ಬಿಎಂಟಿಸಿ ಬಳಿಕ ಈಗ ಕೆಎಸ್ಆರ್ ಟಿಸಿಗೂ ಬರಲಿವೆ ಎಲೆಕ್ಟ್ರಿಕ್ ಬಸ್..!

ಇನ್ನು ಕೆಲವೇ ದಿನಗಳಲ್ಲಿ  ರಾಜ್ಯಾದ್ಯಂತ  ಎಲೆಕ್ಟ್ರಿಕ್  ಬಸ್ ಗಳು ರಸ್ತೆಗಿಳಿಯಲಿವೆ. ನಾಲ್ಕು ತಿಂಗಳ ಒಳಗಾಗಿ ರಾಜ್ಯಾದ್ಯಂತ ಎಲೆಕ್ಟ್ರಿಕ್  ಬಸ್ ಗಳು  ಸಂಚರಿಸಲಿವೆ.

Written by - Ranjitha R K | Last Updated : Jul 14, 2022, 09:45 AM IST
  • ಕೆಎಸ್ಆರ್ ಟಿಸಿಗೂ ಕಾಲಿಡಲಿವೆ ಎಲೆಕ್ಟ್ರಿಕ್ ಬಸ್ ಗಳು.
  • 50 ಎಲೆಕ್ಟ್ರಿಕ್ ಬಸ್ ಗಳನ್ನು ಖರೀದಿ ಮಾಡಲು ನಿರ್ಧಾರ
  • ಡಿಪೋಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಹಾಕಲು ತೀರ್ಮಾನ
ಬಿಎಂಟಿಸಿ ಬಳಿಕ ಈಗ ಕೆಎಸ್ಆರ್ ಟಿಸಿಗೂ ಬರಲಿವೆ ಎಲೆಕ್ಟ್ರಿಕ್ ಬಸ್..! title=
Electric bus (file photo)

ಬೆಂಗಳೂರು : ಬಿಎಂಟಿಸಿ ಬಳಿಕ ಈಗ ಕೆಎಸ್ಆರ್ ಟಿಸಿಗೂ ಕಾಲಿಡಲಿವೆ ಎಲೆಕ್ಟ್ರಿಕ್ ಬಸ್ ಗಳು.  50 ಎಲೆಕ್ಟ್ರಿಕ್ ಬಸ್ ಗಳನ್ನು ಖರೀದಿ ಮಾಡಲು  ಕೆಎಸ್ ಆರ್ ಟಿಸಿ ನಿಗಮ ನಿರ್ಧಾರ ಮಾಡಿದೆ. ಇದಕ್ಕಾಗಿ ಈಗಾಗಲೇ ಟೆಂಡರ್  ಕರೆದಿದ್ದು,  
50 ಎಲೆಕ್ಟ್ರಿಕ್ ಬಸ್ ಗಳಿಗೆ ಆರ್ಡರ್ ಕೂಡಾ ನೀಡಲಾಗಿದೆ. 

ಇನ್ನು ಕೆಲವೇ ದಿನಗಳಲ್ಲಿ  ರಾಜ್ಯಾದ್ಯಂತ  ಎಲೆಕ್ಟ್ರಿಕ್  ಬಸ್ ಗಳು ರಸ್ತೆಗಿಳಿಯಲಿವೆ.  ನಾಲ್ಕು ತಿಂಗಳ ಒಳಗಾಗಿ ರಾಜ್ಯಾದ್ಯಂತ ಎಲೆಕ್ಟ್ರಿಕ್  ಬಸ್ ಗಳು  ಸಂಚರಿಸಲಿವೆ. 50 ಎಲೆಕ್ಟ್ರಿಕ್ ಬಸ್ ಗಳನ್ನು  ಗುತ್ತಿಗೆ ಆಧಾರದಲ್ಲಿ ಖರೀದಿ  ಮಾಡಲು  ಕೆಎಸ್ಆರ್ ಟಿಸಿ ನಿಗಮ ನಿರ್ಧಾರ ಮಾಡಿದೆ. 

ಇದನ್ನೂ ಓದಿ : PSI Recruitment Scam: 'ಬೇರೆ ಪರೀಕ್ಷಾ ಕೇಂದ್ರಗಳಲ್ಲಿಯೂ ತನಿಖೆ ನಡೆಸಬೇಕು'

ಎಲೆಕ್ಟ್ರಿಕ್ ಬಸ್ ಖರೀದಿ ಹಿನ್ನೆಲೆಯಲ್ಲಿ  ಈಗಾಗಲೇ ಡಿಪೋಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಹಾಕಲು ಕೂಡಾ ತೀರ್ಮಾನ ಮಾಡಲಾಗಿದೆ. ಈ ಬಸ್ ಗಳು ನಿತ್ಯ 450 ಕಿಲೋಮೀಟರ್ ಸಂಚಾರ ಮಾಡಲಿವೆ. ಈ ಎಲೆಕ್ಟ್ರಿಕ್ ಬಸ್ ಗಳು 6 ಗಂಟೆ ಜಾರ್ಜ್ ಮಾಡಿದರೆ 250 ಕಿಲೋಮೀಟರ್ ಸಂಚಾರ  ಮಾಡಲಿದೆ. ಪ್ರತಿ ಕಿಲೋಮೀಟರ್ ಗೆ 50 ರೂಪಾಯಿ ದರ ನಿಗದಿ ಮಾಡಲಾಗುವುದು. 

ಬೆಂಗಳೂರಿನಿಂದ ಹಾಸನ, ಮೈಸೂರು, ಕೋಲಾರ,  ಹುಬ್ಬಳ್ಳಿ, ದಾವಣಗೆರೆ, ಶಿವಮೊಗ್ಗ ಭಾಗಗಳಲ್ಲಿ  ಕೆಎಸ್ಆರ್ ಟಿಸಿ ಎಲೆಕ್ಟ್ರಿಕ್ ಬಸ್ ಗಳು ಸಂಚಾರ ಮಾಡಲಿದೆ. ಕೆಎಸ್ಆರ್ ಟಿಸಿ ಬಸ್ ಗಳಿಗೆ ಖಾಸಗಿ ಡ್ರೈವರ್ ಗಳನ್ನು ನೇಮಕ ಮಾಡಲಾಗುವುದು. ಸದ್ಯ 50 ಎಲೆಕ್ಟ್ರಿಕ್ ಬಸ್ ಗಳನ್ನ ಗುತ್ತಿಗೆ ಆಧಾರದಲ್ಲಿ ಖರೀದಿ ಮಾಡಲು ನಿರ್ಧಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಾಂಕಾಂಗ್ ಮೂಲದ  ಕಂಪನಿಯಿಂದ 300 ಎಲೆಕ್ಟಿಕ್ ಖರೀದಿ ಮಾಡಲಾಗುವುದು ಎನ್ನಲಾಗಿದೆ. 

ಇದನ್ನೂ ಓದಿ : ನಾಳೆ IFFCO ನ್ಯಾನೊ ಸ್ಥಾವರಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಗುದ್ದಲಿ ಪೂಜೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News