ತುಮಕೂರು: ಶನಿವಾರದಂದು ಬಿಜೆಪಿಯ ಕಾರ್ಯಕರ್ತರು ಗಣಿಗಾರಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ವರದಿ ಮಾಡಿದ್ದಕ್ಕೆ ಇಲ್ಲಿನ ಟಿವಿ ವರದಿಗಾರನ ಮೇಲೆ ಹಲ್ಲೆ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ ಆ ಪತ್ರಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಏಕಾಏಕಿ ಪತ್ರಕರ್ತನ ಹಲ್ಲೆಯನ್ನು ಮಾಡಿದ್ದಾರೆ.ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಈ ಹಲ್ಲೆಯಾದ ಪತ್ರಕರ್ತ ಈ ಹಿಂದೆ ಕರ್ನಾಟಕದಲ್ಲಿನ ಮೈನಿಂಗ್ ಮಾಫಿಯಾ ವಿಷಯಕ್ಕೆ ಸಂಬಂಧಿಸಿದಂತೆ ವರದಿ ಮಾಡಿದ್ದರು ಎಂದು ಹೇಳಲಾಗಿದೆ. ದಾಳಿ ಮಾಡಿದ ಎಲ್ಲ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.
#WATCH Local TV reporter attacked by BJP members in #Karnataka's Tumkur for reporting on issues of illegal mining pic.twitter.com/whhoztC2Ej
— ANI (@ANI) December 2, 2017
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕ ಸುರಜ್ ಹೆಗಡೆ ಪತ್ರಕರ್ತನ ಕೆಲಸ ಸತ್ಯವನ್ನು ಹೊರತರುವುದಾಗಿದೆ. ಒಂದು ವೇಳೆ ಈ ದಾಳಿಯು ಅಂತಹ ಸತ್ಯವನ್ನು ಹತ್ತಿಕ್ಕುವುದಾಗಿದ್ದರೆ ಅದನ್ನು ಖಂಡಿತಾ ಸಹಿಸಲು ಸಾದ್ಯವಿಲ್ಲ ಎಂದರು. ಈ ಹಿಂದೆ 2013 ರಲ್ಲಿ ಮೈನಿಂಗ್ ಮಾಫಿಯಾಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು ಆದರೆ ಸಿಬಿಐ ತಾಂತ್ರಿಕ ಕಾರಣಗಳಿಂದಾಗಿ ಕೇಸ್ ದಾಖಲಿಸಲು ಬರುವುದಿಲ್ಲ ಎಂದು ರಾಜ್ಯ ಕಾರ್ಯದರ್ಶಿಯವರಿಗೆ ತಿಳಿಸಿತ್ತು.ನಂತರ ಲೋಕಾಯುಕ್ತ ಸಂತೋಷ ಹೆಗ್ಡೆಯವರ ವರದಿಯಂತೆ ಅದು ತನಿಖೆಯನ್ನು ಈ ಹಿಂದೆ ಕೈಗೊಂಡಿತ್ತು.