ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ!

ನಿಗಮ-ಮಂಡಳಿ ನೇಮಕಾತಿ ವಿಚಾರವಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ‘ಹರಾಜು, ಖರೀದಿ, ಮಾರಾಟ, ಇವೆಲ್ಲವೂ ಬಿಜೆಪಿಯ ಪೇಟೆಂಟ್! ಬೇಕಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ಕೇಳಿ ನೋಡಿ ಎಂದು ಟೀಕಿಸಿದೆ.

Written by - Puttaraj K Alur | Last Updated : Nov 23, 2023, 06:56 PM IST
  • ಬಿ.ವೈ.ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ!
  • ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ವಿಜಯೇಂದ್ರರನ್ನು ಒಪ್ಪಿಕೊಳ್ಳಲು ಬಿಜೆಪಿಗರು ತಯಾರಿಲ್ಲ
  • ಬಿಜೆಪಿಯಲ್ಲಿ ದಿನಕ್ಕೊಬ್ಬರು ವಿರೋಧ ಪಕ್ಷದ ವಿರೋಧಿ ನಾಯಕರು ಹುಟ್ಟಿಕೊಳ್ಳುತ್ತಿದ್ದಾರೆ!
ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ! title=
ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕೆ!

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೆ ಕುರಿತು ಮಾಜಿ ಸಚಿವ ಅರವಿಂದ ಲಿಂಬಾವಳಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರರನ್ನು ನಾವು ಅಳೆದು, ತೂಗಿ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ಟೀಕಿಸಿರುವ ಕಾಂಗ್ರೆಸ್ ‘ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ!’ವೆಂದು ವ್ಯಂಗ್ಯವಾಡಿದೆ.

ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿ.ವೈ.ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ! ಆರ್.ಅಶೋಕ್ ಮತ್ತು ವಿಜಯೇಂದ್ರರನ್ನು ಒಪ್ಪಿಕೊಳ್ಳಲು ಬಿಜೆಪಿಗರು ತಯಾರಿಲ್ಲ. ಆರ್.ಅಶೋಕ್ ಅವರೇ, ನೀವು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡುವ ಮೊದಲು ನಿಮ್ಮ ಪಕ್ಷದ ನಾಯಕರ ವಿರುದ್ಧ ಹೋರಾಟ ನಡೆಸಬೇಕಾದ ಸ್ಥಿತಿ ಇದೆ, ದಿನಕ್ಕೊಬ್ಬರು ವಿರೋಧ ಪಕ್ಷದ ವಿರೋಧಿ ನಾಯಕರು ಹುಟ್ಟಿಕೊಳ್ಳುತ್ತಿದ್ದಾರೆ! 6 ತಿಂಗಳು ಸುದೀರ್ಘ ಸರ್ಕಸ್ ನಡೆಸಿದರೂ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅಳೆದು ತೂಗಲು ಸಮಯ ಸಿಗಲಿಲ್ಲವೇ ಬಿಜೆಪಿ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಉಗ್ರರ ವಿರುದ್ಧದ ಕಾದಾಟದಲ್ಲಿ ಹುತಾತ್ಮರಾಗಿದ್ದ ಯೋಧ

ಬಿಜೆಪಿ ಆರೋಪಕ್ಕೆ ತಿರುಗೇಟು

ನಿಗಮ-ಮಂಡಳಿ ನೇಮಕಾತಿ ವಿಚಾರವಾಗಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರೋಪಿಸಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ‘ಹರಾಜು, ಖರೀದಿ, ಮಾರಾಟ, ಇವೆಲ್ಲವೂ ಬಿಜೆಪಿಯ ಪೇಟೆಂಟ್! ಬೇಕಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ಕೇಳಿ ನೋಡಿ. ಬಿಜೆಪಿಯಲ್ಲಿ ಸಿಎಂ ಹುದ್ದೆ ಮಾರಾಟ ಮಾಡಲಾಗಿತ್ತು ಎಂದವರು ಅವರೇ, ನನ್ನನ್ನು ಖರೀದಿಸಲು ಬಂದಿದ್ದರು ಎಂದಿದ್ದೂ ಅವರೇ. ಅಲ್ಲಿಗೆ ಜಗನ್ನಾಥ ಭವನದಲ್ಲಿ ಖರೀದಿ ಮತ್ತು ಮಾರಾಟ ಎರಡೂ ನಡೆಯುತ್ತವೆ ಎನ್ನುವುದು ಸ್ಪಷ್ಟವಾಗಿದೆ. ಅಂದಹಾಗೆ ಎಲೆಕ್ಷನ್ನಲ್ಲಿ ಕಲೆಕ್ಷನ್ ಜೋರಾಗಿತ್ತು ಎನ್ನುವುದು ಚೈತ್ರಾ ಕುಂದಾಪುರ ಪ್ರಕರಣದಿಂದ ತಿಳಿಯುತ್ತದೆ ಅಲ್ಲವೇ ಬಿಜೆಪಿ?’ ಎಂದು ಕುಟುಕಿದೆ.

ಪಾರದರ್ಶಕವಾಗಿ PSI ಮರುಪರೀಕ್ಷೆ

‘ಭ್ರಷ್ಟ ಬಿಜೆಪಿ ಸರ್ಕಾರದ ಕಳ್ಳಾಟದಿಂದ ನಡೆದಿದ್ದ PSI ನೇಮಕಾತಿ ಹಗರಣವು ಯುವ ಸಮುದಾಯದ ಭವಿಷ್ಯಕ್ಕೆ ಕೊಳ್ಳಿ ಇಟ್ಟಿತ್ತು. ಕಾಂಗ್ರೆಸ್ ಪಕ್ಷದ ಹೋರಾಟದಿಂದ ಹಗರಣ ಬೆಳಕಿಗೆ ಬಂದು ಮರುಪರೀಕ್ಷೆ ನಡೆಸುವ ಹಂತಕ್ಕೆ ಬಂದಿದೆ. ಯಾವುದೇ ಅಕ್ರಮಕ್ಕೂ ಆಸ್ಪದವಾಗದಂತೆ ಪಾರದರ್ಶಕವಾಗಿ PSI ಮರುಪರೀಕ್ಷೆ ನಡೆಸಲು ನಮ್ಮ ಸರ್ಕಾರ ಸನ್ನದ್ಧವಾಗಿದೆ. 54 ಸಾವಿರ ಯುವಕರ ಭವಿಷ್ಯವನ್ನು ಉಳಿಸಲು ಪ್ರಾಮಾಣಿಕ ವ್ಯವಸ್ಥೆ ಕಲ್ಪಿಸಲಿದ್ದೇವೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ನರಸೀಪುರ ತಾ.ನ ವಿವಿಧ ಗ್ರಾಮಗಳಲ್ಲಿ ಆನೆ ಪ್ರತ್ಯಕ್ಷ

ಬೀದಿ ಕಾಳಗವಾಗಿವುದು ನಿಶ್ಚಿತ!

‘ಬಿಜೆಪಿಯ ಆಂತರಿಕ ಕಲಹ ಈಗ ಬಹಿರಂಗ ಕಲಹವಾಗಿ ಮಾರ್ಪಟ್ಟಿದೆ, ಮುಂದೆ ಬೀದಿ ಕಾಳಗವಾಗಿವುದು ನಿಶ್ಚಿತ. ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರನ್ನು ಬಿಜೆಪಿಗರು ಒಪ್ಪಿಕೊಳ್ಳಲು ತಯಾರಿಲ್ಲ ಎನ್ನುವುದು ಕನ್ನಡಿಯ ಪ್ರತಿಬಿಂಬದಷ್ಟೇ ಸತ್ಯ. ಈ ಅಸಮಧಾನ ಯಾಕಾಗಿ ಬಿಜೆಪಿ? ಆಯ್ಕೆಯಾದವರು ಅನರ್ಹರು ಎಂದೇ? ಅಥವಾ ಅಸೂಯೆಗಾಗಿಯೇ? ಬಿಜೆಪಿಗರೇ ಬೆಲೆ ಕೊಡದ ವಿಪಕ್ಷ ನಾಯಕನ ಮಾತಿಗೆ ಕಾಂಗ್ರೆಸ್ ಬೆಲೆ ಕೊಡಬೇಕೆ? ಆರ್.ಅಶೋಕ್ ಅವರು ಮೊದಲು ತಮ್ಮ ಪಕ್ಷದವರ ಮೆಚ್ಚುಗೆ ಪಡೆದು ಬರಲಿ, ನಂತರ ಕಾಂಗ್ರೆಸ್ ಬಗ್ಗೆ ಮಾತಾಡಲಿ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News