ಡಬಲ್ ಸ್ಟೇರಿಂಗ್ ಕಾಂಗ್ರೆಸ್ ಸರ್ಕಾರದ ಗೋಳಿನ ಧಾರಾವಾಹಿ ಇನ್ನೂ ನಿಂತಿಲ್ಲ: ಬಿಜೆಪಿ ವ್ಯಂಗ್ಯ

Karnataka BJP Slams Congress Government: ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಂಪೂರ್ಣ ಬಹುಮತ ಬಂದರೂ ಮುಖ್ಯಮಂತ್ರಿಯ ಆಯ್ಕೆಗೆ ಹೈಡ್ರಾಮಾ ನಡೆಸುವ ಮೂಲಕ ಆರಂಭಗೊಂಡ ಕಾಂಗ್ರೆಸ್‌ನ ಈ ಗೋಳಿನ ಧಾರಾವಾಹಿ ಇನ್ನೂ ನಿಂತಿಲ್ಲ’ವೆಂದು ವ್ಯಂಗ್ಯವಾಡಿದೆ.

Written by - Puttaraj K Alur | Last Updated : Jul 28, 2023, 01:27 PM IST
  • ಸಿದ್ದರಾಮಯ್ಯ & ಡಿಕೆಶಿ ಅವರ ಡಬಲ್ ಸ್ಟೇರಿಂಗ್ ಸರ್ಕಾರವು ಅವಾಸ್ತವಿಕ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದಿದೆ
  • ಅಧಿಕಾರ ಹಿಡಿದ ದಿನದಿಂದಲೂ ಒಳಜಗಳದಲ್ಲಿ ನಿರತವಾಗಿ ರಾಜ್ಯದ ಆಡಳಿತ ಚಕ್ರವನ್ನು ಗೊಂದಲದ ಗೂಡನ್ನಾಗಿಸಿದೆ
  • ಸಿಎಂ ಆಯ್ಕೆಗೆ ಹೈಡ್ರಾಮಾ ನಡೆಸುವ ಮೂಲಕ ಆರಂಭಗೊಂಡ ಕಾಂಗ್ರೆಸ್‌ನ ಈ ಗೋಳಿನ ಧಾರಾವಾಹಿ ಇನ್ನೂ ನಿಂತಿಲ್ಲ
ಡಬಲ್ ಸ್ಟೇರಿಂಗ್ ಕಾಂಗ್ರೆಸ್ ಸರ್ಕಾರದ ಗೋಳಿನ ಧಾರಾವಾಹಿ ಇನ್ನೂ ನಿಂತಿಲ್ಲ: ಬಿಜೆಪಿ ವ್ಯಂಗ್ಯ  title=
ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕೆ

ಬೆಂಗಳೂರು: ಅವಾಸ್ತವಿಕ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಡಬಲ್ ಸ್ಟೇರಿಂಗ್ ಸರ್ಕಾರ, ಅಧಿಕಾರ ಹಿಡಿದ ದಿನದಿಂದಲೂ, ಒಳಜಗಳದಲ್ಲಿ ನಿರತವಾಗಿ, ರಾಜ್ಯದ ಆಡಳಿತ ಚಕ್ರವನ್ನು ಗೊಂದಲದ ಗೂಡನ್ನಾಗಿಸಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಂಪೂರ್ಣ ಬಹುಮತ ಬಂದರೂ ಮುಖ್ಯಮಂತ್ರಿಯ ಆಯ್ಕೆಗೆ ಹೈಡ್ರಾಮಾ ನಡೆಸುವ ಮೂಲಕ ಆರಂಭಗೊಂಡ ಕಾಂಗ್ರೆಸ್‌ನ ಈ ಗೋಳಿನ ಧಾರಾವಾಹಿ ಇನ್ನೂ ನಿಂತಿಲ್ಲ’ವೆಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ: ವರ್ಗಾವಣೆ ವಿಚಾರವಾಗಿ ಶಾಸಕರ ತೀವ್ರ ಅಸಮಾಧಾನ

‘ಸಿಎಂ ಮತ್ತು ಡಿಸಿಎಂ ಜೊತೆಗೆ ಪ್ರಮಾಣವಚನ ಸ್ವೀಕರಿಸುವ ಸಚಿವರುಗಳು ಯಾರು ಎಂಬುದಕ್ಕೆ ಸಹ ಪುನಃ ತೂ ತೂ ಮೈ ಮೈ ನಡೆಸಿಕೊಂಡು, ನೀ ಕೊಡೆ, ನಾ ಬಿಡೆ ಎಂಬಂತೆ ಪ್ರಮಾಣವಚನ ಸಂದರ್ಭ ‌ಸಹ ಗೊಂದಲದಲ್ಲಿಯೇ ನಡೆದು ಹೋಯಿತು. ಇನ್ನು ಮಂತ್ರಿಮಂಡಲ ರಚನೆ ಸಂದರ್ಭದಲ್ಲಿಯೂ ಸಹ ಡಿಕೆಶಿ ಬಣದ ಹಿಂದುಳಿದ ವರ್ಗದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ತೀವ್ರ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಶಾಸಕರಲ್ಲದ ಎನ್.ಎಸ್. ಬೋಸರಾಜುಗೆ ಮಂತ್ರಿಪಟ್ಟ ಕಟ್ಟಿ, ಡಿಕೆಶಿ ಅವರ ಆಪ್ತರು ಸಚಿವ ಸಂಪುಟದಲ್ಲಿ ಇರದಂತೆ ಮಾಡಿದರು’ ಎಂದು ಬಿಜೆಪಿ ಟೀಕಿಸಿದೆ.

‘ಸ್ಪೀಕರ್ ಆಯ್ಕೆಯಲ್ಲಿಯೂ ಗೊಂದಲಮಯ ವಾತಾವರಣವನ್ನು ನಿರ್ಮಿಸಿ, ಅಲ್ಲಿಯೂ ಸಹ ಬಣಗಳ ಮೇಲಾಟ ನಿರ್ಮಾಣವಾಯಿತು. ಆ ಬಳಿಕ ಸಚಿವ ಎಂ.ಬಿ.ಪಾಟೀಲ್ ಅವರು ಸಿದ್ದರಾಮಯ್ಯ 5 ವರ್ಷದ ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಹೇಳಿಕೆ ನೀಡಿದರು ಎಂಬ ಕಾರಣಕ್ಕೆ, ವಿಧಾನಸೌಧ ಎಂಬುದನ್ನು ಸಹ ನೋಡದೇ, ಡಿಕೆಶಿ ಬಣ ಹಾಗೂ ಸಿದ್ದರಾಮಯ್ಯ ಬಣ ಪರಸ್ಪರ ನಿಂದಿಸಿಕೊಂಡು, ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ ಎಂಬುದನ್ನು ರಾಜ್ಯಕ್ಕೆ ತೋರಿತ್ತು’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಡ್ಯಾಂ ಗಳಲ್ಲಿ ಇಂದಿನ ನೀರಿನ ಪ್ರಮಾಣ... ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..!

‘ಆ ನಂತರ ಸರ್ಕಾರ ಆರಂಭಿಸಿದ ವರ್ಗಾವಣೆ ದಂಧೆಯಲ್ಲಿ ಶ್ಯಾಡೋ ಸಿಎಂ ಯತೀಂದ್ರ ಸಿದ್ದರಾಮಯ್ಯರ ಹಸ್ತಕ್ಷೇಪದಿಂದ, ಡಿಸಿಎಂ ಸೇರಿದಂತೆ ಸಚಿವರು ಸಿಎಂ ವಿರುದ್ಧ ತಿರುಗಿಬಿದ್ದು ಅಸಮಾಧಾನ ತೋರಿದ್ದರು. ಸರ್ಕಾರಕ್ಕೆ 2 ತಿಂಗಳು ತುಂಬುವುದರೊಳಗೆ ಸಚಿವರ ದುರ್ವರ್ತನೆ ವಿರುದ್ಧ ಶಾಸಕರೇ ಸಿಎಂಗೆ ಪತ್ರ ಬರೆದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ವರ್ಗದ ಬಿ.ಕೆ.ಹರಿಪ್ರಸಾದ್, ನನಗೆ ಸಿಎಂ ಮಾಡುವುದು ಗೊತ್ತು, ಇಳಿಸುವುದೂ ಗೊತ್ತು ಎಂದು ಹರಿಹಾಯ್ದಿದ್ದಾರೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಹೊರಗಡೆ ಕೈ-ಕೈ ಹಿಡಿದು ಫೋಟೋಗಳಿಗೆ ಫೋಸು ಕೊಡುವವರು, ಒಳಗಡೆ ಪರಸ್ಪರ ಮುಖವನ್ನೂ ನೋಡಿಕೊಳ್ಳದ ಹಂತಕ್ಕೆ ಕಾಂಗ್ರೆಸ್ ನಾಯಕರು ತಲುಪಿದ್ದಾರೆ. ಇವರ ಕೈಗೆ ಅಧಿಕಾರ ನೀಡಿದ ತಪ್ಪಿಗೆ, ಕರ್ನಾಟಕದ ಮತದಾರ ಕಣ್ಣೀರಿನಲ್ಲಿ 'ಕೈ' ತೊಳೆಯುವಂತಾಗಿದೆ. ರಾಜ್ಯದ ಅಭಿವೃದ್ಧಿ ಹಳ್ಳ ಹಿಡಿಯುತ್ತಿದೆ’ ಎಂದು ಬಿಜೆಪಿ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News