AICC ಅಧ್ಯಕ್ಷರಾದರೆ ಖರ್ಗೆಗೆ ಕೆಪಿಸಿಸಿಯದ್ದೇ  ಮೊದಲ ದೊಡ್ಡ ಸವಾಲು!

ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ ಬಹುತೇಕ ವಿಜಯ ಸಾಧಿಸುವ ಸಾಧ್ಯತೆ ಇದೆ. AICC ಅಧ್ಯಕ್ಷ ಆದ ನಂತರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆಪಿಸಿಸಿಯ ಸವಾಲು ಚಕ್ರವ್ಯೂಹ ಆಗುವುದು ನಿಶ್ಚಿತವಾಗಿದೆ.

Written by - Prashobh Devanahalli | Last Updated : Oct 17, 2022, 07:50 PM IST
  • ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ
  • ಮಲ್ಲಿಕಾರ್ಜುನ ಖರ್ಗೆ ಬಹುತೇಕ ವಿಜಯ ಸಾಧಿಸುವ ಸಾಧ್ಯತೆ
  • ಲ್ಲಿಕಾರ್ಜುನ ಖರ್ಗೆ ಅವರಿಗೆ ಕೆಪಿಸಿಸಿಯ ಸವಾಲು ಚಕ್ರವ್ಯೂಹ
AICC ಅಧ್ಯಕ್ಷರಾದರೆ ಖರ್ಗೆಗೆ ಕೆಪಿಸಿಸಿಯದ್ದೇ  ಮೊದಲ ದೊಡ್ಡ ಸವಾಲು! title=

ಬೆಂಗಳೂರು : ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ ಬಹುತೇಕ ವಿಜಯ ಸಾಧಿಸುವ ಸಾಧ್ಯತೆ ಇದೆ. AICC ಅಧ್ಯಕ್ಷ ಆದ ನಂತರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೆಪಿಸಿಸಿಯ ಸವಾಲು ಚಕ್ರವ್ಯೂಹ ಆಗುವುದು ನಿಶ್ಚಿತವಾಗಿದೆ.

ಮನೆಯೊಂದು ಮೂರು ಬಾಗಿಲಾಗಿರುವ ಕರ್ನಾಟಕ ಕಾಂಗ್ರೆಸ್ ಒಂದು ಮಾಡುವ ಜೊತೆಗೆ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರುವುದು ಸವಾಲಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಕೆಲ ಹಿರಿಯ ಕೈ ನಾಯಕರು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಇವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯತೆ ಖರ್ಗೆ ಅವರ ಮುಂದಿದೆ.

ಇದನ್ನೂ ಓದಿ : ಕಾರ್‌ ಒನರ್‌ಗಳೇ ಎಚ್ಚರ..! : 3.50 ಕೋಟಿ ಕಾರನ್ನು 42 ಲಕ್ಷಕ್ಕೆ ಮಾರಿದ್ದರಂತೆ ಮೆಕ್ಯಾನಿಕ್ಸ್‌..!

ಕೆಪಿಸಿಸಿ ಬಣಗಳನ್ನ ಒಂದು ಮಾಡಲಾಗುತ್ತಾ?

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಜಿದ್ದಾಜಿದ್ದಿ ಇರುವುದು ಬಹಿರಂಗ ವಿಷಯ. ಉಭಯ ನಾಯಕರನ್ನ ಒಂದು ಮಾಡುವ ಕಾರ್ಯವನ್ನ ಮಲ್ಲಿಕಾರ್ಜುನ ಖರ್ಗೆ ಅವರು ಯಾವ ರೀತಿ ಮಾಡುತ್ತಾರೆ ಹಾಗೂ ಸಫಲ ಆಗುತ್ತಾರ ಎಂಬ ಪ್ರಶ್ನೆ ಪಕ್ಷದ ಕಾರ್ಯಕರ್ತರಲ್ಲಿ ಚರ್ಚೆ ಆಗುತ್ತಿದೆ.

ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಸ್ವತಃ ಖರ್ಗೆ ಅವರೇ "ನಮ್ಮಲ್ಲಿ ಯಾವ ಟೀಂ ಇಲ್ಲ ಕೇವಲ ಕಾಂಗ್ರೆಸ್ ಟೀಂ" ಹೇಳಿರುವ ಹಾಗೆ ಕೆಪಿಸಿಸಿ ಯನ್ನ ಪರಿವರ್ತನೆ ಮಾಡುತ್ತಾರ?

2023 ಚುನಾವಣೆ : ಕರ್ಮಭೂಮಿಯಲ್ಲಿ "ಕೈ " ಅಧಿಕಾರಕ್ಕೆ ತರುತ್ತಾರ?

2023ರ ವಿಧಾನ ಸಭೆಯ ಚುನಾವಣೆಗೆ 7 ತಿಂಗಳು ಬಾಕಿ ಇದೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರ್ನಾಟಕ ಕರ್ಮಭೂಮಿ. ಇವರ ನೇತೃತ್ವದಲ್ಲಿ ಅಥವಾ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತರುವುದು ಅಗತ್ಯವಿದೆ. ಕರ್ಮಭೂಮಿಯಲ್ಲೇ ಸೋತರೆ,ಖರ್ಗೆ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಆಗುವ ಸಾಧ್ಯತೆ ಇವೆ.

ಒಡೆದ ಮನೆ ಎಂಬ ಟೀಕೆಗಳಿಗೆ ಗುರಿಯಾಗಿಳುತ್ತಿರುವ ಕೆಪಿಸಿಸಿಯನ್ನು ಒಂದು ಮಾಡಿ 2023 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುತ್ತಾರ?

ಇದನ್ನೂ ಓದಿ : ಸೋಮಾರಿ ಸಿಬ್ಬಂದಿಯಿಂದ ಖಡಕ್ ಲೇಡಿ ಐಪಿಎಸ್ ಅಧಿಕಾರಿ ಚಾರಿತ್ರ್ಯ ಹರಣಕ್ಕೆ‌ ಯತ್ನ

ಹಿರಿಯ ನಾಯಕರ ವಿಶ್ವಾಸ ಯುವ ನಾಯಕರಿಗೆ ಹೊಂದಾಣಿಕೆ

ರಾಜ್ಯದಲ್ಲಿ ಕೆಲ ಹಿರಿಯ ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದ್ದು ಅವರನ್ನ ಪಕ್ಷದಲ್ಲಿ ಸೂಕ್ತ ಸ್ಥಾನ ಕಲ್ಪಿಸುವ ಜೊತೆಗೆ ಯುವ ನಾಕರಿಗೆ ಹೊಂದಾಣಿಕೆ ಪಾಠ ಮಾಡುವುದು ಅತ್ಯಗತ್ಯ ಇದೆ.

ಈಗಾಗಲೇ ಕಾಂಗ್ರೆಸ್ ಹಿರಿಯ ನಾಯಕರಾದ ಕೆಎಚ್ ಮುನಿಯಪ್ಪ, ಮೋಟಮ್ಮ, ಎಸ್ ಆರ್ ಪಾಟೀಲ್ ಸೇರಿದಂತೆ ಇನ್ನಿತರೇ ನಾಯಕರು ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಪಕ್ಷದಲ್ಲಿ ಸೂಕ್ತ ಸ್ಥಾನ ಸಿಗದೇ ಇರುವ ಕಾರಣ ಪರ್ಯಾಯ ಆಲೋಚನೆ ಮಾಡುತ್ತಿದ್ದಾರೆ.

ಒಟ್ಟಾರೆ, ರಾಷ್ಟ್ರ ರಾಜಕಾರಣದಲ್ಲಿ ಕುಸಿಯುತ್ತಿರುವ ಕಾಂಗ್ರೆಸ್ ಪಕ್ಷವನ್ನ ಬಳಪಡಿಸುವುದು ಖರ್ಗೆ ಅವರಿಗೆ ಅಗ್ನಿ ಪರೀಕ್ಷೆ ಆಗಿದೆ. 2024 ರ ಚುನಾವಣೆ ಅಷ್ಟ್ರಲ್ಲಿ ಕಾಂಗ್ರೆಸ್ ಪ್ರಭಲ ಪಕ್ಷವಾಗಿ ಹೊರಹೋಮ್ಮಬೇಕು. ಈ ಮುನ್ನ ಗುಜರಾತ್, ಹಿಮಾಚಲ್ ಪ್ರದೇಶ ಚುನಾವಣೆ ರಣರಂಗ ಸಿದ್ದವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News