54 ಪತ್ರಕರ್ತರಿಗೆ 2018ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಸೋಮವಾರ ಸಂಜೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ 50ಕ್ಕೂ ಅಧಿಕ ಪತ್ರಕರ್ತರು ಮತ್ತು ಛಾಯಾಗ್ರಾಹಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

Last Updated : Feb 11, 2019, 10:27 PM IST
54 ಪತ್ರಕರ್ತರಿಗೆ 2018ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ title=

ಬೆಂಗಳೂರು: ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ಪತ್ರಕರ್ತರಿಗೆ 2018ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ವಿತರಿಸಿದರು.

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಸೋಮವಾರ ಸಂಜೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ 50ಕ್ಕೂ ಅಧಿಕ ಪತ್ರಕರ್ತರು ಮತ್ತು ಛಾಯಾಗ್ರಾಹಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಬಗ್ಗೆ ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು, ಪತ್ರಿಕೋದ್ಯಮಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಪತ್ರಕರ್ತರ ಪ್ರಾಮಾಣಿಕತೆಯನ್ನು ಸ್ಮರಿಸುವಂತೆ ಮಾಡಿದೆ. ಈ ಪ್ರಶಸ್ತಿಯಿಂದಾಗಿ ಪುರಸ್ಕೃತರು ಮತ್ತಷ್ಟು ಉತ್ತಮ ಕಾರ್ಯ ನಿರ್ವಹಿಸಲು ಪ್ರೋತ್ಸಾಹಿಸಲಿದೆ ಎಂದು ಹೇಳಿದ್ದಾರೆ.

ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ 'ಆಂದೋಲನ', 'ಅಭಿಮಾನಿ', 'ಅರಗಿಣಿ', 'ಮೈಸೂರು ದಿಗಂತ' ಪ್ರಶಸ್ತಿ ಹಾಗೂ ಪತ್ರಕರ್ತ ಕೆ.ಶಿವಕುಮಾರ್‌ ಸ್ಥಾಪಿಸಿರುವ ಡಾ.ಬಿ.ಆರ್‌.ಅಂಬೇಡ್ಕರ್‌ 'ಮೂಕ ನಾಯಕ' ಪ್ರಶಸ್ತಿಗಳು ತಲಾ 10 ಸಾವಿರ ಒಳಗೊಂಡಿವೆ. ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿಯು ಹಿರಿಯ ಪತ್ರಕರ್ತ ಧರ್ಮಾವರಪು ಬಾಲಾಜಿ ಅವರಿಗೆ ದೊರೆತಿದೆ. 

'ವಿಜಯ ಕರ್ನಾಟಕ' ಪತ್ರಿಕೆಯ ಹಾವೇರಿ ವರದಿಗಾರ ರಾಜು ನದಾಫ್‌, 'ಎಕನಾಮಿಕ್ಸ್‌ ಟೈಮ್ಸ್‌' ನ ಭಾನುತೇಜ್‌, 'ಬೆಂಗಳೂರು ಮಿರರ್‌' ಛಾಯಾಗ್ರಾಹಕ ಈಶ್ವರ್‌ ಶಿವಣ್ಣ, ವಿಜಯವಾಣಿ ಸಂಪಾದಕ ಕೆ.ಎನ್‌.ಚನ್ನೇಗೌಡ, ದಿ ಹಿಂದೂ ಪತ್ರಿಕೆಯ ಬಿ.ಎಸ್‌.ಸತೀಶ್‌ ಕುಮಾರ್‌, ಇಂಡಿಯನ್‌ ಎಕ್ಸ್‌ಪ್ರೆಸ್‌ನ ರಾಮು ಪಾಟೀಲ್‌ ಸೇರಿದಂತೆ 51 ಮಂದಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 
 

Trending News