ಹೆಚ್‌ಡಿಕೆ ಆಡಿಯೋ ಬಾಂಬ್: ಅದೊಂದು ಫೇಕ್ ಆಡಿಯೋ ಎಂದ ಬಿಎಸ್​ವೈ

ಸಿಎಂ ಕುಮಾರಸ್ವಾಮಿ ನಕಲಿ ಆಡಿಯೋ ಬಿಡುಗಡೆ ಮಾಡಿದ್ದಾರೆ ಎಂದ ಬಿಎಸ್​ವೈ

Last Updated : Feb 8, 2019, 11:32 AM IST
ಹೆಚ್‌ಡಿಕೆ ಆಡಿಯೋ ಬಾಂಬ್: ಅದೊಂದು ಫೇಕ್ ಆಡಿಯೋ ಎಂದ ಬಿಎಸ್​ವೈ  title=
File Image

ಬೆಂಗಳೂರು: ಬಜೆಟ್​ಗೂ ಮುನ್ನ ತುರ್ತು ಸುದ್ದಿಗೋಷ್ಠಿ ನಡೆಸಿ ಆಪರೇಶನ್ ಕಮಲಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಿಡಿಸಿದ ಆಡಿಯೋ ಬಾಂಬ್ ಗೆ ತಿರುಗೇಟು ನೀಡಿರುವ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅದೊಂದು ಫೇಕ್ ವಿಡಿಯೋ ಎಂದಿದ್ದಾರೆ.

ಹೆಚ್‌ಡಿಕೆ ಆಡಿಯೋ ರಿಲೀಸ್ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ, ಶರಣಗೌಡ ನಮ್ಮೊಡನೆ ಮಾತನಾಡಿದ್ದಾರೆ ಎಂಬ ಕಥೆ ಕಟ್ಟಿ ಗೊಂದಲ ಸೃಷ್ಟಿಸುವುದು ಕುಮಾರಸ್ವಾಮಿಯವರ ಉದ್ದೇಶ. ಸಿನಿಮಾ ನಿರ್ಮಾಪಕರಾಗಿರುವ ಕುಮಾರಸ್ವಾಮಿ ನಕಲಿ ಆಡಿಯೋ ಸೃಷ್ಟಿಸಿದ್ದಾರೆ. ಸಿಎಂ ಬಿಡುಗಡೆ ಮಾಡಿರುವು ನಕಲಿ ಆಡಿಯೋ ಎಂದು ಹೇಳಿದರು.

ಸಾಲಮನ್ನಾ ಆಸೆ ತೋರಿಸಿ ರೈತರ ಕಣ್ಣಿಗೆ ಮಣ್ಣೆರಚಿದ್ದೀರಿ, ಒಂದೇ ಕಂತಿನಲ್ಲಿ 48 ಸಾವಿರ ಕೋಟಿ ನೀಡುತ್ತೇನೆ ಎಂದಿದ್ದೀರ ಅದಕ್ಕೆ ಉತ್ತರ ನೀಡಿ. ರಾಜ್ಯದಲ್ಲಿ 150 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಇದೇ. ಸರ್ಕಾರಕ್ಕೆ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದರು.

ಸ್ಪೀಕರ್ ಬಗ್ಗೆ ಮಾತನಾಡಿರುವುದು ಸತ್ಯಕ್ಕೆ ದೂರವಾದ ಮಾತು. ಆಮಿಷದ ಆರೋಪ ಸತ್ಯವಾದರೆ ರಾಜಕೀಯದಿಂದ ನಿವೃತ್ತಿ ಘೋಷಿಸುವುದಾಗಿ ಯಡಿಯೂರಪ್ಪ ತಿಳಿಸಿದರು.

ಬಹುಮತವಿಲ್ಲದೆ ಬಜೆಟ್ ಮಂಡಿಸಲು ಬಿಡೋಲ್ಲ:
ನಾನು ದೇವಾಲಯಕ್ಕೆ ಹೋಗಿದ್ದು ನಿಜ. ನಾವು ಆಮಿಷ ಒಡ್ಡುತ್ತೇವೆ ಎಂಬ ಭಯದಿಂದ ಕೆಲವರನ್ನು ನಿಗಮ ಮಂಡಳಿಯ ಅಧ್ಯಕ್ಷರಾಗಿ ಮಾಡಿದ್ದಾರೆ. ಇನ್ನೂ ಕೆಲವರನ್ನು ಸಚಿವರನ್ನಾಗಿ ಮಾಡಲಿ ಎಂದ ಬಿಎಸ್​ವೈ, ಬಜೆಟ್ ಮಂಡನೆಗೆ ನಾವು ಅಡ್ಡಿಪಡಿಸುವುದಿಲ್ಲ. ಅದು ನಾಡಿನ ಜನತೆಗೆ ಸಂಬಂಧಿಸಿದ ಬಜೆಟ್. ಅದಕ್ಕೆ ನಮ್ಮ ಬೆಂಬಲವಿದೆ. ಆದರೆ ಬಹುಮತವಿಲ್ಲದೆ ಬಜೆಟ್ ಮಂಡಿಸಲು ಬಿಡುವುದಿಲ್ಲ. ಇಂದಿನ ಬಜೆಟ್ ಅಧಿವೇಶನಕ್ಕೂ ಕಾಂಗ್ರೆಸ್-ಜೆಡಿಎಸ್ ನ 10-11 ಶಾಸಕರು ಹಾಜರಾಗುವುದಿಲ್ಲ ಎಂದು ಹೇಳಿದರು.
 

Trending News