Karnataka SSLC Result 2023 : ಹತ್ತನೇ ತರಗತಿ ಫಲಿತಾಂಶ ಪ್ರಕಟ !

Karnataka SSLC Result 2023 Declared : 2023 ನೇ ಸಾಲಿನ  10 ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಈ ಕೆಳಗಿನ ಡೈರೆಕ್ಟ್ ಲಿಂಕ್ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು.   

Written by - Ranjitha R K | Last Updated : May 8, 2023, 10:44 AM IST
  • 10 ನೇ ತರಗತಿ ಫಲಿತಾಂಶ ಪ್ರಕಟ
  • ಫಲಿತಾಂಶವನ್ನು ಇಲ್ಲಿ ಪರಿಶೀಲಿಸಿ
 Karnataka SSLC Result 2023 : ಹತ್ತನೇ ತರಗತಿ ಫಲಿತಾಂಶ ಪ್ರಕಟ ! title=

Karnataka SSLC Result 2023 Declared : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2023 ನೇ ಸಾಲಿನ  10 ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿದೆ. ಶಿಕ್ಷಣಾ ಇಲಾಖೆ ಪ್ರಧಾನ ಕಾರ್ಯದರ್ಶಿ  ರಿತೀಶ್ ಸಿಂಗ್  ಅವರಿಂದ ಪ್ರಕಟಿಸಿದ್ದಾರೆ.  ಪ್ರತಿ ಸಲದಂತೆ ಈ ಬಾರಿ ಕೂಡಾ ವಿದ್ಯಾರ್ಥಿನಿಯರದ್ದೆ ಮೇಲು ಗೈ. ಈ ಬಾರಿ 83.89 ಪ್ರತಿಶತ ಫಲಿತಾಂಶ ಬಂದಿದೆ. ನಾಲ್ಕು ವಿದ್ಯಾರ್ಥಿಗಳು  625ರಲ್ಲಿ  625 ಅಂಕಗಳನ್ನು ಪಡೆದುಕೊಂಡಿದ್ದಾರೆ. 

ಚಿತ್ರದುರ್ಗ ಮೊದಲು ಯಾದಗಿರಿ ಕೊನೆ : 

96.8 ಶೇಕಡಾ ಫಲಿತಾಂಶ ಪಡೆದಿರುವ ಚಿತ್ರದುರ್ಗ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದೆ.  96.74ಶೇಕಡಾದೊಂದಿಗೆ ಮಂಡ್ಯ ಜಿಲ್ಲೆ ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನ ಪಡೆದುಕೊಂಡ  ಹಾಸನ ಜಿಲ್ಲೆ 96.8 ಶೇಕಡಾ ಫಲಿತಾಂಶ ಪಡೆದಿದೆ. ಇನ್ನು ಯಾದಗಿರಿ ಜಿಲ್ಲೆ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ. ಈ ಬಾರಿ ಮೂರು ಸಬ್ಜೆಕ್ಟ್ ನಲ್ಲಿ ಗ್ರೇಸ್ ಮಾರ್ಕ್ 10% ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. 

ಇದನ್ನೂ ಓದಿ :  Karnataka SSLC Result 2023: ಇಂದು ಎಸ್ಎಸ್ಎಲ್’ಸಿ ಫಲಿತಾಂಶ ಪ್ರಕಟ: ರಿಸಲ್ಟ್ ಪರಿಶೀಲಿಸಲು ಈ ಲಿಂಕ್ ಕ್ಲಿಕ್ ಮಾಡಿ
 

ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸುವ ದಿನಾಂಕ :

ಛಾಯಾಪತ್ರಿಕೆ- 08-05-23 ರಿಂದ 14-05-23

ಮರು ಮೌಲ್ಯ ಮಾಪನ :  15-05-23 ರಿಂದ 21-05-2023

ಪೂರಕ ಪರೀಕ್ಷೆಯ ನೋಂದಣಿ - 08-05-23 ರಿಂದ 15-05-23ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. 

ಇದನ್ನೂ ಓದಿ : Different Restaurant: ನಗರದ ಮಧ್ಯ ಇರೋ ಜೈಲ್‌ ಯಾವುದಪ್ಪಾ.. ಅಂತ ಶಾಕ್‌ ಆಗ್ಬೇಡಿ.. ಇದು ರೆಸ್ಟೋರೆಂಟ್‌..! ಇದರ ವಿಶೇಷತೆ ಇಲ್ಲಿದೆ ನೋಡಿ

625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳು :

ಈ ಬಾರಿ ನಾಲ್ಕು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ 100 ಶೇ ಫಲಿತಾಂಶ ಸಾಧಿಸಿದ್ದಾರೆ.  ಬೆಂಗಳೂರು, ನ್ಯೂ ಮೆಕಾಲ ಇಂಗ್ಲೀಷ್ ಸ್ಕೂಲ್ ನ ಭೂಮಿಕಾ ಪೈ, ಬಾಲಗಂಗಾಧರನಾಥ ಹೈಸ್ಕೂಲ್ ಚಿಕ್ಕಬಳ್ಳಾಪುರದ ಯಶಸ್ ಗೌಡ, ಕುಮಾರೇಶ್ವರ ಶಾಲೆ ಸವದತ್ತಿ ಅನುಪನಾ ಶ್ರೀಶೈಲ, ಮತ್ತು  ಆಕ್ಸ್ ಫರ್ಡ್ ಇಂಗ್ಲೀಷ್ ಶಾಲೆ ಮುದ್ದೇಬಿಹಾಳದ ಭೀಮನಗೌಡ ಹನುಮಂತಗೌಡ ಪಾಟೀಲ್ 625ಕ್ಕೆ 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ಬಾರಿ 8,35,102 ವಿದ್ಯಾರ್ಥಿಗಳು  ಪರೀಕ್ಷೆ ಬರೆದುಇದ್ದು, ಈ ಪೈಕಿ  7,00,619  ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  

Karnataka SSLC Result 2023 ಅನ್ನು ಹೀಗೆ ಪರಿಶೀಲಿಸಿ : 
1.karresults.nic.in ನಲ್ಲಿ ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ನೀಡಿ
2.ಮುಖ್ಯ ಪುಟದಲ್ಲಿ ‘RESULT’ ಲಿಂಕ್ ಕಾಣಿಸುತ್ತದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
3.ಈಗ, ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಎಂಟರ್ ಮಾಡಿ
4.ಎಲ್ಲಾ ವಿವರಗಳನ್ನು ಸಲ್ಲಿಸಿದ ತಕ್ಷಣ ಫಲಿತಾಂಶ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News