'ಕಂಬಳ'ಕ್ಕೆ ಮತ್ತೆ ಕಂಟಕ

ಶನಿವಾರ ಮೂಡಬಿದರೆಯಲ್ಲಿ ನಡೆದ ಕಂಬಳ ಆಚರಣೆಯ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಲಿರುವ ಪೇಟಾ.

Last Updated : Nov 13, 2017, 10:30 AM IST
'ಕಂಬಳ'ಕ್ಕೆ ಮತ್ತೆ ಕಂಟಕ title=
ನವದೆಹಲಿ: ಕಂಬಳದಲ್ಲಿ ಪ್ರಾಣಿಗಳಿಗೆ ಹಿಂಸಿಸುತ್ತಾರೆ ಎಂಬುದನ್ನು ಸಾಕ್ಷಿ ಸಮೇತ ಸಾಬೀತು ಪಡೆಸಲು ಪ್ರಾಣಿದಯಾಸಂಘ(ಪೇಟಾ) ಸಜ್ಜಾಗಿದ್ದು, ಈ ಬಗ್ಗೆ ದಾಖಲೆಗಳನ್ನು  ಇಂದು ಸುಪ್ರೀಂಕೋರ್ಟ್ ನಲ್ಲಿ ಅದು ಸಲ್ಲಿಸಲಿದೆ.
 
ಶನಿವಾರ ಮೂಡಬಿದರೆಯಲ್ಲಿ ನಡೆದ ಕಂಬಳ ಆಚರಣೆಗೆ ಪೇಟಾ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು, ಗ್ರಾಮೀಣ ಕ್ರೀಡೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಕಂಬಳಕ್ಕೆ ಹಸಿರು ನಿಶಾನೆ ತೋರಿಸಿರುವ ಕ್ರಮ ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಕ್ರೀಡೆಯಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತದೆ ಎಂಬುದನ್ನು ಮೂಡಬಿದರೆಯಲ್ಲಿ ನಡೆದ ಕಂಬಳ ಆಚರಣೆಯ ವಿಡಿಯೋ ಮತ್ತು ಛಾಯಾಚಿತ್ರಗಳ ಸಮೇತ ಇಂದು ಸುಪ್ರೀಂಕೋರ್ಟ್ನಲ್ಲಿ ಹಾಜರು ಪಡಿಸಲಿದೆ.
 
ಕಂಬಳ ಕ್ರೀಡೆಗೆ ಪೇಟಾ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ನ.6 ರಂದು ವಜಾಗೊಳಿಸಿತ್ತು. ಈ ಬಗ್ಗೆ ವಿಚಾರಣೆಯನ್ನು ನ.13ಕ್ಕೆ ಮುಂದೂಡಿದ್ದ ಪೀಠವು ವಿಚಾರಣೆಯಲ್ಲಿ ಅಟಾರ್ನಿ ಜನರಲ್ ಕುದ್ದು ಹಾಜರಾಗುವಂತೆಯೂ ಸೂಚನೆ ನೀಡಿದೆ.
 

Trending News