆಯಲು ಆಕಾಂಕ್ಷಿಗಳು ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದು. ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ಕೊಡುಬೇಕೆಂಬ ಲೆಕ್ಕಚಾರದಲ್ಲಿದ್ದಾರೆ, –ಬಿಜೆಪಿ ವರಿಷ್ಠರು ಯಾರಿಗೆ ಟಿಕೆಟ್ ಕೊಡುತ್ತಾರೆ ಎಂಬ ಕುತೂಹಲ ದಲ್ಲಿದ್ದು ಒಂದು ವೇಳೆ ಅಭ್ಯರ್ಥಿಗಳ ಆಯ್ಕೆ ಬಂತರ ಮತದಾರ ಪ್ರಭು ಈ ಬಾರಿ ಯಾರಿಗೆ ಆಶೀರ್ವಾದ ಮಾಡುತ್ತಾನೆ ಅನ್ನೋದು ಕಾದು ನೋಡಬೇಕಿದೆ. 

-ಬಾಳಪ್ಪ ತೇರದಾಳ ಜೀ ಕನ್ನಡ ನ್ಯೂಸ್ ಬೆಳಗಾವಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News