ಧಾರವಾಡ: ಸಹಕಾರ ಇಲಾಖೆಯಿಂದ ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961 ಹಾಗೂ ನಿಯಮಾವಳಿಗಳು 1965 ರನ್ವಯ ನೋಂದಾಯಿತ ಆಗಿರುವ ಖಾಸಗಿ ಲೇವಾದೇವಿಗಾರರು ಹೆಚ್ಚಿನ ಬಡ್ಡಿ ವಸೂಲು ಮಾಡಿದರೆ, ಅವರ ಲೈಸನ್ಸ್ ರದ್ದುಪಡಿಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಜಿಲ್ಲೆಯ ಖಾಸಗಿ ಲೇವಾದೇವಿದಾರರು, ಮೈಕ್ರೋ ಪೈನಾನ್ಸ್ ಮತ್ತು ಪೈನಾನ್ಸ್ ಸಂಸ್ಥೆಗಳ ಪ್ರಮುಖರು ಮತ್ತು ಸಹಕಾರಿ ಇಲಾಖೆ, ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ಸಾಲದ ಹೆಸರಿನಲ್ಲಿ ಸಾರ್ವಜನಿಕರಿಗೆ ಕಿರಿಕಿರಿ, ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ಕುರಿತು ಸಭೆ ಜರುಗಿಸಿ, ಮಾತನಾಡಿದರು.
ಆರ್ಥಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಾಗ ಸರಕಾರದ ನಿಯಮಗಳ ಪಾಲನೆ ಆಗಬೇಕು. ಸಾಲದ ಮೊತ್ತ, ಬಡ್ಡಿ, ಕಂಡಿಷನ್‍ಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರು ಸಾಲದ ಹೆಸರಿನಲ್ಲಿ ಶೋಷಣೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಈ ಕುರಿತು ಸಹಕಾರಿ ಇಲಾಖೆ ಮತ್ತು ಪೋಲಿಸ್ ಇಲಾಖೆ ನಿಗಾವಹಿಸಿ, ಅಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಇದನ್ನೂ ಓದಿ- ಕರ್ನಾಟಕದ ನೆರೆಯ ರಾಜ್ಯದಲ್ಲಿ ಪ್ರಬಲ ಭೂಕಂಪ: ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ದಾಖಲು
ಧಾರವಾಡ ಜಿಲ್ಲೆಯಲ್ಲಿ ಒಟ್ಟು 720 ಲೇವಾದೇವಿಗಾರು, 104 ಗಿರವಿದಾರರು, 281 ಹಣಕಾಸು ಸಂಸ್ಥೆಗಳನ್ನೊಳಗೊಂಡ ಒಟ್ಟು 1,105 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಕೆಲ ಸಂಸ್ಥೆಗಳು ಸ್ಥಗಿತಗೊಂಡಿದ್ದು ಅಂಥ ಸಂಸ್ಥೆಗಳ ರದ್ದತಿಗೆ ಕ್ರಮಕೈಗೊಳ್ಳಬೇಕು. ಸಹಕಾರ ಇಲಾಖೆಯಿಂದ ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961 ಹಾಗೂ ನಿಯಮಾವಳಿಗಳು 1965 ರನ್ವಯ ನಿಬಂಧನೆಗಳನ್ನು ವಿಧಿಸಿ, ಅನುಸರಿಸುತ್ತಿರುವ ಬಗ್ಗೆ ಖಾತರಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಮುಂದಿನ ಎರಡು ತಿಂಗಳಲ್ಲಿ ಮೈಕ್ರೊಪೈನಾನ್ಸ್‍ದವರು ಸಾಲದ ಮೊತ್ತ, ಬಡ್ಡಿ ಆಕರಣೆ, ಸಾಲದ ನಿಯಮಗಳ ಕುರಿತು ಹಾಗೂ ಸಹಕಾರ ಇಲಾಖೆಯವರು ಲೇವಾದೇವಿ ವ್ಯವಹಾರಗಳ ಕುರಿತು ಜನರಲ್ಲಿ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾನಗರ ಪೋಲೀಸ್ ಆಯುಕ್ತ ಎನ್.ಶಶಿಕುಮಾರ ಅವರು ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಅವಳಿನಗರದಲ್ಲಿ ಸಾಲ ಕೊಟ್ಟವರ ಕಿರಿಕಿರಿಯಿಂದ ತೊಂದರೆ ಅನುಭವಿಸುತ್ತಿರುವ ಕುರಿತು ಸುಮಾರು 31 ಪ್ರಕರಣಗಳು ದಾಖಲಾಗಿದ್ದು, ಈ ಸಂಬಂಧ 50 ಜನರನ್ನು ಬಂಧಿಸಲಾಗಿದೆ. ಲೈಸನ್ಸ್ ಪಡೆದು ವ್ಯವಹಾರ ಮಾಡುವವರ ಬಗ್ಗೆ ಮಾತ್ರ ನಿಗಾವಹಿಸದೇ ಲೈಸನ್ಸದಾರರು ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡುವ ಮತ್ತು ಲೈಸನ್ಸ್ ಪಡೆಯದೆ ಸಾಲದ ವ್ಯವಹಾರ ನಡೆಸುವರ ಬಗ್ಗೆ ನಿಗಾವಹಿಸಿ, ಕಾನೂನಿಗೆ ಒಪ್ಪಿಸಬೇಕು. ಈ ಕೆಲಸವನ್ನು ಸಹಕಾರ ಇಲಾಖೆಯವರು ಪೆÇಲೀಸ್ ಇಲಾಖೆ ಸಹಯೋಗದೊಂದಿಗೆ ಮಾಡಬೇಕೆಂದು ಅವರು ಹೇಳಿದರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಜಿಲ್ಲಾ ಪೋಲಿಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ್ ಅವರು ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಾಲದ ಒತ್ತಡದಿಂದಾಗಿ ಎರಡು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಆತ್ಮಹತ್ಯಾ ಪ್ರಯತ್ನ ಮಾಡಲಾಗಿದೆ. ಸಾಲ ಕೊಡುವವರು ವಸೂಲಿಗೆ ಕಾಲಮಿತಿ ಇರಬೇಕು. ಸಾಲ ವಸೂಲು ಸಂದರ್ಭದಲ್ಲಿ ಮಹಿಳೆ, ಮಕ್ಕಳು, ವೃದ್ದರು ಮತ್ತು ಗರ್ಭೀಣಿಯರ ಆರೋಗ್ಯದ ಬಗೆಗೂ ಕಾಳಜಿ ಇರಬೇಕು. ನ್ಯಾಯಾಲಯದ ಆದೇಶಗಳಾಗಿದ್ದರೂ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಸ್ವಲ್ಪ ಸಮಯಾವಕಾಶ ನೀಡಿ, ಕ್ರಮವಹಿಸಬೇಕು ಎಂದರು.
ಸಹಕಾರ ಇಲಾಖೆ ಸಹಾಯಕ ನಿಬಂಧಕ ನಿಂಗರಾಜ ಬೆಣ್ಣಿ ಅವರು ಮಾತನಾಡಿ, ಎಲ್ಲ ಹಣಕಾಸು ಸಂಸ್ಥೆಗಳು ಭದ್ರತಾ ಸಾಲಕ್ಕೆ ವರ್ಷಕ್ಕೆ ಶೇ. 14 ರಷ್ಟು, ಹಾಗೂ ಭದ್ರತೆ ಇಲ್ಲದ ಸಾಲಕ್ಕೆ ವರ್ಷಕ್ಕೆ ಶೇ.16 ರಷ್ಟು ಬಡ್ಡಿಯನ್ನು ಮಾತ್ರ ಆಕರಣೆ ಮಾಡಬೇಕು. ಕರ್ನಾಟಕ ಲೇವಾದೇವಿಗಾರರ ನಿಯಮಾವಳಿಗಳು 1965ರ ನಿಯಮ 15 ರನ್ವಯ ಸಾಲದ ಷರತ್ತುಗಳ ವಿವರಗಳನ್ನು ತೋರಿಸುವ ವಿವರಣಾ ಪತ್ರವನ್ನು ಪ್ರತಿ ತಿಂಗಳು ನಮೂನೆ 6 ರಲ್ಲಿ ಕಡ್ಡಾಯವಾಗಿ ಸಹಕಾರಿ ಇಲಾಖೆ ನಿಬಂಧಕರಿಗೆ ಸಲ್ಲಿಸಬೇಕು. ಮತ್ತು ನಿಯಮ 16(1) ರನ್ವಯ ನಮೂನೆ 7 ರಲ್ಲಿ ಲೇವಾದೇವಿಗಾರನು ತನ್ನ ಸಾಲಗಾರನಿಗೆ ನೀಡಬೇಕಾದ ಲೆಕ್ಕಪತ್ರಗಳ ವಾರ್ಷಿಕ ವಿವರಣ ಪತ್ರವನ್ನು ಕಡ್ಡಾಯವಾಗಿ ಇಲಾಖಾ ನಿಬಂಧಕರಿಗೆ ಸಲ್ಲಿಸತಕ್ಕದ್ದು. ಲೇವಾದೇವಿಗಾರು, ಗಿರವಿದಾರರು. ಹಾಗೂ ಹಣಕಾಸು ಸಂಸ್ಥೆಗಳು ಪ್ರತಿ 5 ವರ್ಷಕ್ಕೊಮ್ಮೆ ಕಡ್ಡಾಯವಾಗಿ ತಮ್ಮ ಲೈಸನ್ಸನ್ನು ನವೀಕರಣ ಮಾಡಿಕೊಳ್ಳಬೇಕು. ನಿಯಮಾನುಸಾರ ನವೀಕರಣಗೊಳ್ಳದೇ ಇದ್ದಲ್ಲಿ ಲೈಸನ್ಸ್ ರದ್ದತಿಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಅವರು ಸಭೆಯಲ್ಲಿ ತಿಳಿಸಿದರು.
ಇದನ್ನೂ ಓದಿ- ಇದು ವಿಶ್ವ ವಿನಾಶದ ಮೊದಲ ಸೂಚನೆ..! ಮರುಭೂಮಿಯಲ್ಲಿ 35 ಮೈಲಿ ಉದ್ದದ ಬಿರುಕು.. ವಿಜ್ಞಾನಿಗಳಿಂದ ಬಯಲಾಯ್ತು ಸತ್ಯ
ಹಣಕಾಸು ಸಂಸ್ಥೆಗಳು ಸಾಲಗಾರ ಮೇಲೆ ಮೀತಿ ಮೀರಿದ ಬಡ್ಡಿ ವಿಧಿಸುವಿಕೆಯನ್ನು 2023 ರ ಸೆಪ್ಟೆಂಬರ 28 ರ ಸರಕಾರದ ಅಧಿಸೂಚನೆಯನ್ವಯ ನಿಷೇಧಿಸಲಾಗಿದೆ. ಹಣಕಾಸು ಸಂಸ್ಥೆಗಳು ತಮ್ಮ ಸಂಘದ ನಾಮಫಲಕವನ್ನು ಸಂಸ್ಥೆಯ ಹೊರಗಡೆ ಹಾಗೂ ತಾವು ವಿಧಿಸುವ ಬಡ್ಡಿದರದ ನಾಮಫಲಕವನ್ನು ಕಚೇರಿ ಒಳಗಡೆ ಸಾರ್ವಜನಿಕರ ಗಮನಕ್ಕಾಗಿ ಕಡ್ಡಾಯವಾಗಿ ಪ್ರದರ್ಶನ ಮಾಡತಕ್ಕದ್ದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ಮ್ಯಾನೆಜರ್ ಪ್ರಭುದೇವ ಎನ್.ಜಿ., ಖಾಸಗಿ ಲೇವಾದೇವಿದಾರರು, ಮೈಕ್ರೋಪೈನಾನ್ಸ್ ಕಂಪನಿಗಳ ಪ್ರತಿನಿಧಿಗಳು, ಪೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.