ಬಿಜೆಪಿಯಿಂದ ಮಜವಾದಿ ಸಿದ್ದರಾಮಯ್ಯ ಸರ್ಕಾರದ ಮೋಜು ಮಸ್ತಿಗಳ ಪಟ್ಟಿ ಬಿಡುಗಡೆ!

ಕಲೆಕ್ಷನ್ ಮಾಸ್ಟರ್ಸ್‌ಗಳ #ATMSarkara‌ಕ್ಕೆ ರಾಜ್ಯದ ಹತ್ತು ಹಲವು ಸಮಸ್ಯೆಗಳಿಗಿಂತ ತೆಲಂಗಾಣದಲ್ಲಿ ಚುನಾವಣೆ ಪ್ರಚಾರ ಮಾಡಿ, ಹಣ ಕೊಟ್ಟು, ಪಾರ್ಟಿ ಮಾಡಿಕೊಂಡು ಬರುವುದೇ ಮುಖ್ಯವಾಗಿದೆ ಎಂದು ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Nov 10, 2023, 10:05 PM IST
  • ಮಜವಾದಿ ಸಿಎಂ ಸಿದ್ದರಾಮಯ್ಯರ ಸರ್ಕಾರದ ಮೋಜು ಮಸ್ತಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ
  • ‘ಕೈ’ ಸರ್ಕಾರ ಕರುನಾಡನ್ನು ಉದ್ಧಾರ ಮಾಡುವ ಬದಲು ಲೂಟಿ ಹೊಡೆದು ಕತ್ತಲು ನೀಡಿ ಮಜಾ ಉಡಾಯಿಸುತ್ತಿದೆ
  • ಸಿದ್ದರಾಮಯ್ಯರಿಗೆ ಕಾಂಗ್ರೆಸ್ ನಾಯಕರ ಜೇಬು ತುಂಬಿಸುವುದೇ ಮಹಾ ಸಾಧನೆಯಾಗಿದೆ
ಬಿಜೆಪಿಯಿಂದ ಮಜವಾದಿ ಸಿದ್ದರಾಮಯ್ಯ ಸರ್ಕಾರದ ಮೋಜು ಮಸ್ತಿಗಳ ಪಟ್ಟಿ ಬಿಡುಗಡೆ! title=
ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕೆ!

ಬೆಂಗಳೂರು: ಮಜವಾದಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಮೋಜು ಮಸ್ತಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ಮುಖ್ಯಮಂತ್ರಿ ಮನೆಗೆ ಐಷಾರಾಮಿ ಟಚ್, ಸಚಿವರುಗಳಿಗೆ ಐಷಾರಾಮಿ ಕಾರ್‌ ಗಿಫ್ಟ್, ಮಂತ್ರಿಗಳ ಕಚೇರಿ, ಮನೆಗೆ ಏಷ್ಯಾನ್‌ ಪೇಂಟ್ಸ್, ತೆಲಂಗಾಣದಲ್ಲಿ ರಾಜ್ಯದ ಕಾಂಗ್ರೆಸ್ಸಿಗರ ಪಾರ್ಟಿ ಫಿಕ್ಸ್, ದುಬೈಗೆ ಸತೀಶ್‌ ಜಾರಕಿಹೊಳಿ ಟೂರ್‌ ಕನ್ಫರ್ಮ್ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಫಾರಿನ್‌ ಟೂರ್‌ ಸಕ್ಸಸ್. ಹೀಗೆ ಕರುನಾಡನ್ನು ಉದ್ಧಾರ ಮಾಡುವ ಬದಲು ಲೂಟಿ ಹೊಡೆದು ಕತ್ತಲು ನೀಡಿ ಮಜಾ ಉಡಾಯಿಸುತ್ತಿದೆ ಕಾಂಗ್ರೆಸ್..!‌’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಕರೆಂಟ್‌ ಶಾಕ್‌ ವದಂತಿಯಿಂದ ಹಾಸನಾಂಬೆ ದೇವಾಲಯದಲ್ಲಿ ಕಾಲ್ತುಳಿತ

‘ಸರ್ವಾಧಿಕಾರಿ ಧೋರಣೆ, ಹಿಂದೂಗಳ ಶೋಷಣೆ, ಅರಾಜಕತೆಗೆ ಪೋಷಣೆ, ದೇವಾಲಯಗಳು ಮತ್ತು ನಾಡಿನ ಸಂಪ್ರದಾಯದ ಮೇಲೆ ಕೆಂಗಣ್ಣು, ಕನ್ನಡ ಆಸ್ಮಿತೆಯ ಮೂಲಕ್ಕೇ ಕೊಡಲಿಪೆಟ್ಟು, ಮತಾಂಧ ಮನಸ್ಥಿತಿಗಳ ಜೊತೆ ನಿಕಟ ಸಂಪರ್ಕ, ವ್ಯವಸ್ಥಿತವಾಗಿ ಸಂಸ್ಕೃತಿಯ ನಾಶ, ಹಿಂದೂಗಳ ಅಸ್ತಿತ್ವಕ್ಕೆ ಪೆಟ್ಟು ಮತ್ತು ಮೈಸೂರು ಸಂಸ್ಥಾನದ ವಿರುದ್ಧ ದ್ವೇಷ ಇವು ಅಂದು ತನ್ನ ದುರಾಡಳಿತದ ಮೂಲಕವೇ ಕುಖ್ಯಾತಿ ಪಡೆದ ಶೋಕಿಲಾಲ ಟಿಪ್ಪುವಿಗೂ ಇಂದಿನ ಮಜವಾದಿ ಸಿದ್ದರಾಮಯ್ಯ ಅವರಿಗೂ ಇರುವ ಏಕರೂಪತೆಯಾಗಿದೆ’ ಎಂದು ಬಿಜೆಪಿ ಕುಟುಕಿದೆ.

18ನೇ ಶತಮಾನದ ಟಿಪ್ಪು ಕನ್ನಡ ಮತ್ತು ಕನ್ನಡಿಗರ ಆಸ್ಮಿತೆ ಅಳಿಸಿ ಹಾಕಲು ಎಲ್ಲಾ ಪ್ರಯತ್ನಗಳನ್ನು ಮಾಡಿದ 21ನೇ ಶತಮಾನದ ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್‌ ಹೈಕಮಾಂಡ್‌ ಮುಂದೆ ನಡುಬಗ್ಗಿಸಿ ಕೈಕಟ್ಟಿ ನಿಂತು ಕರ್ನಾಟಕದ ಘನತೆಯನ್ನು ಕುಗ್ಗಿಸಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಯಡಿಯೂರಪ್ಪನ ಮಗ ಅಂತ ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲ : ಬಿವೈ ವಿಜಯೇಂದ್ರ

‘ಕಲೆಕ್ಷನ್ ಮಾಸ್ಟರ್ಸ್‌ಗಳ #ATMSarkara‌ಕ್ಕೆ ರಾಜ್ಯದ ಹತ್ತು ಹಲವು ಸಮಸ್ಯೆಗಳಿಗಿಂತ ತೆಲಂಗಾಣದಲ್ಲಿ ಚುನಾವಣೆ ಪ್ರಚಾರ ಮಾಡಿ, ಹಣ ಕೊಟ್ಟು, ಪಾರ್ಟಿ ಮಾಡಿಕೊಂಡು ಬರುವುದೇ ಮುಖ್ಯವಾಗಿದೆ. ರೈತರು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಮಹಿಳೆಯರು, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ಜನಸಾಮಾನ್ಯರು ಬೀದಿಗೆ ಬಂದು ನಿಂತಿದ್ದಾರೆ. ಆದರೆ ಮಜವಾದಿ ಸಿದ್ದರಾಮಯ್ಯರಿಗೆ ಕನ್ನಡಿಗರ ಸಮಸ್ಯೆಗಳಿಗಿಂತ ತೆಲಂಗಾಣದಲ್ಲಿ ಅಧಿಕಾರ ಹಿಡಿಯುವ ಹಗಲು‌ ಕನಸು ಕಾಣುತ್ತಿರುವ ಕಾಂಗ್ರೆಸ್ ನಾಯಕರ ಜೇಬು ತುಂಬಿಸುವುದೇ ಮಹಾ ಸಾಧನೆಯಾಗಿದೆ’ ಎಂದು ಬಿಜೆಪಿ ಕಿಡಿಕಾರಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News