ಜೆಡಿಎಸ್ ಬಿಜೆಪಿ ಮಧ್ಯೆ ಮ್ಯಾಚ್ ಪಿಕ್ಸಿಂಗ್ ಆಗಿದೆ : ಸಲೀಂ ಅಹ್ಮದ್

ಎರಡು ಬಾರಿ ಇಬ್ರಾಹಿಂಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಲಾಯಿತು. 2019 ರಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಕೇಳಿದರು. ಎಸ್.ಆರ್. ಪಾಟೀಲರನ್ನು ತೆಗೆದು ತಮ್ಮನ್ನು ನಾಯಕರನ್ನಾಗಿ ಮಾಡುವಂತೆ ಕೇಳಿದರು.

Written by - Channabasava A Kashinakunti | Last Updated : Mar 12, 2022, 03:45 PM IST
  • ಕರ್ನಾಟಕದಲ್ಲಿ ಕಾಂಗ್ರೆಸ್ ನೆಲಕಚ್ಚಿತ್ತೆಂಬ ಇಬ್ರಾಹಿಂ ಹೇಳಿಕೆ
  • ಸಲೀಂ ಅಹ್ಮದ್ ವಿಚಾರವಾಗಿ ಪ್ರತಿಕ್ರಿಯೆ
  • ಇಬ್ರಾಹಿಂ 2007-08ರಲ್ಲಿ ಪಕ್ಷ ಸೇರಿದ್ದರು
ಜೆಡಿಎಸ್ ಬಿಜೆಪಿ ಮಧ್ಯೆ ಮ್ಯಾಚ್ ಪಿಕ್ಸಿಂಗ್ ಆಗಿದೆ : ಸಲೀಂ ಅಹ್ಮದ್ title=

ಧಾರವಾಡ : ಇಬ್ರಾಹಿಂ 2007-08ರಲ್ಲಿ ಪಕ್ಷ ಸೇರಿದ್ದರು. 2013ರಲ್ಲಿ ಭದ್ರಾವತಿ ಹಾಲಿ ಎಂಎಲ್‌ಎ ತೆಗೆದು ಇಬ್ರಾಹಿಂರಿಗೆ ಕೊಟ್ಟಿದ್ದೆವು. ಫಲಿತಾಂಶ ಏನಾಯ್ತು ಎಲ್ಲರಿಗೂ ಗೊತ್ತು. ಅದಾದ ಬಳಿಕ ಅನೇಕ ಹುದ್ದೆಗಳನ್ನು ಅವರಿಗೆ ನೀಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ನೆಲಕಚ್ಚಿತ್ತೆಂಬ ಇಬ್ರಾಹಿಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ಈ ಕುರಿತು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಲೀಂ ಅಹ್ಮದ್(Saleem Ahmed), ಎರಡು ಬಾರಿ ಇಬ್ರಾಹಿಂಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಲಾಯಿತು. 2019 ರಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಕೇಳಿದರು. ಎಸ್.ಆರ್. ಪಾಟೀಲರನ್ನು ತೆಗೆದು ತಮ್ಮನ್ನು ನಾಯಕರನ್ನಾಗಿ ಮಾಡುವಂತೆ ಕೇಳಿದರು. ಅದು ಸಾಧ್ಯವಿಲ್ಲ ಅಂತಾ ಪಕ್ಷ ಹೇಳಿತು. ಪಾಟೀಲ್ ಪಕ್ಷದ ಹಿರಿಯ ಮುಖಂಡರು, ಅವರನ್ನು ತೆಗೆಯಲು ಸಾಧ್ಯವಿಲ್ಲ ಅಂತಾ ಪಕ್ಷ ಹೇಳಿತು. ಅವತ್ತಿನಿಂದ ಎರಡು ವರ್ಷ ಪಕ್ಷದ ಯಾವುದೇ ಪ್ರಚಾರಕ್ಕೆ ಅವರು ಬರಲೇ ಇಲ್ಲ. ಆದರೂ ಅವರು ಪಕ್ಷ ಬಿಡೋದಿಲ್ಲ ಅನ್ನೋ ವಿಶ್ವಾಸವಿದೆ. ಅವರಿಗೆ ಏನು ಕೊಡಬೇಕೋ ಅದನ್ನೆಲ್ಲ ಕೊಡಲಾಗಿದೆ. ಜೆಡಿಎಸ್ ಬಿಜೆಪಿ ಮಧ್ಯೆ ಮ್ಯಾಚ್ ಪಿಕ್ಸಿಂಗ್ ಆಗಿದೆ. ಅಂತಹ ಜೆಡಿಎಸ್ ಪಕ್ಷಕ್ಕೆ ಶಕ್ತಿ ಕೊಡಲು ಇಬ್ರಾಹಿಂ ಹೋಗಲಾರರು ಎಂದು ಹೇಳಿದರು.  

ಇದನ್ನೂ ಓದಿ : ಸಿದ್ದರಾಮಯ್ಯನವರೇ ಇದು ನಿಮ್ಮ ಕರ್ಮದ ಫಲ: ಕಾಂಗ್ರೆಸ್ ಸೋಲಿಗೆ ಬಿಜೆಪಿ ವ್ಯಂಗ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News