Hijab row:ರಾಜ್ಯ ಸರ್ಕಾರದಿಂದ CFI ಬಗ್ಗೆ ವಿವರಗಳನ್ನು ಕೇಳಿದ ಕರ್ನಾಟಕ ಹೈಕೋರ್ಟ್

Hijab row: ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್ ಬುಧವಾರ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಪಾತ್ರವನ್ನು ರಾಜ್ಯ ಸರ್ಕಾರದಿಂದ ಕೇಳಿದೆ.  

Written by - Zee Kannada News Desk | Last Updated : Feb 23, 2022, 06:14 PM IST
  • ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್
  • ಸಿಎಫ್‌ಐ ಪಾತ್ರವನ್ನು ರಾಜ್ಯ ಸರ್ಕಾರದಿಂದ ಕೇಳಿದೆ
  • ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ
Hijab row:ರಾಜ್ಯ ಸರ್ಕಾರದಿಂದ CFI ಬಗ್ಗೆ ವಿವರಗಳನ್ನು ಕೇಳಿದ ಕರ್ನಾಟಕ ಹೈಕೋರ್ಟ್  title=
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಹಿಜಾಬ್ ಪ್ರಕರಣದ (Hijab Row) ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್ ಬುಧವಾರ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI) ಪಾತ್ರವನ್ನು ರಾಜ್ಯ ಸರ್ಕಾರದಿಂದ ಕೇಳಿದೆ.

ಜನವರಿ 1 ರಂದು ಉಡುಪಿಯ ಕಾಲೇಜೊಂದರ ಹಿಜಾಬ್ (Hijab) ಧರಿಸಿ ತರಗತಿಗೆ ಪ್ರವೇಶ ನಿರಾಕರಿಸಲಾಯಿತು. ಇದಾದ ಬಳಿಕ ಕಾಲೇಜು ಅಧಿಕಾರಿಗಳನ್ನು ವಿರೋಧಿಸಿ ಕರಾವಳಿ ಪಟ್ಟಣದಲ್ಲಿ ಸಿಎಫ್‌ಐ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಇದನ್ನೂ ಓದಿ: "ಅಪ್ಪು ಹೋದಮೇಲೆ ಈ ಹಾಡು ಹಾಡಲು ನನಗೆ ಭಯವಾಗುತ್ತಿದೆ".. ಭಾವುಕರಾದ ಗಾಯಕ ವಿಜಯ್‌ ಪ್ರಕಾಶ್

ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಅದರ ಪ್ರಾಂಶುಪಾಲರು ಮತ್ತು ಶಿಕ್ಷಕರನ್ನು ಪ್ರತಿನಿಧಿಸುವ ಹಿರಿಯ ವಕೀಲ ಎಸ್‌ಎಸ್ ನಾಗಾನಂದ್ ಅವರು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಜೆಎಂ ಖಾಜಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ಪೂರ್ಣ ಪೀಠಕ್ಕೆ, "ಹಿಜಾಬ್ ಪ್ರಕರಣವನ್ನು ಕೆಲವು CFI ಗೆ ನಿಷ್ಠರಾಗಿರುವ ವಿದ್ಯಾರ್ಥಿಗಳು ಪ್ರಾರಂಭಿಸಿದರು" ಎಂದು ಹೇಳಿದರು.

ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು CFI ಏನನ್ನು ಪ್ರತಿನಿಧಿಸುತ್ತದೆ ಮತ್ತು ಅದರ ಪಾತ್ರವೇನು ಎಂದು ತಿಳಿಯಲು ಪ್ರಯತ್ನಿಸಿದರು.

ಸಂಘಟನೆಯು ರಾಜ್ಯದಲ್ಲಿ ಪ್ರತಿಭಟನೆಗಳನ್ನು ಸಂಘಟಿಸುತ್ತಿದೆ ಎಂದು ಹಿರಿಯ ವಕೀಲರು ತಿಳಿಸಿದರು. ಮತ್ತೊಬ್ಬ ವಕೀಲರು ಸಿಎಫ್‌ಐ ಮೂಲಭೂತವಾದಿ ಸಂಘಟನೆಯಾಗಿದ್ದು, ಅದನ್ನು ಕಾಲೇಜುಗಳು ಗುರುತಿಸಿಲ್ಲ ಎಂದರು.

ಇದನ್ನೂ ಓದಿ: ಕುತೂಹಲಕ್ಕೆ ಕಾರಣವಾದ NBK107 ಫಸ್ಟ್ ಲುಕ್! ತೆಲುಗಿನಲ್ಲೂ ರಿಮೇಕ್ ಆಗುತ್ತಿದೆಯಾ 'ಮಫ್ತಿ'?

ಆಗ ಮುಖ್ಯ ನ್ಯಾಯಮೂರ್ತಿ ಅವಸ್ತಿ ಅವರು ರಾಜ್ಯ ಸರ್ಕಾರಕ್ಕೆ ಇದರ ಬಗ್ಗೆ ತಿಳಿದಿದೆಯೇ ಎಂದು ಕೇಳಿದರು. ಅದಕ್ಕೆ ನಾಗಾನಂದ್ ಅವರು ಇಂಟೆಲಿಜೆನ್ಸ್ ಬ್ಯೂರೋಗೆ ತಿಳಿದಿದೆ ಎಂದು ಹೇಳಿದರು.

ಆಗ ಸಿಜೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವಡಗಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸೂಚಿಸಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News