ಕರ್ನಾಟಕ ಬಜೆಟ್ 2020: ಬಿಎಸ್‌ವೈ ಬಜೆಟ್‌ನಲ್ಲಿ ರೈತರಿಗೆ ಸಿಕ್ಕಿದ್ದೇನು?

ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ಕೃಷಿ ಬಜೆಟ್ ಮಂಡಿಸಿದ್ದಾರೆ.

Written by - Yashaswini V | Last Updated : Mar 5, 2020, 12:19 PM IST
ಕರ್ನಾಟಕ ಬಜೆಟ್ 2020: ಬಿಎಸ್‌ವೈ ಬಜೆಟ್‌ನಲ್ಲಿ ರೈತರಿಗೆ ಸಿಕ್ಕಿದ್ದೇನು? title=

ಬೆಂಗಳೂರು: ನಿರೀಕ್ಷೆಯಂತೆ 2020-21ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತರಿಗೆ ಕೊಡುಗೆ ನೀಡಿದ್ದು ಕೃಷಿ ವಲಯಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ಕೃಷಿ ಬಜೆಟ್ ಮಂಡಿಸಿದ್ದು, ಸಾವಯವ ಕೃಷಿ ಪ್ರೋತ್ಸಾಹಕ್ಕಾಗಿ 200 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದಾರೆ.

 ರೈತರಿಗೆ ಬಿಎಸ್‌ವೈ ಕೊಡುಗೆ:
* ಹೊಸ ಕೃಷಿ ನೀತಿ ಜಾರಿ.
* ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ಯೋಜನೆಗೆ ರಾಜ್ಯದಿಂದ ನೀಡುತ್ತಿದ್ದ 4,000 ರೂ. ಹಣ ಮುಂದುವರಿಕೆ.
* ಸಾವಯವ ಕೃಷಿ ಪ್ರೋತ್ಸಾಹಕ್ಕಾಗಿ 200 ಕೋಟಿ ರೂ. ಮೀಸಲು
* ರೈತರಿಗೆ ಅಧಿಕ ಬಡ್ಡಿ ದರದಿಂದ ಪರಿಹಾರ ನೀಡಲು ಹೊಸ ಯೋಜನೆ.
* ರೈತರು, ಮೀಸುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್.
* ಕೃಷಿ ಭೂಮಿಗೆ ಅನುಕೂಲವಾಗುವಂತೆ ಮಣ್ಣಿನ ಪರೀಕ್ಷೆಗಾಗಿ ಸಂಚಾರಿ ಹೆಲ್ತ್ ಕ್ಲಿನಿಕ್.
* ಎತ್ತಿನಹೊಳೆ ಯೋಜನೆಗೆ ಆದ್ಯತೆ. ಪ್ರಾಯೋಗಿಕ ಚಾಲನೆಗಾಗಿ 1,500 ಕೋಟಿ ರೂ. ನೆರವು.
* ಮಹಾದಾಯಿ ಯೋಜನೆಗೆ 500 ಕೋಟಿ ರೂ. ಅನುದಾನ
* ಸಿರಿಧಾನ್ಯ ಬೆಳೆಯಲು ಪ್ರತಿ ಹೆಕ್ಟೇರ್ ಗೆ 10,000 ರೂ.ನಂತೆ ಪ್ರೋತ್ಸಾಹ ಧನ
* ನೀರಿನಲ್ಲಿ ಕರಗುವ ಗೊಬ್ಬರ, ಸೂಕ್ಷ್ಮ ಪೋಷಕಾಂಶಗಳ ಮಾಹಿತಿ ಮತ್ತು ಸಂಪನ್ಮೂಲಗಳನ್ನು ರೈತರಿಗೆ ಒದಗಿಸಲಾಗುವುದು.
* ನೀರು ಮತ್ತು ಗೊಬ್ಬರದ ವೈಜ್ಞಾನಿಕ ಬಳಕೆಗೆ ಕ್ರಮ.
* ಆಹಾರ ಸಂಸ್ಕರಣಾ ಘಟಕಗಳಿಗೆ ಆದ್ಯತೆ
* ತೋಟಗಾರಿಕೆ ಬೆಳೆಗಳ ಸುಗಮ ನಿರ್ವಹಣೆಗಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 5000 ಮೆಟ್ರಿಕ್ ಟನ್ ಸಾಮರ್ಥ್ಯದ 10 ಶೀತಲಗೃಹ ಸ್ಥಾಪನೆ.
* ಅಡಿಕೆ ಬೆಳೆಗಾರರ ಪ್ರಾಥಮಿಕ ಸಹಕಾರ ಸಂಘಗಳಿಗೆ 2 ಲಕ್ಷದವರೆಗಿನ ಸಾಲಕ್ಕೆ 5% ಬಡ್ಡಿ ವಿನಾಯಿತಿ.

 

 

Trending News