ಮಣಿಪುರ ವಿಷಯ ಬಂದರೆ 56 ಇಂಚಿನ ಎದೆ 16 ಇಂಚಿಗೆ ಇಳಿಯುವುದೇಕೆ?: ಕಾಂಗ್ರೆಸ್

ಚುನಾವಣೆಗಾಗಿ ರಾಜ್ಯಗಳಲ್ಲಿ ತಿಂಗಳುಗಟ್ಟಲೆ ಟೆಂಟ್ ಹಾಕುವ ಇವರು ಬಿಜೆಪಿ ಆಡಳಿತದ ಒಂದು ರಾಜ್ಯ ಸಂಕಷ್ಟ ಎದುರಿಸುತ್ತಿರುವಾಗ ಅತ್ತ ಸುಳಿಯದಿರುವುದೇಕೆ? ಮಣಿಪುರ ವಿಷಯ ಬಂದರೆ 56 ಇಂಚಿನ ಎದೆಯ ಅಳತೆ 16 ಇಂಚಿಗೆ ಇಳಿಯುವುದೇಕೆ? ಎಂದು ಕಾಂಗ್ರೆಸ್ ಕುಟುಕಿದೆ.

Written by - Puttaraj K Alur | Last Updated : Aug 10, 2023, 05:12 PM IST
  • ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಪ್ರಧಾನಿ ಮೋದಿಯವರು ಮಣಿಪುರಕ್ಕೆ ಭೇಟಿ ನೀಡಲಿಲ್ಲ
  • ಮಣಿಪುರಕ್ಕಷ್ಟೇ ಅಲ್ಲ ಸಂಸತ್ತಿಗೆ ಭೇಟಿ ನೀಡುವುದನ್ನೂ ಬಿಜೆಪಿ ನಾಯಕರು ಮರೆತ್ತಿದ್ದಾರೆ
  • ಮಣಿಪುರ ವಿಷಯ ಬಂದರೆ 56 ಇಂಚಿನ ಎದೆಯ ಅಳತೆ 16 ಇಂಚಿಗೆ ಇಳಿಯುವುದೇಕೆ?
ಮಣಿಪುರ ವಿಷಯ ಬಂದರೆ 56 ಇಂಚಿನ ಎದೆ 16 ಇಂಚಿಗೆ ಇಳಿಯುವುದೇಕೆ?: ಕಾಂಗ್ರೆಸ್ title=
ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಆಕ್ರೋಶ!

ಬೆಂಗಳೂರು: ಮಣಿಪುರ ವಿಷಯ ಬಂದರೆ 56 ಇಂಚಿನ ಎದೆಯ ಅಳತೆ 16 ಇಂಚಿಗೆ ಇಳಿಯುವುದೇಕೆ? ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿದೆ.

ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್,  ಗೃಹಸಚಿವರಾಗಿರುವ ಅಮಿತ್ ಶಾ ಮಣಿಪುರಕ್ಕೆ ಭೇಟಿ ನೀಡಲಿಲ್ಲ. ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್ ಮಣಿಪುರಕ್ಕೆ ಭೇಟಿ ನೀಡಲಿಲ್ಲ. ಪ್ರಧಾನಿಯಾಗಿರುವ ನರೇಂದ್ರ ಮೋದಿಯೂ ಮಣಿಪುರಕ್ಕೆ ಭೇಟಿ ನೀಡಲಿಲ್ಲ, ಮಣಿಪುರಕ್ಕಷ್ಟೇ ಅಲ್ಲ ಸಂಸತ್ತಿಗೆ ಭೇಟಿ ನೀಡುವುದನ್ನೂ ಮರೆತಿದ್ದಾರೆ’ ಎಂದು ಟೀಕಿಸಿದೆ.

ಇದನ್ನೂ ಓದಿ: ಸರ್ಕಾರ- ಗುತ್ತಿಗೆದಾರರ ಹಗ್ಗಾಜಗ್ಗಾಟಕ್ಕೆ ಮೊದಲ ಬಲಿ: ಬಿಬಿಎಂಪಿ ಗುತ್ತಿಗೆದಾರ ಆತ್ಮಹತ್ಯೆ!

‘ಚುನಾವಣೆಗಾಗಿ ರಾಜ್ಯಗಳಲ್ಲಿ ತಿಂಗಳುಗಟ್ಟಲೆ ಟೆಂಟ್ ಹಾಕುವ ಇವರು ಬಿಜೆಪಿ ಆಡಳಿತದ ಒಂದು ರಾಜ್ಯ ಸಂಕಷ್ಟ ಎದುರಿಸುತ್ತಿರುವಾಗ ಅತ್ತ ಸುಳಿಯದಿರುವುದೇಕೆ? ಮಣಿಪುರ ವಿಷಯ ಬಂದರೆ 56 ಇಂಚಿನ ಎದೆಯ ಅಳತೆ 16 ಇಂಚಿಗೆ ಇಳಿಯುವುದೇಕೆ?’ ಎಂದು ಕಾಂಗ್ರೆಸ್ ಕುಟುಕಿದೆ.

ಬಾಕಿ ಮೊತ್ತ ಬಿಡುಗಡೆಗೆ ಸರ್ಕಾರ ಬದ್ಧ: ಪ್ರಾಮಾಣಿಕವಾಗಿ ನಡೆದ ಕಾಮಗಾರಿಗಳ ಬಾಕಿ ಮೊತ್ತವನ್ನು ಬಿಡುಗಡೆಗೊಳಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಹೀಗಿದ್ದೂ ಸರ್ಕಾರ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕ್ಷುಲ್ಲಕ ಆರೋಪಗಳನ್ನು ಮಾಡುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಪ್ರಪೋಗಂಡಾಗೆ ಕರ್ನಾಟಕ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘ ಆ ಆರೋಪಗಳನ್ನು ಖಂಡಿಸಿ, ಸರ್ಕಾರದ ನಿರ್ಧಾರದ ಪರವಾಗಿ ನಿಂತಿದ್ದಾರೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ʼಆಕ್ಸೆಸ್‌ ಲೈಫ್‌ʼ ನೆರವು..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News