ಲಿಫ್ಟ್ ಲೋಪ - ಸೇವಾ ನ್ಯೂನ್ಯತೆಗೆ ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶ

ದೂರುದಾರ ಶ್ರೀನಿವಾಸಮೂರ್ತಿ ಎಂ.ಎನ್, ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಇವರು ಎದುರುದಾರರಾದ ನಿಭವ್ ಲಿಫ್ಟ್ಸ್ ಪ್ರೆ.ಲಿ. ಚೆನ್ನೈ ಮತ್ತು ಬೆಂಗಳೂರು ಇವರ ವಿರುದ್ದ ದಾಖಲಿಸಿದ್ದ ದೂರನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸೇವಾನ್ಯೂನ್ಯತೆ ಹಿನ್ನೆಲೆ ಎದುರುದಾರರು ಪರಿಹಾರ ನೀಡುವಂತೆ ಆದೇಶಿಸಿದೆ.

Written by - Manjunath N | Last Updated : Sep 12, 2024, 07:06 PM IST
  • ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸೇವಾನ್ಯೂನ್ಯತೆ ಹಿನ್ನೆಲೆ ಎದುರುದಾರರು ಪರಿಹಾರ ನೀಡುವಂತೆ ಆದೇಶಿಸಿದೆ.
  • ಜಿಎಸ್‌ಟಿ ಒಳಗೊಂಡಂತೆ ರೂ.13,44,999/- ಗಳನ್ನು ಪಾವತಿಸಿ ಮನೆಯ ಗೃಹ ಪ್ರವೇಶದ ಒಳಗಾಗಿ ಎಲಿವೇಟರ್/ಲಿಫ್ಟ್ನ್ನು ಅಳವಡಿಸಲು ಹೇಳಿರುತ್ತಾರೆ.
ಲಿಫ್ಟ್ ಲೋಪ - ಸೇವಾ ನ್ಯೂನ್ಯತೆಗೆ ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶ title=

ಶಿವಮೊಗ್ಗ: ದೂರುದಾರ ಶ್ರೀನಿವಾಸಮೂರ್ತಿ ಎಂ.ಎನ್, ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಇವರು ಎದುರುದಾರರಾದ ನಿಭವ್ ಲಿಫ್ಟ್ಸ್ ಪ್ರೆ.ಲಿ. ಚೆನ್ನೈ ಮತ್ತು ಬೆಂಗಳೂರು ಇವರ ವಿರುದ್ದ ದಾಖಲಿಸಿದ್ದ ದೂರನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸೇವಾನ್ಯೂನ್ಯತೆ ಹಿನ್ನೆಲೆ ಎದುರುದಾರರು ಪರಿಹಾರ ನೀಡುವಂತೆ ಆದೇಶಿಸಿದೆ.

ದೂರುದಾರ ಶ್ರೀನಿವಾಸಮೂರ್ತಿ ಎಂ.ಎನ್ ರವರು ವಕೀಲರ ಮುಖಾಂತರ ಎದುರಾದರರ ವಿರುದ್ದ ದೂರನ್ನು ಸಲ್ಲಿಸಿ, ತಾವು ಗೋಪಾಲಗೌಡ ಬಡಾವನೆಯಲ್ಲಿ ಮೊದಲನೇ ಮತ್ತು ಎರಡನೇ ಮಹಡಿಯುಳ್ಳ ಮನೆಯನ್ನು ಕಟ್ಟಿಸಿದ್ದು, ಮನೆಯಲ್ಲಿ ವೃದ್ದ ತಂದೆ, ತಾಯಿ, ಹೆಂಡತಿ ಮತ್ತು ಮಕ್ಕಳಿಗೆ 2ನೇ ಮಹಡಿಗೆ ಹೋಗಲು ಅನುಕೂಲವಾಗುವಂತೆ ಎದುರುದಾರರಿಂದ ಒಂದು ಎಲಿವೇಟರ್/ಲಿಫ್ಟ್ ಖರೀದಿಸಲು ಬಯಸಿ, ಜಿಎಸ್‌ಟಿ ಒಳಗೊಂಡಂತೆ ರೂ.13,44,999/- ಗಳನ್ನು ಪಾವತಿಸಿ ಮನೆಯ ಗೃಹ ಪ್ರವೇಶದ ಒಳಗಾಗಿ ಎಲಿವೇಟರ್/ಲಿಫ್ಟ್ನ್ನು ಅಳವಡಿಸಲು ಹೇಳಿರುತ್ತಾರೆ.

ಇದನ್ನೂ ಓದಿ: 'ಔಷಧಿ ಚೀಟಿಗಳಲ್ಲಿ ಕನ್ನಡ ಕಡ್ಡಾಯಗೊಳಿಸುವುದು ಕಷ್ಟ ಸಾಧ್ಯ'

ಅದರಂತೆ ಎದುರುದಾರರು ಎಲಿವೇಟರ್/ಲಿಫ್ಟ್ನ್ನು ಅಳವಡಿಸಿರುತ್ತಾರೆ. ಆದರೆ ಸದರಿ ಎಲಿವೇಟರ್/ಲಿಫ್ಟ್ ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ಮನೆಯ ಗೃಹ ಪ್ರವೇಶಕ್ಕೆ ಬಂದ ಬಂಧುಮಿತ್ರರು 2ನೇ ಮಹಡಿವರೆಗೆ ಹೋಗಲು ತೊಂದರೆಯಾಗಿರುತ್ತದೆ ಹಾಗೂ ಇದರಿಂದ ಮನೆಯ ಗೃಹ ಪ್ರವೇಶಕ್ಕೆ ಬಂದ ಬಂಧುಮಿತ್ರರ ಎದುರಲ್ಲಿ ತಮಗೆ ಅವಮಾನವಾಗಿದ್ದು, ಎದುರುದಾರರ ಕೃತ್ಯದಿಂದಾಗಿ ತಾವು ಮನೆಯವರಿಂದ ಹಾಗೂ ಬಂಧುಮಿತ್ರರಿಂದ ತುಂಬಾ ಅವಮಾನಕ್ಕೆ ಗುರಿಯಾಗಿರುವುದಲ್ಲದೆ ಮಾನಸಿಕವಾಗಿ ಸಹ ತುಂಬಾ ನೊಂದಿರುವುದಾಗಿ ದೂರನ್ನು ಸಲ್ಲಿಸಿ, ಎದುರುದಾರರಿಂದ ತಾವು ಎಲಿವೇಟರ್/ಲಿಫ್ಟ್ನ್ನು ಖರೀದಿಸಿದ ಮೊತ್ತವನ್ನು ಹಿಂದಿರುಗಿಸಲು ಹಾಗೂ ನ್ಯಾಯಾಲಯದ ಖರ್ಚು-ವೆಚ್ಚ ಹಾಗೂ ಪರಿಹಾರವಾಗಿ ರೂ.50,000/- ಗಳನ್ನು ನೀಡಬೇಕೆಂದು ಎದುರುದಾರರಿಗೆ ನಿರ್ದೇಶನ ನೀಡಬೇಕೆಂದು ಕೋರಿರುತ್ತಾರೆ.

ಇದನ್ನೂ ಓದಿ: 100 ಹೊಸ ಬಿಎಮ್‌ಟಿಸಿ ಬಸ್‌ಗಳಿಗೆ ಸಿಎಂ ಚಾಲನೆ

ದೂರುದಾರರ ದೂರು, ಎದುರುದಾರರ ಲಿಖಿತ ತಕರಾರು, ಉಭಯತರರು ಸಲ್ಲಿಸಿದ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳನ್ನು ಹಾಗೂ ಉಭಯತರರ ವಾದ-ವಿವಾದಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಉಭಯ ಪಕ್ಷಗಾರರ ಒಪ್ಪಂದದಂತೆ ಗೃಹ ಪ್ರವೇಶದ ಒಳಗಾಗಿ ಎಲಿವೇಟರ್/ಲಿಫ್ಟ್ನ್ನು ಸರಿಯಾಗಿ ಕೆಲಸ ಮಾಡುವ ಹಾಗೆ ಅಳವಡಿಸಿಕೊಟ್ಟಿಲ್ಲವಾದ್ದರಿಂದ ಎದುರುದಾರರು ಸೇವಾ ನ್ಯೂನ್ಯತೆ ಎಸಗಿರುವುದಾಗಿ ತೀರ್ಮಾನಿಸಿ, ಎದುರುದಾರರು ದೂರುದಾರರಿಂದ ಪಡೆದ ರೂ.13,44,999/-ಗಳ ಮೇಲೆ ದಿ: 06-02-2024 ರಿಂದ ಶೇ.9 ಬಡ್ಡಿಯನ್ನು 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ ಸದರಿ ಮೊತ್ತದ ಮೇಲೆ ಶೇ.10 ರಂತೆ ಬಡ್ಡಿಯನ್ನು ಈ ಆದೇಶವಾದ ದಿನಾಂಕದಿಂದ ಪೂರಾ ಹಣ ನೀಡುವವರೆಗೂ ಹಾಗೂ ರೂ.50,000/- ಗಳನ್ನು ಪರಿಹಾರವಾಗಿ ಮತ್ತು ರೂ.10,000/- ಗಳನ್ನು ವ್ಯಾಜ್ಯದ ಖರ್ಚು-ವೆಚ್ಚದ ಬಾಬ್ತಾಗಿ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತ ಬಿ.ಪಟ್ಟಣ ಶೆಟ್ಟಿ ಹಾಗೂ ಬಿ.ಡಿ.ಯೋಗಾನಂದ ಇವರನ್ನೊಳಗೊಂಡ ಪೀಠವು ಆ.21 ರಂದು ಆದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Facebook Link - https://bit.ly/3Hhqmcj 
Youtube Link - https://www.youtube.com/watch?v=kr-YIH866cM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm 
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News