ಹಿಂದೂ ಯುವತಿಯರು ಶೌಚಾಲಯದಲ್ಲಿರುವಾಗ ವಿಡಿಯೋ ಮಾಡುವುದು ಅಪರಾಧ ಅಲ್ಲವೇ?: ಬಿಜೆಪಿ

ರಾಜ್ಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿರುವ ಉಡುಪಿಯ ಕಾಲೇಜಿನ ಶೌಚಗೃಹದಲ್ಲಿ ಹಿಂದೂ ಯುವತಿಯರ ಅರೆನಗ್ನ ವಿಡಿಯೋ ಸೆರೆ ಹಿಡಿದಿರುವ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Written by - Puttaraj K Alur | Last Updated : Jul 26, 2023, 03:12 PM IST
  • ಉಡುಪಿಯ ಅಮಾನುಷ ಘಟನೆಯನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕಲು ಸಕಲ ಪ್ರಯತ್ನ ನಡೆಸುತ್ತಿದೆ
  • ಪೊಲೀಸರು ಎರಡೆರಡು ಹೇಳಿಕೆ ನೀಡಲು ಅಧಿಕಾರಿಗಳ ಮೇಲೆ ಒತ್ತಡ ಹಾಕಿದ ಕಾಣದ ಕೈಗಳು ಯಾವುವು..?
  • ಹಿಂದೂ ಯುವತಿಯರು ಶೌಚಾಲಯದಲ್ಲಿರುವಾಗ ವಿಡಿಯೋ ಮಾಡುವುದು ಅಪರಾಧ ಅಲ್ಲವೇ..?
ಹಿಂದೂ ಯುವತಿಯರು ಶೌಚಾಲಯದಲ್ಲಿರುವಾಗ ವಿಡಿಯೋ ಮಾಡುವುದು ಅಪರಾಧ ಅಲ್ಲವೇ?: ಬಿಜೆಪಿ title=

ಬೆಂಗಳೂರು: ರಾಜ್ಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿರುವ ಉಡುಪಿಯ ಕಾಲೇಜಿನ ಶೌಚಗೃಹದಲ್ಲಿ ಹಿಂದೂ ಯುವತಿಯರ ಅರೆನಗ್ನ ವಿಡಿಯೋ ಸೆರೆ ಹಿಡಿದಿರುವ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

#SaveOurDaughters ಹ್ಯಾಶ್‍ಟ್ಯಾಗ್ ಬಳಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ದೇಶವೇ ತಲೆ ತಗ್ಗಿಸುವಂತಹ ಉಡುಪಿಯ ಅಮಾನುಷ ಘಟನೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕಲು ಎಲ್ಲಾ ರೀತಿಯ ಸಕಲ ಪ್ರಯತ್ನ ನಡೆಸುತ್ತಿದೆ. ತನ್ನ ಒಲೈಕೆ ರಾಜಕಾರಣಕ್ಕಾಗಿ ಹಿಂದೂ ವಿದ್ಯಾರ್ಥಿನಿಯರ ಮೇಲೆ ನಡೆದ ಮಾನಹರಣದ ಸಾಕ್ಷ್ಯಗಳನ್ನು ಪೊಲೀಸರ ಮೇಲೆ ಒತ್ತಡ ಹೇರಿ ತುಘಲಕ್ ಸರ್ಕಾರ ತಿರುಚುತ್ತಿದೆ’ ಎಂದು ಟೀಕಿಸಿದೆ.

ಇದನ್ನೂ ಓದಿ: ಅರಿಶಿನ ಗುಂಡಿಯಲ್ಲಿ ಯುವಕ ನೀರುಪಾಲು ಪ್ರಕರಣ: SDRF ಜೊತೆ ಕಾರ್ಯಾಚರಣೆಗಿಳಿದ ಜ್ಯೋತಿರಾಜ್‌

‘ಜಿಹಾದಿ ಮನಸ್ಥಿತಿಯ ಮೂವರು ವಿದ್ಯಾರ್ಥಿನಿಯರ ದುರ್ವರ್ತನೆ ಬಗ್ಗೆ ಕಾಲೇಜು ಆಡಳಿತ ಮಂಡಳಿ ಮತ್ತು ಪೊಲೀಸರು ಈ ಮೊದಲೇ ಒಪ್ಪಿಕೊಂಡು ಅಮಾನತು ಮಾಡಲಾಗಿತ್ತು. ಆದರೆ 24 ಗಂಟೆಗಳ ನಂತರ ಪ್ರಕರಣಕ್ಕೆ ಹೊಸ ತಿರುವನ್ನೇ ಕೊಡಲಾಗಿದ್ದು, ಈಗ ಈ ವಿಡಿಯೋಗಳು ಎಲ್ಲಿಯೂ ಹರಿದಾಡಿಯೇ ಇಲ್ಲ ಎಂದು, ವಿಡಿಯೋ ಮಾಡಿದ್ದು "ಮಕ್ಕಳಾಟ"ಕ್ಕಾಗಿ ಎಂದು ಈ ಕೇಸ್‌ ಅನ್ನು ತರಾತುರಿಯಲ್ಲಿ ಮುಚ್ಚಿ ಹಾಕಲಾಗುತ್ತಿದೆ. 24 ಗಂಟೆಯಲ್ಲೇ ಪೊಲೀಸರು ಎರಡೆರಡು ಹೇಳಿಕೆ ನೀಡಲು ಅಧಿಕಾರಿಗಳ ಮೇಲೆ ಒತ್ತಡ ಹಾಕಿದ ಕಾಣದ ಕೈಗಳು ಯಾವುವು..?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಹಿಂದೂ ವಿದ್ಯಾರ್ಥಿನಿಯರ ವಿಡಿಯೋ ಆಗಿಲ್ಲ ಹೀಗಾಗಿ ಇದು ಅಪರಾಧವಲ್ಲ ಎಂದು ಸಿಎಂ ಸಿದ್ದರಾಮಯ್ಯನವರ ಸರ್ಕಾರ ಪೊಲೀಸರ ಮೇಲೆ ಒತ್ತಡ ಹಾಕಿ ಈ ಪ್ರಕರಣಕ್ಕೆ ತಿಲಾಂಜಲಿ ಇಡುತ್ತಿದೆ. ಹಿಂದೂ ಯುವತಿಯರು ಶೌಚಾಲಯದಲ್ಲಿರುವಾಗ ವಿಡಿಯೋ ಮಾಡುವುದು ಅಪರಾಧ ಅಲ್ಲವೇ..? ಚಿತ್ರೀಕರಿಸಿರುವ ವಿಡಿಯೋ ಇಲ್ಲವೇ ಇಲ್ಲ ಎಂದು ಮೊಬೈಲ್‌ಗಳನ್ನು ಫೋರೆನ್ಸಿಕ್ ಲ್ಯಾಬ್‌ಗೆ ಏಕೆ ಒಳಪಡಿಸಲಿಲ್ಲ.?’ ಎಂದು ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: ಕಾರ್ಗಿಲ್ ವಿಜಯ್ ದಿವಸ್: ಹುತಾತ್ಮರಾದ ಯೋಧರಿಗೆ ರಾಜನಾಥ್‌ ಸಿಂಗ್‌ ಪುಷ್ಪ ನಮನ

‘ಪ್ರಕರಣದ ನಿಜವಾದ ಅಪರಾಧಿಗಳನ್ನು ಬಂಧಿಸಿ ಸಮಗ್ರ ತನಿಖೆ ಮಾಡಿ ಇದರ ಹಿಂದಿರುವ ಕಾಣದ ಕೈಗಳು ಯಾವುವು ಎನ್ನುವುದನ್ನು ಪೊಲೀಸರಿಂದ ಪತ್ತೆ ಮಾಡಿಸುವುದರಲ್ಲಿ ಸರ್ಕಾರ ವೈಫಲ್ಯವೆಸಗಿದೆ. ಆ ವಿಡಿಯೋ ಸಮಾಜಘಾತುಕರ ಕೈಗೆ ಸಿಕ್ಕಿ ಮುಂದೆ ನಡೆಯಬಹುದಾದ ಅನಾಹುತಗಳನ್ನು ತಡೆಯುವುದರಲ್ಲೂ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕೀಯಕ್ಕಾಗಿ, ಜಿಹಾದಿ ಮನಸ್ಥಿತಿಗಳನ್ನು ರಕ್ಷಣೆ ಮಾಡುವುದಕ್ಕಾಗಿ ಈ ಪ್ರಕರಣವನ್ನು ಜಗತ್ತಿಗೆ ಬಯಲು ಮಾಡಿದ ಹಿಂದೂ ಯುವತಿಯ ಮನೆಗೆ ರಾತ್ರೋ ರಾತ್ರಿ ಪೊಲೀಸರನ್ನು ನುಗ್ಗಿಸಿ ಕಿರುಕುಳ ನೀಡುವ ಕೆಲಸ ಮಾಡಿದೆ. ರಾಜ್ಯ ಸರ್ಕಾರ ಸಂಪೂರ್ಣವಾಗಿ ಪ್ರಕರಣವನ್ನು ಹಳ್ಳ ಹಿಡಿಸುವ ಕೆಲಸಕ್ಕೆ ಕೈ ಹಾಕಿರುವುದರಿಂದ ಈಗ ರಾಷ್ಟ್ರೀಯ ಮಹಿಳಾ ಆಯೋಗ ಖುದ್ದು ತನಿಖೆಗೆ ಇಳಿದಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ರಾಜ್ಯದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಪುಂಖಾನುಪುಂಖವಾಗಿ ಪುಂಗಿ ಊದುವ ಸಿದ್ದರಾಮಯ್ಯನವರ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎರಚುವ ಕೆಲಸ ಮಾಡುತ್ತಿದೆ. ಒಂದು ಕಡೆ ಹಿಂದೂ ಯುವತಿಯರ ಮೇಲೆ ನಡೆದ ದೌರ್ಜನ್ಯಗಳನ್ನು ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದರೆ, ಮತ್ತೊಂದಡೆ ಜಿಹಾದಿ ಮನಸ್ಥಿತಿಯ ಸಮಾಜಘಾತುಕರನ್ನು ರಕ್ಷಣೆ ಮಾಡಿ ಪ್ರೋತ್ಸಾಹ ನೀಡುತ್ತಿರುವುದು ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬಹುದೊಡ್ಡ ಅಪಾಯ..!’ ಎಂದು ಬಿಜೆಪಿ ಕುಟುಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News