Bengaluru Water Crises : ಐಎಪಿಎಲ್ ಗೂ ತಟ್ಟಿದ ಜಲಕಂಟಕ : ಬೆಂಗಳೂರಿನಲ್ಲಿ ಈ ಬಾರಿ ಐಪಿಎಲ್‌ ನಡೆಯೋದು ಡೌಟಾ ?

Water Crises in Benagaluru : ಬೆಂಗಳೂರಿನ ನೀರಿನ ಅಭಾವದ ಬಿಸಿ ಐಎಪಿಎಲ್‌ ಗೂ ತಟ್ಟಿದಂತಿದೆ. ನೀರಿನ ಹಾಹಾಕಾರದ ಕಾರಣದಿಂದಾಗಿ ಬೆಂಗಳೂರಿನಲ್ಲಿ ಐಎಪಿಎಲ್‌ ನಡೆಯುವುದೇ ಎನ್ನುವ ಸಂದೇಹ ಮೂಡಿದೆ.   

Written by - Ranjitha R K | Last Updated : Mar 14, 2024, 10:54 AM IST
  • ಬೆಂಗಳೂರಿನಲ್ಲಿ ದಿನೇ ದಿನೇ ನೀರಿನ ಅಭಾವ ಜಾಸ್ತಿಯಾಗುತ್ತಿದೆ.
  • ಐಎಪಿಎಲ್‌ ಗೂ ತಟ್ಟಿದಂತಿದೆ ನೀರಿನ ಅಭಾವದ ಬಿಸಿ
  • ಐಪಿಎಲ್ ನಡೆಸದಂತೆ ಸಿಎಂಗೆ ಪತ್ರ
Bengaluru Water Crises : ಐಎಪಿಎಲ್ ಗೂ ತಟ್ಟಿದ ಜಲಕಂಟಕ : ಬೆಂಗಳೂರಿನಲ್ಲಿ ಈ ಬಾರಿ ಐಪಿಎಲ್‌ ನಡೆಯೋದು ಡೌಟಾ ? title=

ಬೆಂಗಳೂರು : Bengaluru Water Shortage : ಬೆಂಗಳೂರಿನಲ್ಲಿ ದಿನೇ ದಿನೇ ನೀರಿನ ಅಭಾವ ಜಾಸ್ತಿಯಾಗುತ್ತಿದೆ. ನೀರಿನ ಉಳಿತಾಯ ಹೇಗೆ? ಇದ್ದ ನೀರನ್ನು ಸಮರ್ಪಕವಾಗಿ ಬಳಸುವುದು ಹೇಗೆ ಎನ್ನುವ ಬಗ್ಗೆ ಸರ್ಕಾರ ಕೂಡಾ ಯೋಜನೆಗಳನ್ನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ BWSSB ಕೆಲವು ಕ್ರಮಗಳನ್ನು ಕೂಡಾ ಜಾರಿಗೆ ತಂದಿದೆ. ಈ ನಡುವೆ, ಬೆಂಗಳೂರಿನ ನೀರಿನ ಅಭಾವದ ಬಿಸಿ ಐಎಪಿಎಲ್‌ ಗೂ ತಟ್ಟಿದಂತಿದೆ. ನೀರಿನ ಹಾಹಾಕಾರದ ಕಾರಣದಿಂದಾಗಿ ಬೆಂಗಳೂರಿನಲ್ಲಿ ಐಎಪಿಎಲ್‌ ನಡೆಯುವುದೇ ಎನ್ನುವ ಸಂದೇಹ ಮೂಡಿದೆ. 

ಐಪಿಎಲ್ ನಡೆಸದಂತೆ ಸಿಎಂಗೆ ಪತ್ರ :
ಬೆಂಗಳೂರಿನಲ್ಲಿ ನೀರಿನ ಕೊರತೆ ಹೆಚ್ಚಾಗುತ್ತಿದ್ದಂತೆ, ಐಪಿಎಲ್ ನಡೆಸದಂತೆ ಬೇಡಿಕೆ ಕೂಡಾ  ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿ ಐಪಿಎಲ್ ನಡೆಸದಂತೆ ಸಿಎಂ, ಜಲಮಂಡಳಿ ಅಧ್ಯಕ್ಷರಿಗೂ ಪತ್ರದ ಮೂಲಕ ಮನವಿ  ಸಲ್ಲಿಸಲಾಗಿದೆ. ಈ ಬಗ್ಗೆ ಸಾಮಾಜಿಕ‌ ಹೋರಾಟಗಾರ ಮರಿಲಿಂಗಗೌಡ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಬೆಂಗಳೂರಿನ ಜನರ ಹಿತ ದೃಷ್ಟಿಯಿಂದ ಈ ಪತ್ರ ಬರೆದಿದ್ದಾರೆ. ಜನರ ಹಿತಕ್ಕಿಂತ ಐಪಿಎಲ್ ಮುಖ್ಯ ಅಲ್ಲ ಎಂದು ಮರಿಲಿಂಗಗೌಡ ಪತ್ರದಲ್ಲಿ ಹೇಳಿದ್ದಾರೆ. 

ಇದನ್ನೂ ಓದಿ : ಸಿವಿಲ್ ಎಂಜಿನಿಯರಿಂಗ್ ನಿಂದ ರಾಜಕಾರಣದವರೆಗೆ ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜು ನಡೆದು ಬಂದ ಹಾದಿ

ಐಎಪಿಎಲ್ ಗೆ ಜಲಕಂಟಕ :  
ಒಂದು ವೇಳೆ ಬೆಂಗಳೂರಲ್ಲಿ ಐಪಿಎಲ್ ನಡೆದರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಪತ್ರದಲ್ಲಿ ತಿಳಿಸಲಾಗಿದೆ. ಪಂದ್ಯದ ವೇಳೆ ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗುತ್ತದೆ. ಗ್ರೌಂಡ್ ನಿರ್ವಹಣೆಗೆ, ಶೌಚಾಲಯಕ್ಕೆ  ಹೆಚ್ಚಿನ ನೀರು ಬೇಕಾಗುತ್ತದೆ. ಹೀಗಾಗಿ ಬೆಂಗಳೂರಿನ ಜನರ ಹಿತ ದೃಷ್ಟಿಯಿಂದ ಐಎಪಿಎಲ್ ನಡೆಸದಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ. 

ನಿಯಮದ ಉಲ್ಲಂಘನೆ ಮಾಡಿದಂತಾಗುವುದು :  
ಕುಡಿಯುವ ನೀರನ್ನ ಕುಡಿಯಲು ಬಿಟ್ಟು ಬೇರೆ ಕೆಲಸಗಳಿಗೆ ಬಳಸುವಂತಿಲ್ಲ ಎಂದು ಈಗಾಗಲೇ BWSSB ಜನರಿಗೆ ಸೂಚನೆ ಕೊಟ್ಟಿದೆ. ವಾಹನ ಸ್ವಚ್ಛತೆ, ಕೈದೋಟ, ಕಟ್ಟಡ‌ ನಿರ್ಮಾಣಕ್ಕೆ ಕುಡಿಯುವ ನೀರು ಬಳಕೆ ಮಾಡುವಂತಿಲ್ಲ. ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೂ ಬಳಸುವಂತಿಲ್ಲ. ಈ ಆದೇಶವನ್ನು ಉಲ್ಲಂಘಿಸಿದರೆ 5 ಸಾವಿರ ರೂಪಾಯಿ ದಂಡ ತೆರಬೇಕಾಗುವುದು ಎಂದು BWSSB ತನ್ನ ಆದೇಶದಲ್ಲಿ ಈಗಾಗಲೇ ಹೇಳಿದೆ. ಇವೆಲ್ಲದರ ಮಧ್ಯೆ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನಡೆದರೆ BWSSB ಜಾರಿ ಮಾಡಿದ ಆದೇಶ ಉಲ್ಲಂಘನೆ ಮಾಡಿದಂತೆ ಆಗುತ್ತದೆ. ಹೀಗಾಗಿ ಐಪಿಎಲ್ ನಡೆಯದಿದ್ದರೆ ಲಕ್ಷಾಂತರ ಲೀಟರ್ ನೀರು ಉಳಿಯುತ್ತದೆ. ಈ ನೀರನ್ನು ನೀರಿಗೆ ಹಾಹಾಕರ ಎದುರಿಸುತ್ತಿರುವ ಜನರಿಗೆ ಕೊಡಬಹದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನೂ ಓದಿ :ಮೀನುಗಾರಿಕೆ ಇಲಾಖೆ: ಮತ್ಸ್ಯವಾಹಿನಿ ವಾಹನಗಳಿಗಾಗಿ ಅರ್ಜಿ ಆಹ್ವಾನ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News