ಸಾಮಾಜಿಕ ಕಳಕಳಿಗೆ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಮಾದರಿ: ಡಿ.ಕೆ.ಶಿವಕುಮಾರ್

ಶ್ರೀ ಗವಿಸಿದ್ದೇಶ್ವರ ಜಾತ್ರೆಯು ಸಾಮಾಜಿಕ ಕಳಕಳಿಗೆ ಮಾದರಿಯಾಗಿದೆ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಹೇಳಿದರು.

Written by - Manjunath N | Last Updated : Jan 28, 2024, 03:49 PM IST
  • ಕೊಪ್ಪಳದ ಗವಿಮಠದ ಇತಿಹಾಸವನ್ನು ಕೇಳಿದ್ದೇನೆ. ಗವಿಮಠಕ್ಕೆ ಎರಡು ಮೂರು ಬಾರಿ ಭೇಟಿ ಕೊಟ್ಟಿದ್ದೇನೆ.
  • ಇಷ್ಟು ದೊಡ್ಡ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂಬ ದೊಡ್ಡ ಅಭಿಲಾಶೆ, ಉತ್ಸಾಯ ಮತ್ತು ನಂಬಿಕೆ ಇತ್ತು.
  • ಈ ವರ್ಷ ಜಾತ್ರೆಯಲ್ಲಿ ಪಾಲ್ಗೊಳ್ಳಲು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರು ಸೇರಿ ಹಲವರಿಂದ ನನಗೆ ಒತ್ತಾಯವಿತ್ತು. ಅದರಂತೆ ರಥೋತ್ಸವದಲ್ಲಿ ಪಾಲ್ಗೊಂಡಿರುವೆ ಎಂದರು.
ಸಾಮಾಜಿಕ ಕಳಕಳಿಗೆ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ ಮಾದರಿ: ಡಿ.ಕೆ.ಶಿವಕುಮಾರ್ title=

ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರೆಯು ಸಾಮಾಜಿಕ ಕಳಕಳಿಗೆ ಮಾದರಿಯಾಗಿದೆ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಹೇಳಿದರು.

ದಕ್ಷಿಣ ಭಾರತದ ಕುಂಬಮೇಳ ಎಂದೇ ಪ್ರಸಿದ್ದಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ-2024 ಪ್ರಯುಕ್ತ ಜನವರಿ 27ರಂದು ಜರುಗಿದ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಕೊಪ್ಪಳದ ಗವಿಮಠದ ಇತಿಹಾಸವನ್ನು ಕೇಳಿದ್ದೇನೆ. ಗವಿಮಠಕ್ಕೆ ಎರಡು ಮೂರು ಬಾರಿ ಭೇಟಿ ಕೊಟ್ಟಿದ್ದೇನೆ. ಇಷ್ಟು ದೊಡ್ಡ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂಬ ದೊಡ್ಡ ಅಭಿಲಾಶೆ, ಉತ್ಸಾಯ ಮತ್ತು ನಂಬಿಕೆ ಇತ್ತು. ಈ ವರ್ಷ ಜಾತ್ರೆಯಲ್ಲಿ ಪಾಲ್ಗೊಳ್ಳಲು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರು ಸೇರಿ ಹಲವರಿಂದ ನನಗೆ ಒತ್ತಾಯವಿತ್ತು. ಅದರಂತೆ ರಥೋತ್ಸವದಲ್ಲಿ ಪಾಲ್ಗೊಂಡಿರುವೆ ಎಂದರು.

ಇಂದಿನ ಶ್ರೀಗಳು ಶ್ರೀಮಠ ಜವಬ್ದಾರಿ ತೆಗೆದುಕೊಂಡಾಗಿನಿಂದ ಪ್ರತಿವರ್ಷ ಹೊಸ-ಹೊಸ ಆಚಾರ ವಿಚಾರಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ಸಾಮಾಜಿಕವಾದ ಬದಲಾವಣೆಗೂ ಸಹ ಹೆಚ್ಚಿನ ಶಕ್ತಿ ತುಂಬುತ್ತಿದ್ದಾರೆ. ಅದಕ್ಕೆ ಸರ್ಕಾರದಿಂದ ಪ್ರೋತ್ಸಾಹಿಸಲು ಸರ್ಕಾರದ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ. ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ವಿಶೇಷವಾದ ಈ ಭಾಗದ ಧಾರ್ಮಿಕ ಚರಿತ್ರೆಯುಳ್ಳ ಒಂದು ಜಾತ್ರೆಯಾಗಿದೆ. ಇದರಲ್ಲಿ ಜನರ ಭಾವನೆ, ಅವರ ನಂಬಿಕೆಗೆ ನಾವು ಜೊತೆಗಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ರಾಜಾ ರಾಮಣ್ಣ: ಭಾರತದ ಅಣುಶಕ್ತಿ ಯುಗದ ನಿರ್ಮಾತೃವಿನ ಸ್ಮರಣೆ

ನವಲಿ ಸಮನಾಂತರ ಜಲಾಶಯಕ್ಕೆ ಸರ್ಕಾರ ಬದ್ಧ: ತುಂಗಭದ್ರ ಜಲಾಶಾಯದ ಹೂಳು ನಿರ್ವಹಣೆಯ ಪರ್ಯಾಯವಾಗಿ ಕೊಪ್ಪಳ ಜಿಲ್ಲೆಯ ನವಲಿಯಲ್ಲಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರವು ಬದ್ಧವಾಗಿದೆ. ಈ ಕುರಿತು ಆಂದ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಮೂರು ಜಿಲ್ಲೆಗಳ ಸಚಿವರು ಸೇರಿ ತೀರ್ಮಾನ ಕೈಗೊಂಡು ಆಂದ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಸಚಿವರಿಗೆ ಪತ್ರ ಬರೆಯುತ್ತೇವೆ. ತುಂಗಭದ್ರ ಜಲಾಶಾಯದಲ್ಲಿನ ಹೂಳಿನಿಂದಾಗ ನಾವು 30ಕ್ಕೂ ಹೆಚ್ಚು ಟಿಎಂಸಿ ನೀರನ್ನು ಕಳೆದುಕೊಳ್ಳುತ್ತಿದ್ದೇವೆ. ತುಂಗಭದ್ರ ಜಲಾಶಯದ ಹೂಳು ತೆಗೆಯುವ ಬದಲು ಸಮನಾಂತರ ಜಲಾಶಯ ಕಟ್ಟುವುದು ಸೂಕ್ತವಾಗಿದೆ. ಸಮನಾಂತರ ಜಲಾಶಯ ನಿರ್ಮಾಣದಿಂದ ಮೂರು ರಾಜ್ಯಗಳಿಗೂ ಅನುಕೂಲ ವಾಗಲಿದೆ. ಈ ಭಾಗದ ಜನರ ಅನುಕೂಲಕ್ಕಾಗಿ ನಮ್ಮ ಬದ್ಧತೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತೇವೆ ಎಂದರು.

ನವಲಿ ಸಮನಾಂತರ ಜಲಾಶಯ ನಿರ್ಮಾಣದ ಬೇಡಿಕೆ ಬಳಷ್ಟು ವರ್ಷಗಳಿಂದ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳು ಅನೇಕ ಬಾರಿ ವಿಧಾನಸಭೆಯಲ್ಲಿ ಪ್ರಸ್ತಾಪನೆ ಮಾಡಿದ್ದಾರೆ. ಇದರ ಬಗ್ಗೆ ಈ ಹಿಂದೆಯೂ ಸಹ ಬಹುದೊಡ್ಡ ಚರ್ಚೆ ನಡೆದಿತ್ತು. ಈಗ ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಡುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಸೇರಿದಂತೆ ಮತ್ತಿತರರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News