ಬೆಂಗಳೂರು: ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರ ಇಂದು ತನ್ನ ಪರಿಮಿತಿ ಮೀರಿ ಬೆಳೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಸದಾಶಿವನಗರದ ರಮಣಶ್ರೀ ಪಾರ್ಕ್‌ನಲ್ಲಿ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಕೆಂಪೇಗೌಡ ಅವರು ಈ ನಾಡು ನಿರ್ಮಾತೃ. ದೇಶದಲ್ಲೆ ಅತಿ ದೊಡ್ಡ ಕೆಂಪೇಗೌಡರ ಪ್ರತಿಮೆಯನ್ನು ಬಿಬಿಎಂಪಿ ವತಿಯಿಂದ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಚಾರ. ಅವರು ನಿರ್ಮಾಣ ಮಾಡಿಕೊಟ್ಟ ನಗರವನ್ನು ಇಂದು ಅದರ ಪರಿಮಿತಿ ಮೀರಿ ಬೆಳೆಸಿದ್ದೇವೆ ಎಂದರು.
ಬೆಂಗಳೂರನ್ನು ಕಟ್ಟಿದ, ನಾಡಪ್ರಭು ಕೆಂಪೇಗೌಡ ಅವರನ್ನು ಮಾದರಿಯನ್ನಾಗಿ ತೆಗೆದುಕೊಂಡು ಈ ನಗರವನ್ನು ಇನ್ನಷ್ಟು ಸುಂದರವಾಗಿ ಮುಂದಿನ ಪೀಳಿಗೆ ಅವರು ಕಾಪಾಡಬೇಕು. ಇವರ ಜಯಂತಿ ಅಂಗವಾಗಿ ಬಿಬಿಎಂಪಿ ವತಿಯಿಂದ ನಿರ್ಮಿಸಿರುವ
ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ಇಂದು ಮೇಕ್ರಿ ವೃತ್ತದ ಬಳಿ ಅನಾವರಣಗೊಳಿಸಿದ್ದು ಖುಷಿ ನೀಡಿದೆ. pic.twitter.com/eyPMLG9cdg— Dr. G Parameshwara (@DrParameshwara) August 16, 2018
ಹಿಂದೆ ಸದಾಶಿವನಗರದಲ್ಲಿ ಗೋಪುರ ಬಿಟ್ಟರೆ ಬೇರೆನೂ ಇರಲಿಲ್ಲ. ನಿರ್ಜನ ಪ್ರದೇಶವಾಗಿತ್ತು. ಈಗ ಇಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಶಾಸಕ ಅಶ್ವತ್ಥನಾರಾಯಣ್, ಮೇಯರ್ ಸಂಪತ್ ರಾಜ್ ಉಪಸ್ಥಿತರಿದ್ದರು.