ಮೆಜೆಸ್ಟಿಕ್‌ನಲ್ಲಿದ್ದ ನಂದಿನಿ ಬೂತ್‌ಗಳ ತೆರವು; ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ!

Majestic Nandini booths: ಪ್ರಚಾರದ ತೆವಲಿಗೆ ಬಿದ್ದು ನಂದಿನಿ ಬೂತ್‌ಗೆ ಹೋಗಿ ಉತ್ಪನ್ನಗಳನ್ನು ಖರೀದಿ ಮಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸರ್ಕಾರ ಇದೀಗ ಮೆಜೆಸ್ಟಿಕ್‌ ಬಿಎಂಟಿಸಿ ನಿಲ್ದಾಣದಲ್ಲಿನ ಶಾಪ್‌ಗಳನ್ನು ಕ್ಲೋಸ್‌ ಮಾಡಿಸುತ್ತಿದೆ. ಸೇವ್‌ ನಂದಿನಿ ಅಭಿಯಾನ ಇದೀಗ ಶುರುವಾಗಿದೆ ತುಘಲಕ್‌ ಸರ್ಕಾರದಿಂದ ನಮ್ಮ ನಂದಿನಿಯನ್ನು ಉಳಿಸಿಕೊಳ್ಳಬೇಕಿದೆ.ʼ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

Written by - Puttaraj K Alur | Last Updated : Dec 8, 2023, 04:35 PM IST
  • ಆದಾಯ ಹೆಚ್ಚಿಸುವ ಉದ್ದೇಶದಿಂದ ಜನರಲ್‌ ಸ್ಟೋರ್‌ಗಳ ಸ್ಥಾಪನೆ
  • ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿರುವ ನಂದಿನಿ ಬೂತ್‌ಗಳ ತೆರವು
  • ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ
ಮೆಜೆಸ್ಟಿಕ್‌ನಲ್ಲಿದ್ದ ನಂದಿನಿ ಬೂತ್‌ಗಳ ತೆರವು; ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ! title=
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ!

ಬೆಂಗಳೂರು: ಹೆಚ್ಚಿನ ಆದಾಯದ ಉದ್ದೇಶದಿಂದ ನಂದಿನಿ ಪಾರ್ಲರ್‌ಗಳನ್ನು ಜನರಲ್ ಸ್ಟೋರ್ ಆಗಿ ಬದಲಾಯಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ನಂದಿನಿ ಬೂತ್‌ಗಳನ್ನು ಎತ್ತಂಗಡಿ ಮಾಡಿದೆ. ಈ ಬಗ್ಗೆ ಶುಕ್ರವಾರ ಟ್ವೀಟ್‌ ಮಾಡಿರುವ ಬಿಜೆಪಿ, ʼ
ಚುನಾವಣೆಗೂ ಮುನ್ನ #SaveNandini ನಕಲಿ ಅಭಿಯಾನ ಆರಂಭಿಸಿದ್ದ ಕಾಂಗ್ರೆಸ್‌ ಸರ್ಕಾರ ಇದೀಗ ನಂದಿನಿಯನ್ನೇ ಇನ್ನಿಲ್ಲದಂತೆ ಮಾಡುತ್ತಿದೆʼ ಎಂದು ಕಿಡಿಕಾರಿದೆ.

ಮೆಜೆಸ್ಟಿಕ್‌ ಪ್ಲಾಟ್‌ಫಾರ್ಮ್‌ನಲ್ಲಿದ್ದ ಎಲ್ಲಾ ನಂದಿನಿ ಬೂತ್‌ಗಳನ್ನು ಎತ್ತಂಗಡಿ ಮಾಡಿಸಿ ನಂದಿನಿ ಉತ್ಪನ್ನಗಳು ಜನರಿಗೆ ಸಿಗದಂತೆ ಮಾಡಿದೆ. ಪ್ರಚಾರದ ತೆವಲಿಗೆ ಬಿದ್ದು ನಂದಿನಿ ಬೂತ್‌ಗೆ ಹೋಗಿ ಉತ್ಪನ್ನಗಳನ್ನು ಖರೀದಿ ಮಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸರ್ಕಾರ ಇದೀಗ ಮೆಜೆಸ್ಟಿಕ್‌ ಬಿಎಂಟಿಸಿ ನಿಲ್ದಾಣದಲ್ಲಿನ ಶಾಪ್‌ಗಳನ್ನು ಕ್ಲೋಸ್‌ ಮಾಡಿಸುತ್ತಿದೆ. ಸೇವ್‌ ನಂದಿನಿ ಅಭಿಯಾನ ಇದೀಗ ಶುರುವಾಗಿದೆ ತುಘಲಕ್‌ ಸರ್ಕಾರದಿಂದ ನಮ್ಮ ನಂದಿನಿಯನ್ನು ಉಳಿಸಿಕೊಳ್ಳಬೇಕಿದೆ.ʼ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ಇದನ್ನೂ ಓದಿ: ಯತ್ನಾಳ್, ವಿಜಯೇಂದ್ರ ಸೇರಿ ಎಲ್ಲರೂ ತೀರ್ಮಾಸಿದ್ದೆವು

ಇಂದಿರಾ ಕ್ಯಾಂಟೀನ್‌ ಖೊಟ್ಟಿ ಬಿಲ್‌!

ಬಡವರ ಹಸಿವು ನೀಗಿಸುವ ಹೆಸರಲ್ಲಿ ತಮ್ಮ ಭ್ರಷ್ಟಾಚಾರದ ಹಸಿವು ನೀಗಿಸಲು ಸಿಎಂ ಸಿದ್ದರಾಮಯ್ಯನವರು ಮಾಡಿದ ಯೋಜನೆಯೇ ಇಂದಿರಾ ಕ್ಯಾಂಟೀನ್.‌ ಯಾವತ್ತೂ ಜನರೇ ಬಾರದ, ಮುರಿದ ಕಿಟಕಿ ಬಾಗಿಲುಗಳ ಮಧ್ಯೆ ಗಿಡಗಂಟಿಗಳು ಬೆಳೆದಿರುವ ಮೈಸೂರಿನ ಬನ್ನಿಮಂಟಪದ ಜೋಡಿ ತೆಂಗಿನಮರ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ನಿತ್ಯ 150 ಇಡ್ಲಿ, 10 ಕೆಜಿ ರೈಸ್‌ ಬಾತ್‌ ಮಾರಾಟದ ಬಿಲ್‌ ಎತ್ತಲಾಗುತ್ತಿದೆ. ಜನರೇ ಇಲ್ಲದಲ್ಲಿಯೂ ಇಷ್ಟು ಬಿಲ್‌ ಆಗುತ್ತಿದ್ದರೆ ಇನ್ನು ಜನ ಬರುವ ಕಡೆಗಳಲ್ಲಿ ಅದೆಷ್ಟು ಖೊಟ್ಟಿ ಬಿಲ್‌ಗಳು ಎತ್ತುತ್ತಿರಬಹುದು!ʼ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಹಣ ವಸೂಲಿ ಮಾಡುವುದೇ ಕಾಂಗ್ರೆಸ್‌ ಗುರಿ!

ʼಸಾಧ್ಯವಾದಲ್ಲೆಲ್ಲಾ  ಜನರಿಂದ ಹಣ ವಸೂಲಿ ಮಾಡುವುದೊಂದನ್ನೇ ಗುರಿ ಮಾಡಿಕೊಂಡಿರುವ ಕಾಂಗ್ರೆಸ್‌ ಸರ್ಕಾರ, ಮುದ್ರಾಂಕ ದರವನ್ನು ಐದು ಪಟ್ಟು ಹೆಚ್ಚಿಸಿ ಜನರಿಗೆ ಮತ್ತೊಂದು ಪೆಟ್ಟು ನೀಡಿದೆ. ಸಾಲದ ಕರಾರು ಪತ್ರಕ್ಕಂತೂ ಮೊತ್ತದ ಶೇ.5ರಷ್ಟು ಹೆಚ್ಚಿಸಿ ಮಸೂದೆ ಮಂಡಿಸಿ ಸಚಿವ ಪ್ರಿಯಾಂಕ್‌ ಖರ್ಗೆಯವರು ಕಾಂಗ್ರೆಸ್ ಶಾಸಕರ ಒಪ್ಪಿಗೆ ಪಡೆದಿದ್ದಾರೆ. ಜನಸಾಮಾನ್ಯರ ಮೇಲೆ ಇದು ಎಂಥಾ ಹೊರೆ ಹಾಕುತ್ತದೆ ಎಂಬುದು ಹುಟ್ಟು ಸಿರಿವಂತರಾದ ಪ್ರಿಯಾಂಕ್ ಖರ್ಗೆಯವರಿಗೆ ಮನವರಿಕೆಯಾಗಲು ಸಾಧ್ಯವಿಲ್ಲ. ಜನರನ್ನು ಲೂಟಿ ಮಾಡುವುದೇ ಬಡವರ ಪರ ಎಂದು ಬೊಗಳೆ ಬಿಡುವ ಕಾಂಗ್ರೆಸ್ ಸರ್ಕಾರದ ಅಸಲೀಯತ್ತುʼ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ ಸಾರ್ವಕರ್‌ ಫೋಟೋ ತೆರವು ವಿಚಾರ

ವಿದ್ಯುತ್ ಸಂಪರ್ಕ ನೀಡಲು ಹಣವಿಲ್ಲವಂತೆ!

ʼರಾಜ್ಯದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದಿಂದ ದಿನೇ ದಿನೇ ಮತ್ತಷ್ಟು ರೈತ ವಿರೋಧಿ ನೀತಿಗಳು ಹೊರಬರುತ್ತಿವೆ. ಇಷ್ಟು ವರ್ಷಗಳ ಕಾಲ ರೈತರ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕದ ಖರ್ಚನ್ನು ಸರ್ಕಾರವೇ ಭರಿಸುತ್ತಿತ್ತು. ಆದರೆ ಸಿಎಂ ಸಿದ್ದರಾಮಯ್ಯನವರು ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕದ ಖರ್ಚನ್ನು ರೈತರ ಮೇಲೆ ಹೊರೆಸಿರುವುದು, ಅವರ ರೈತ ವಿರೋಧಿ ಮನಸ್ಥಿತಿಯ ಸುಸ್ಪಷ್ಟ ನಿದರ್ಶನ. ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ನೀಡುವ ಸಿಎಂ ಸಿದ್ದರಾಮಯ್ಯರವರ ಸರ್ಕಾರಕ್ಕೆ, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಲು ಮಾತ್ರ ಹಣವಿಲ್ಲವಂತೆ!ʼ ಎಂದು ಬಿಜೆಪಿ ಕುಟುಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News