Haveri : ಹಾವೇರಿಯಲ್ಲಿ 13 ವರ್ಷದ ಅತ್ಯಾಚಾರಕ್ಕೆ ಒಳಗಾಗದ ಸಂತ್ರಸ್ತೆಗೆ ಹೆರಿಗೆ!

ಬಾಲಕಿ ಸೋದರ ಸಂಬಂಧಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ.

Written by - Channabasava A Kashinakunti | Last Updated : Nov 13, 2021, 10:11 AM IST
  • ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 13ರ ಹರೆಯದ ಅಲೆಮಾರಿ ಜನಾಂಗದ ಬಾಲಕಿ
  • ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಅವಧಿಪೂರ್ವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ
  • ಸೋದರ ಸಂಬಂಧಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿ
Haveri : ಹಾವೇರಿಯಲ್ಲಿ 13 ವರ್ಷದ ಅತ್ಯಾಚಾರಕ್ಕೆ ಒಳಗಾಗದ ಸಂತ್ರಸ್ತೆಗೆ ಹೆರಿಗೆ! title=

ಹಾವೇರಿ : 13ರ ಹರೆಯದ ಅಲೆಮಾರಿ ಜನಾಂಗದ ಬಾಲಕಿಯೊಬ್ಬಳು ಬುಧವಾರ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಅವಧಿಪೂರ್ವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ಸೋದರ ಸಂಬಂಧಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ.

ಆರೋಪಿಯನ್ನು ಪ್ರಕಾಶ್ ಡೊಂಬರ್ (25)(Prakash Dombar) ಎಂದು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಶಿವಮೊಗ್ಗ ಜಿಲ್ಲೆಯ ಆತನ ಮನೆಯಲ್ಲಿ ಈ ಹಲ್ಲೆ ನಡೆದಿದೆ. ಬಾಲಕಿಹಲ್ಲೆಯ ನಂತರವೂ ಹುಡುಗನ ಕುಟುಂಬದೊಂದಿಗೆ ಉಳಿದುಕೊಂಡಿದ್ದಳು ಮತ್ತು ಒಂದೆರಡು ತಿಂಗಳ ಹಿಂದೆ ಹಾವೇರಿ ಜಿಲ್ಲೆಯ ತನ್ನ ಮನೆಗೆ ಮರಳಿದ್ದಳು.

ಇದನ್ನೂ ಓದಿ : Bitcoin Scam: ಪ್ರಧಾನಿ ಮೋದಿಯವರ ಏಕಪಕ್ಷೀಯ ತೀರ್ಮಾನವೇ ಅಂತಿಮವೇ?, ಸಿದ್ದರಾಮಯ್ಯ ಪ್ರಶ್ನೆ

ಬಾಲಕಿಯ ತಂದೆ ಪ್ರಕಾಶ್ ವಿರುದ್ಧ ಲೈಂಗಿಕ ದೌರ್ಜನ್ಯ(Sexual Assault)ದ ದೂರು ನೀಡಲು ನಿರಾಕರಿಸಿದಾಗ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರು ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಮಾಹಿತಿ ನೀಡಿದರು, ಸರ್ಕಾರಿ ಸಂಸ್ಥೆ ಮಂಗಳವಾರ ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದೆ. ಮರುದಿನ ಮಗುವಿಗೆ ಜನ್ಮ ನೀಡಿದ್ದಾಳೆ.

ಸಖಿ ಸದಸ್ಯೆ ಶಾರವ್ವ ಗುಡಗೇರಿ ನೀಡಿದ ದೂರಿನ ಮೇರೆಗೆ ಹಾನಗಲ್ ಪೊಲೀಸರು(Hanagal Police) ಪ್ರಕಾಶ್ ಹಾಗೂ ಆತನ ತಾಯಿ ರತ್ನಮ್ಮ ಡೊಂಬರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಾರವ್ವ ಹದಿಹರೆಯದ ತಾಯಿಯ ವ್ಯಥೆಯು ಮನಕಲಕುವಂತಿದೆ. “ಅವಳ ವಯಸ್ಸನ್ನು ಗಮನಿಸಿದರೆ, ಅವಳಿಗೆ ತನ್ನ ಮಗುವಿಗೆ ಹೇಗೆ ಆಹಾರವನ್ನು ನೀಡಬೇಕೆಂದು ತಿಳಿದಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ(women and child welfare department)ಯ ಉಪನಿರ್ದೇಶಕರು ಒಪ್ಪಿಗೆ ನೀಡಿದ ನಂತರ ನಾವು ಮಹಿಳಾ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸುತ್ತೇವೆ, ”ಎಂದು ಅವರು ಹೇಳಿದರು. ಬಾಲಕಿಯ ತಾಯಿ ಮೃತಪಟ್ಟಿದ್ದು, ಆಕೆಯನ್ನು ಅಜ್ಜಿ ನೋಡಿಕೊಳ್ಳುತ್ತಿದ್ದಾರೆ. ಅಕ್ಕನಿಗೆ ಮದುವೆಯಾಗಿದ್ದು, ತಂಗಿಗೆ ಎಂಟು ವರ್ಷವಿದೆ.

ಇದನ್ನೂ ಓದಿ : ಇ-ಗ್ರಂಥಾಲಯಕ್ಕೆ ಉಚಿತ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳುವುದು ಹೇಗೆ ಗೊತ್ತೇ?

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಮನಕ್ಕೆ ತಂದಿರುವುದಾಗಿ ಹಾನಗಲ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಶ್ರೀಶೈಲ್ ಪಟ್ಟಣಶೆಟ್ಟಿ(Shrishail Pattanshetti) ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News