ಬೆಂಗಳೂರು: ಅವಾಸ್ತವಿಕ ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ರಾಜ್ಯದ ಜನರನ್ನು ಬೀದಿಗೆ ತಂದು ನಿಲ್ಲಿಸಿದೆ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳ ವಿರುದ್ಧ ಕಿಡಿಕಾರಿದೆ.
‘ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಯ ಅಪ್ರಬುದ್ಧ ಜಾರಿಯಿಂದ ವಿದ್ಯಾರ್ಥಿಗಳು, ಚಾಲಕರು ಕಂಗೆಟ್ಟು ಹೋಗಿದ್ದಾರೆ, ಅತ್ತೆ-ಸೊಸೆ ನಡುವೆ ಕಂದಕ ಸೃಷ್ಟಿಯಾಗಿದೆ. ಸಿದ್ದರಾಮಯ್ಯನವರೇ, ತುಘಲಕ್ ದರ್ಬಾರಿನ ವಿರುದ್ಧ ಸ್ವಾಭಿಮಾನಿ ಕನ್ನಡಿಗರು ಭುಗಿಲೆದ್ದಿದ್ದಾರೆ’ ನೋಡಿ ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಹಂಚಿಕೊಂಡಿದೆ.
ಇದನ್ನೂ ಓದಿ: ಸಿದ್ದು ಸರ್ಕಾರದಲ್ಲಿ ಸಚಿವರು - ಶಾಸಕರ ಲೆಟರ್ ವಾರ್..!
ಅವಾಸ್ತವಿಕ ಗ್ಯಾರಂಟಿಗಳ ಮೂಲಕ @INCKarnataka ರಾಜ್ಯದ ಜನರನ್ನು ಬೀದಿಗೆ ತಂದು ನಿಲ್ಲಿಸಿದೆ.
ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಯ ಅಪ್ರಬುದ್ಧ ಜಾರಿಯಿಂದ ವಿದ್ಯಾರ್ಥಿಗಳು, ಚಾಲಕರು ಕಂಗೆಟ್ಟು ಹೋಗಿದ್ದಾರೆ, ಅತ್ತೆ ಸೊಸೆ ನಡುವೆ ಕಂದಕ ಸೃಷ್ಟಿಯಾಗಿದೆ.@siddaramaiah ರವರೇ, ತುಘಲಕ್ ದರ್ಬಾರಿನ ವಿರುದ್ಧ ಸ್ವಾಭಿಮಾನಿ ಕನ್ನಡಿಗರು… pic.twitter.com/AyVC6cI0N6
— BJP Karnataka (@BJP4Karnataka) July 30, 2023
ಬೆಳಗಾವಿಯ ಅಥಣಿ ತಾಲೂಕಿನ ಅವರಖೋಡ ಗ್ರಾಮದಲ್ಲಿನ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಸಾರ್ವಜನಿಕರಿಂದ 100 ರೂ. ಪಡೆಯತ್ತಿದ್ದು, ಇದನ್ನು ಪ್ರಶ್ನಿಸಿದ ಜನರ ಮೇಲೆಯೇ ದರ್ಪ ಮೆರೆಯುತ್ತಿರುವ ಸುದ್ದಿ ಹಂಚಿಕೊಂಡಿರುವ ಬಿಜೆಪಿ, ‘ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ರಾಜ್ಯಾದ್ಯಂತ ಹಾಡುಹಗಲೇ ಹಣ ಪಡೆಯಲಾಗುತ್ತಿದೆ. ಕಾಂಗ್ರೆಸ್‌ಗೆ ವೋಟು ಹಾಕಿದ ತಪ್ಪಿಗೆ, ಈಗ ರಾಜ್ಯದ ಮಹಿಳೆಯರು ಗೃಹಲಕ್ಷ್ಮಿ ಗಾರಂಟಿಯ ಹಣ ಪಡೆಯಲು ಹಣ ನೀಡಬೇಕಾದ ಪರಿಸ್ಥಿತಿ ಬಂದಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ರಾಜ್ಯದ #ATMSarkara ದ ಮೌನವ್ರತ ಇನ್ನೂ ಮುಗಿದಿಲ್ಲ’ವೆಂದು ಟೀಕಿಸಿದೆ.
ಹಿಂದೂ ವಿರೋಧಿ ನೀತಿ!
ರಾಜಸ್ಥಾನದಲ್ಲಿ ತನ್ನ ಅಂತಿಮ ದಿನಗಳನ್ನು ಎದುರು ನೋಡುತ್ತಿರುವ ಕಾಂಗ್ರೆಸ್ ಸರ್ಕಾರ ತನ್ನ ಹಿಂದೂ ವಿರೋಧಿ ನೀತಿಯನ್ನು ಮುಂದುವರೆಸಿದೆ. ಹಿಂದೂ ವಿರೋಧಿ ನೀತಿಗಳನ್ನು ರಾಜಸ್ಥಾನ ಸರ್ಕಾರ ಸಿಎಂ ಸಿದ್ದರಾಮಯ್ಯರವರನ್ನು ನೋಡಿ ಕಲಿತಿದಿಯೋ ಅಥವಾ ಸಿದ್ದರಾಮಯ್ಯರವರು ರಾಜಸ್ಥಾನ ಸರ್ಕಾರವನ್ನು ನೋಡಿ ಕಲಿತಿದ್ದಾರೋ..?’ ಎಂದು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: KPSC Recruitment 2023: ಕೆಪಿಎಸ್‍ಸಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.