ಜಾತ್ಯತೀತ ನಾಯಕರಾಗಿ ಎಲ್ಲರ ಏಳಿಗೆಗೆ ಶ್ರಮಿಸಿದ ಹಿರಿಯ ಚೇತನ ಜಾಫರ್ ಷರೀಫ್

ಮುಸ್ಲಿಂ ಸಮುದಾಯದ ಪ್ರಭಾವಿ ಹಾಗೂ ರಾಜ್ಯದ ಹಿರಿಯ ರಾಜಕಾರಣಿ ಜಾಫ‌ರ್‌ ಷರೀಫ್ ಇಂದಿರಾಗಾಂಧಿ ಕಾಲದಿಂದಲೂ ನಿಷ್ಠಾವಂತ ಕಾಂಗ್ರೆಸ್ಸಿಗರಲ್ಲೊಬ್ಬರು. 

Last Updated : Nov 26, 2018, 01:18 PM IST
ಜಾತ್ಯತೀತ ನಾಯಕರಾಗಿ ಎಲ್ಲರ ಏಳಿಗೆಗೆ ಶ್ರಮಿಸಿದ ಹಿರಿಯ ಚೇತನ ಜಾಫರ್ ಷರೀಫ್  title=

ಬೆಂಗಳೂರು: ಭಾನುವಾರ ನಿಧನರಾದ ಮಾಜಿ ಕೇಂದ್ರ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಈದ್ಗಾ ಖುದ್ದೂಸ್‌ನಲ್ಲಿ ನೆರವೇರಲಿದೆ. 

ಮಾಜಿ ಕೇಂದ್ರ ಸಚಿವರಾದ ಜಾಫರ್ ಷರೀಫ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಉಪಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್, ಜಾತ್ಯತೀತ ನಾಯಕರಾಗಿ ಎಲ್ಲ ಏಳಿಗೆಗೆ ಶ್ರಮಿಸಿದ ಹಿರಿಯ ಚೇತನಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ಮುಸ್ಲಿಂ ಸಮುದಾಯದ ಪ್ರಭಾವಿ ಹಾಗೂ ರಾಜ್ಯದ ಹಿರಿಯ ರಾಜಕಾರಣಿ ಜಾಫ‌ರ್‌ ಷರೀಫ್ ಇಂದಿರಾಗಾಂಧಿ ಕಾಲದಿಂದಲೂ ನಿಷ್ಠಾವಂತ ಕಾಂಗ್ರೆಸ್ಸಿಗರಲ್ಲೊಬ್ಬರು. 
ಕಾಂಗ್ರೆಸ್‌ ಪಕ್ಷದಲ್ಲಿ ದೆಹಲಿ ಮಟ್ಟದಲ್ಲಿ ಸುಮಾರು ಮೂರು ದಶಕಗಳ ಕಾಲ ಪ್ರಭಾವಿಯಾಗಿದ್ದ ಅವರು ಎಐಸಿಸಿ ಮಟ್ಟದಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದರು.

ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ಜಾಫರ್ ಷರೀಫ್ ಅವರನ್ನು ನಗರದ ಕನ್ನಿಂಗ್ ಹ್ಯಾಮ್ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾಹ್ನ ಅವರು ಕೊನೆಯುಸಿರೆಳೆದರು.

Trending News