'ಕುಂಬಳಕಾಯಿ ಕಳ್ಳ ಅಂದ್ರೆ ಬಿಜೆಪಿಯವರೇಕೆ ಹೆಗಲು ಮುಟ್ಟಿನೋಡಿಕೊಳ್ಳುತ್ತಿದ್ದಾರೆ?'

ಬಿಜೆಪಿಯ ಕೆಲವರು ಏಕೆ ಹೆಗಲು ಮುಟ್ಟಿನೋಡಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು

Last Updated : Nov 29, 2020, 02:06 PM IST
  • ಬಿಜೆಪಿಯ ಕೆಲವರು ಏಕೆ ಹೆಗಲು ಮುಟ್ಟಿನೋಡಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು
  • ಬಿಜೆಪಿಯವರ ಪ್ರತಿಕ್ರಿಯೆಗಳನ್ನು ನೋಡಿದರೆ ಇದರಲ್ಲಿ ಏನೋ ಇದೆ ಎಂಬುದು ಖಚಿತ
  • ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕವೂ ರಾಜಕೀಯ ಪಕ್ಷವಾಗಿ ನಾವು ಸುಮ್ಮನಿರಲು ಸಾಧ್ಯವೇ ? ಹಾಗಾಗಿ ಮಾತನಾಡಿದ್ದೇನ
'ಕುಂಬಳಕಾಯಿ ಕಳ್ಳ ಅಂದ್ರೆ ಬಿಜೆಪಿಯವರೇಕೆ ಹೆಗಲು ಮುಟ್ಟಿನೋಡಿಕೊಳ್ಳುತ್ತಿದ್ದಾರೆ?' title=

ಉಡುಪಿ: ಖಾಸಗಿ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾನು ಯಾರ ಹೆಸರನ್ನೂ ಪ್ರಸ್ತಾಪ ಮಾಡಿಲ್ಲ. ಆದರೂ ಬಿಜೆಪಿಯ ಕೆಲವರು ಏಕೆ ಹೆಗಲು ಮುಟ್ಟಿನೋಡಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಕರಾವಳಿ ಭಾಗದ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವ ಡಿ.ಕೆ.ಶಿವಕುಮಾರ್(D.K.Shivakumar) ಅವರು, ಇಂದು ಬೆಳಗ್ಗೆ ಕುಂದಾಪುರದಲ್ಲಿರುವ ಮಾಜಿ ಶಾಸಕ ಗೋಪಾಲ್ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿದರು.

ಸಿಎಂ ಸ್ಥಾನದಿಂದ ಬಿಎಸ್‌ವೈ ಇಳಿಸಲು ಹೈಕಮಾಂಡ್‌ ಪ್ಲ್ಯಾನ್..!?

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಇದ್ದ ಮಾಹಿತಿಯನ್ನು ಸಾರ್ವಜನಿಕವಾಗಿ ನಿನ್ನೆ ಬಹಿರಂಗಪಡಿಸಿದ್ದೇನೆ. ಕಳೆದ 2-3 ತಿಂಗಳ ಹಿಂದೆಯೇ ಖಾಸಗಿ ವಿಡಿಯೋದ ವಿಷಯ ನನಗೆ ಬಂದಿತ್ತು. ಅದನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ, ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ ಎಂಬ ವದಂತಿಗಳಿದ್ದವು. ಮೊನ್ನೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಅವರು ಆತ್ಮಹತ್ಯೆಗೆ ಪ್ರಯತ್ನ ಮಾಡಿದ ಬಳಿಕ ನನಗಿದ್ದ ಮಾಹಿತಿಯನ್ನು ಹೇಳಿದ್ದೇನೆ. ಅದಕ್ಕೆ ಬಿಜೆಪಿಯ ಕೆಲ ಸಚಿವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಇವರ್ಯಾಕೆ ತಡಕಾಡಬೇಕೆಂದು ಪ್ರಶ್ನಿಸಿದರು.

ಸದ್ಯಕ್ಕಿಲ್ಲ ಸಂಪುಟ ವಿಸ್ತರಣೆ! ಸಚಿವಾಕಾಂಕ್ಷಿಗಳಿಗೆ ಮತ್ತೆ 'ಶಾಕ್' ನೀಡಿದ ಸಿಎಂ

ನಾನು ಹೆಸರನ್ನೂ ಹೇಳಲಿಲ್ಲ. ಆದರೂ, ಈಶ್ವರಪ್ಪ ಅವರು ಪ್ರತಿಕ್ರಿಯಿಸುತ್ತಿದ್ದಾರೆ. ಬೆಳಗಾವಿಯ ಸಚಿವರೊಬ್ಬರು ಮಾತನಾಡಿದ್ದಾರೆ. ವಿಧಾನಪರಿಷತ್‍ನಲ್ಲಿ ಅನೇಕ ಸದಸ್ಯರಿದ್ದಾರೆ. ಆದರೂ ವಿಧಾನಪರಿಷತ್‍ನ ಒಬ್ಬ ಸದಸ್ಯ ವಿಡಿಯೋವನ್ನು ಹೈಕಮಾಂಡ್ ನಾಯಕರಿಗೆ ತಲುಪಿಸಿದ್ದಾರೆ ಎಂದು ನಾನು ಹೇಳುತ್ತಿದ್ದಂತೆ ಇವರೆಲ್ಲ ಏಕೆ ಮೈಮುಟ್ಟಿಕೊಳ್ಳಬೇಕು ಎಂದರು.

ಡಿಕೆಶಿ ವಿರುದ್ಧ 'ಹೊಸ ಬಾಂಬ್' ಸಿಡಿಸಿದ ಹೆಚ್ ಡಿಕೆ!

ಬಿಜೆಪಿಯವರ ಪ್ರತಿಕ್ರಿಯೆಗಳನ್ನು ನೋಡಿದರೆ ಇದರಲ್ಲಿ ಏನೋ ಇದೆ ಎಂಬುದು ಖಚಿತವಾಗಿದೆ. ಬ್ಲಾಕ್‍ಮೇಲ್ ನಡೆಯುತ್ತಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕವೂ ರಾಜಕೀಯ ಪಕ್ಷವಾಗಿ ನಾವು ಸುಮ್ಮನಿರಲು ಸಾಧ್ಯವೇ ? ಹಾಗಾಗಿ ಮಾತನಾಡಿದ್ದೇನೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿರುವುದು ಸ್ವಾಗತಾರ್ಹ. ನಿಷ್ಪಕ್ಷಪಾತ ತನಿಖೆ ನಡೆಯಲಿ, ಸತ್ಯ ಹೊರ ಬರಲಿ ಎಂದು ಅವರು ಹೇಳಿದರು.

ಮತ್ತೆ ನಾಯಕತ್ವ ಬದಲಾವಣೆಯ ಕೂಗು!? ದಿಲ್ಲಿಯಲ್ಲಿ ಬೀಡುಬಿಟ್ಟ ಬಿಜೆಪಿ ಅತೃಪ್ತರ ತಂಡ!

Trending News