ನಿಂಬೆ ಹಣ್ಣನ್ನು ಸೇಬಂತೆ ತಿಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಮಾಡಿದ ಹಳ್ಳಿ ಪ್ರತಿಭೆ

ಬೇವಿನ ಸೊಪ್ಪು ಹಿಡಿದು ತಿನ್ನತ್ತಾ ನಿಂಬೆಹಣ್ಣನ್ನು ಸಿಪ್ಪೆ ಸಮೇತ ತಿನ್ನುವುದನ್ನು ನೋಡಿದರೆ ಎಂತವರಿಗೂ ಒಂದು ಕ್ಷಣ ಆಶ್ಚರ್ಯ ಉಂಟಾಗುತ್ತದೆ. ಹುಟ್ಟು ದರಿದ್ರವಾದ್ರೂ ಸಾವು ಚರಿತ್ರೆಯಾಗಬೇಕೆಂದು ಹಿಡಿದ ಹಠ ಸಾಧಿಸಬೇಕೆಂದು ಇಲ್ಲೊಬ್ಬ ವ್ಯಕ್ತಿ ಇಡೀ ದೇಶವೇ ನಿಬ್ಬೆರರಾಗಿಸುವ ಕಾರ್ಯ ಮಾಡುತ್ತಾ ಎಲೆ ಮರೆ ಕಾಯಿಯಂತೆ ಜೀವನ ಸಾಗಿಸುತ್ತಿದ್ದಾರೆ.  

Written by - Yashaswini V | Last Updated : Jun 16, 2022, 12:24 PM IST
  • ಬಡತನದಲ್ಲಿ ಹುಟ್ಟಿ ಏನಾದರೂ ಸಾಧಿಸಬೇಕು ಎಂದು ಬಯಸಿದ್ದ ಈತನ ಕೈಯಲ್ಲಿ ಇದ್ದದ್ದು ನಿಂಬೆಹಣ್ಣು ಮಾತ್ರ.
  • ಆದರೆ, ಅದರಿಂದಲೇ ಈತ ಇಂದು ಲಿಮ್ಕಾ ಬುಕ್ ಆಪ್ ರೇಕಾರ್ಡ್ನಲ್ಲಿ ದಾಖಲೆ ಬರೆದಿದ್ದಾರೆ.
  • ಇಲ್ಲೊಬ್ಬ ವ್ಯಕ್ತಿ ನಿಂಬೆ ಹಣ್ಣನ್ನು ಸಿಪ್ಪೆ ಸಮೇತ ತಿನ್ನುತ್ತಾ ಎಲ್ಲರನ್ನೂ ಅಚ್ಚರಿಗೊಳಿಸಿ ಸಾಧನೆಯ ಹಾದಿ ಹಿಡಿದ್ದಾದ್ದಾರೆ.
ನಿಂಬೆ ಹಣ್ಣನ್ನು ಸೇಬಂತೆ ತಿಂದು ಲಿಮ್ಕಾ ಬುಕ್  ಆಫ್ ರೆಕಾರ್ಡ್ ಮಾಡಿದ ಹಳ್ಳಿ ಪ್ರತಿಭೆ  title=
Limca Book of Records Lemon Parashuram

ಯಾದಗಿರಿ: ಜೀವನದಲ್ಲಿ ಸಾಧಿಸುವ ಗುರಿ ಜೊತೆಗೆ ದೃಢವಾದ ಮನಸ್ಸೊಂದಿದ್ದರೆ ಯಾವುದೂ ಅಸಾಧ್ಯವಲ್ಲ. ಇದಕ್ಕೆ ನಿದರ್ಶನ ಈ ನಮ್ಮ ಹಳ್ಳಿಯ ಪ್ರತಿಭೆ. ಬಡತನದಲ್ಲಿ ಹುಟ್ಟಿ ಏನಾದರೂ ಸಾಧಿಸಬೇಕು ಎಂದು ಬಯಸಿದ್ದ ಈತನ ಕೈಯಲ್ಲಿ ಇದ್ದದ್ದು ನಿಂಬೆಹಣ್ಣು ಮಾತ್ರ. ಆದರೆ, ಅದರಿಂದಲೇ ಈತ ಇಂದು ಲಿಮ್ಕಾ ಬುಕ್ ಆಫ್ ರೇಕಾರ್ಡ್ನಲ್ಲಿ ದಾಖಲೆ ಬರೆದಿದ್ದಾರೆ. 

ಊಟಕ್ಕೆ ಉಪ್ಪಿನಕಾಯಿ ಇದ್ದರೆ ರುಚಿ, ಅದರಲ್ಲೂ ನಿಂಬೆಹಣ್ಣಿನ ಉಪ್ಪಿನಕಾಯಿ ಎಂದರೆ ಅದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತೇವೆ. ಅದೇ, ಹಸಿ ನಿಂಬೆಹಣ್ಣನ್ನು ಸಿಪ್ಪೆ ಸಮೇತ ಎಂದಾದರೂ ತಿಂದಿದ್ದೀರಾ? ಇಲ್ಲೊಬ್ಬ ವ್ಯಕ್ತಿ ನಿಂಬೆ ಹಣ್ಣನ್ನು ಸಿಪ್ಪೆ ಸಮೇತ ತಿನ್ನುತ್ತಾ ಎಲ್ಲರನ್ನೂ ಅಚ್ಚರಿಗೊಳಿಸಿ ಸಾಧನೆಯ ಹಾದಿ ಹಿಡಿದ್ದಾದ್ದಾರೆ.

ಹೌದು, ಹೀಗೆ ಬೇವಿನ ಸೊಪ್ಪು ಹಿಡಿದು ತಿನ್ನುತ್ತಾ ನಿಂಬೆಹಣ್ಣನ್ನು ಸಿಪ್ಪೆ ಸಮೇತ ತಿನ್ನುವುದನ್ನು ನೋಡಿದರೆ ಎಂತವರಿಗೂ ಒಂದು ಕ್ಷಣ ಆಶ್ಚರ್ಯ ಉಂಟಾಗುತ್ತದೆ. ಹುಟ್ಟು ದರಿದ್ರವಾದ್ರೂ ಸಾವು ಚರಿತ್ರೆಯಾಗಬೇಕೆಂದು ಹಿಡಿದ ಹಠ ಸಾಧಿಸಬೇಕೆಂದು ಇಲ್ಲೊಬ್ಬ ವ್ಯಕ್ತಿ ಇಡೀ ದೇಶವೇ ನಿಬ್ಬೆರರಾಗಿಸುವ ಕಾರ್ಯ ಮಾಡುತ್ತಾ ಎಲೆ ಮರೆ ಕಾಯಿಯಂತೆ ಜೀವನ ಸಾಗಿಸುತ್ತಿದ್ದಾರೆ.  ಅವರೇ ಲೆಮನ್ ಪರಶುರಾಮ. ಜೀವನ ಹುಡುಕಿ ಹೊರಟ ಈ ಅಪ್ಪಟ ಗ್ರಾಮೀಣ ಪ್ರತಿಭೆಗೆ ಜೊತೆಯಾಗಿದ್ದು ಈತನ ಹವ್ಯಾಸ.

ಇದನ್ನೂ ಓದಿ- ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದ ಉದ್ಯೋಗಿ: ಆಟೋ ಡ್ರೈವರ್‌ ಕೇಳಿದ ಪ್ರಶ್ನೆಗೆ ತಬ್ಬಿಬ್ಬು!

ಮೂಲತಃ ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದ ನಿವಾಸಿಯಾದ ಪರಶುರಾಮ ಬಡತನದಲ್ಲಿ ಹುಟ್ಟಿ  ತನ್ನ 11ನೆ ವಯಸ್ಸಿನಲ್ಲಿಯೇ ಸ್ನೇಹಿತರ ಜೊತೆ  ಬೆಟ್ಟಿಗಾಗಿ ಪ್ರಾರಂಭವಾದ ನಿಂಬೆ ಹಣ್ಣು ತಿನ್ನುವ ಇವರ ಹವ್ಯಾಸ ಇಂದು ಅ ಸಾಧನೆಗೆ ಸಹಾಕರವಾಗಿದೆ, ಅದು ಎಲ್ಲಿವರೆಗೂ ಅಂದ್ರೆ 2010 ರಲ್ಲಿ ಅದು ಲಿಮ್ಕಾ ರೆಕಾರ್ಡ್ ಬುಕ್ ತಲುಪಿದೆ. ಇವರು ಕೇವಲ ಐದು ನಿಮಿಷಗಳಲ್ಲಿ 25 ನಿಂಬೆ ಹಣ್ಣನ್ನು ತಿಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆದಿದ್ದಾರೆ.

ಕಲೆಯನ್ನು ಬೆನ್ನು ಹತ್ತಿ ಬೆಂಗಳೂರು ಸೇರಿದ ಇವರು ಸಿನಿಮಾರಂಗದಲ್ಲಿ ತಮ್ಮದೆ ಹಾದ ಛಾಪು ಮೂಡಿಸಬೇಕೆಂದು ಹಲವು ಟಿವಿ ಷೋ ಕಾರ್ಯಕ್ರಮಗಳಲ್ಲಿ ಹಾಗೂ ಹಲವು ಸ್ಪರ್ದೆಗಳಲ್ಲಿ ಭಾಗವಹಿಸಿ ಜನಮನ್ನಣೆ ಗಳಿಸಿದ್ದಾರೆ. ಮಾತ್ರವಲ್ಲ ಹಲವು ಸಾಕ್ಷಾ ಚಿತ್ರಗಳನ್ನು ಕೂಡ ಮಾಡಿದ್ದಾರೆ. ಆದರೆ, ಇದೆಲ್ಲದಕ್ಕೂ ಪೂರಕವಾದ ನಿಂಬೆ ಹಣ್ಣು ತಿನ್ನುವದರಲ್ಲಿಯೇ ಗಿನ್ನಿಸ್ ದಾಖಲೆಯನ್ನು ಮಾಡುವ ಹಂಬಲವನ್ನೂ ಹೊಂದಿದ್ದಾರೆ ಲೆಮನ್ ಪರಶುರಾಮ.
 
ಇದನ್ನೂ ಓದಿ- ಬ್ಯಾಲೇಟ್ ಪೇಪರ್‌ನಲ್ಲಿ ಯುವಕನ ವಿಭಿನ್ನ ಕೋರಿಕೆ: ಮತದಾನ ಎಣಿಕೆ ವೇಳೆ ಸಿಕ್ತು ಲೆಟರ್‌!

ಒಟ್ಟಿನಲ್ಲಿ ಅಪ್ಪಟ ಗ್ರಾಮೀಣ ಪ್ರತಿಭೆಯೊಂದು ಯಾರ ಸಹಾಯವಿಲ್ಲದೆ ತನ್ನ ವಿಶಿಷ್ಟವಾದ ಹವ್ಯಾಸದಿಂದ ಸಾಧನೆ ಮಾಡಲು ಹೊರಟಿರುವುದಕ್ಕೆ ಶುಭ ಹಾರೈಸಲೇಬೇಕು. ಇವರು ಅಂದುಕೊಂಡಂತೆ ಗಿನ್ನೆಸ್ ದಾಖಲೆ ಮಾಡಲಿ ಹಾಗೂ ಸಿನಿಮಾರಂಗದಲ್ಲೂ ಹೆಸರು ಮಾಡಲಿ ಎಂಬುದು ನಮ್ಮ ಆಶಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News