40% ಕಮಿಷನ್ ನಲ್ಲಿ ಸಿಎಂ ಬೊಮ್ಮಾಯಿ ಪಾಲುದಾರರಾ?- ಬಿ ಕೆ ಹರಿಪ್ರಸಾದ್ ವಾಗ್ದಾಳಿ

ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಷಯಕ್ಕೆ ಕ್ರಿಮಿನಲ್ ಆರೋಪ ಹೊತ್ತಿರುವ ಸಚಿವ ಈಶ್ವರಪ್ಪನವರನ್ನ ಸಚಿವ ಸಂಪುಟದಿಂದ ವಜಾ ಮಾಡಲು ರಾಜ್ಯಪಾಲರನ್ನ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಮನವಿ ಮಾಡಿದ್ದೇವೆ.ಸೆಕ್ಷನ್ 306ರಡಿಯಲ್ಲಿ ಈಶ್ವರಪ್ಪನವರನ್ನ ಬಂಧಿಸಿ ತನಿಖೆ ನಡೆಸಲು ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.

Written by - Zee Kannada News Desk | Last Updated : Apr 13, 2022, 04:00 PM IST
  • ಸಂತೋಷ್ ಪಾಟೀಲ್ ಸೇರಿದಂತೆ ಗುತ್ತಿಗೆದಾರರ ಸಂಘ ರಾಜ್ಯದಲ್ಲಿ 40% ಕಮಿಷನ್ ಪಡೆಯುತ್ತಿದೆ ಎಂದು ಪ್ರಧಾನಿಗಳಿಗೂ ಪತ್ರ ಬರೆದಿದ್ದರೂ ಕಮಿಷನ್ ಬಗ್ಗೆ ರಾಜ್ಯ ಸರ್ಕಾರ ಹಾಗೂ ಪ್ರಧಾನಿ ಮೌನವಹಿಸಿದ್ದಾರೆ.
40% ಕಮಿಷನ್ ನಲ್ಲಿ ಸಿಎಂ ಬೊಮ್ಮಾಯಿ ಪಾಲುದಾರರಾ?- ಬಿ ಕೆ ಹರಿಪ್ರಸಾದ್ ವಾಗ್ದಾಳಿ  title=
file photo

ಬೆಂಗಳೂರು: ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಷಯಕ್ಕೆ ಕ್ರಿಮಿನಲ್ ಆರೋಪ ಹೊತ್ತಿರುವ ಸಚಿವ ಈಶ್ವರಪ್ಪನವರನ್ನ ಸಚಿವ ಸಂಪುಟದಿಂದ ವಜಾ ಮಾಡಲು ರಾಜ್ಯಪಾಲರನ್ನ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಮನವಿ ಮಾಡಿದ್ದೇವೆ.ಸೆಕ್ಷನ್ 306ರಡಿಯಲ್ಲಿ ಈಶ್ವರಪ್ಪನವರನ್ನ ಬಂಧಿಸಿ ತನಿಖೆ ನಡೆಸಲು ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸೌತ್‌ ಇಂಡಿಯಾದಲ್ಲಿ ಹಿಂದಿ ಚಿತ್ರಗಳ ಹವಾ ಕಡಿಮೆಯಾಗಲು ಇದೇ ಮುಖ್ಯ ಕಾರಣ ಎಂದ ನಟ ಯಶ್‌!

ಸಚಿವ ಈಶ್ವರಪ್ಪನವರ ಪರವಾಗಿ ವಕಲಾತ್ತು ವಹಿಸುತ್ತಿರುವ ಸಿಎಂ ಬೊಮ್ಮಾಯಿಯವರು, ಹಾಗೂ ನಾ ಖಾನೇ ದುಂಗಾ, ನಾ ಖಾವೂಂಗಾ ಎಂದು ಘೋಷಣೆ ಮಾಡಿದ್ದ ಮೋದಿಯವರು ಮೌನವಹಿಸಿದ್ದಾರೆ. ಸಚಿವರ ಕಮಿಷನ್ ಪಡೆಯುತ್ತಿರುವುದರಲ್ಲಿ ಸಿಎಂ ಹಾಗೂ ಪಿಎಂಗೂ ಪಾಲುದಾರಿಕೆ ಇರಬೇಕು. ಇಲ್ಲದಿದ್ದರೇ ಈ ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ. 

ಸಂತೋಷ್ ಪಾಟೀಲ್ ಸೇರಿದಂತೆ ಗುತ್ತಿಗೆದಾರರ ಸಂಘ ರಾಜ್ಯದಲ್ಲಿ 40% ಕಮಿಷನ್ ಪಡೆಯುತ್ತಿದೆ ಎಂದು ಪ್ರಧಾನಿಗಳಿಗೂ ಪತ್ರ ಬರೆದಿದ್ದರೂ ಕಮಿಷನ್ ಬಗ್ಗೆ ರಾಜ್ಯ ಸರ್ಕಾರ ಹಾಗೂ ಪ್ರಧಾನಿ ಮೌನವಹಿಸಿದ್ದಾರೆ. ಆರೋಪ ಬಂದ ಕೂಡಲೇ ಕ್ರಮವಹಿಸಿದ್ದರೆ ಅಮಾಯಕ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಸರ್ಕಾರದ ನಿರ್ಲಕ್ಷ್ಯವೇ ಸಂತೋಷ್ ಆತ್ಮಹತ್ಯೆಗೆ ಕಾರಣ, ಇದೊಂದು ಪ್ರಾಯೋಜಿತ ಕೊಲೆ.

ಇದನ್ನೂ ಓದಿ: ತೂಫಾನ್‌ ಬಳಿಕ ಈಗ ಸುಲ್ತಾನ್‌ ಹವಾ.. ಬಿಡುಗಡೆಯಾದ ಒಂದೇ ಗಂಟೆಯಲ್ಲಿ ದಾಖಲೆ!!

ಸಂತೋಷ್ ಪಾಟೀಲ್ ಪತ್ನಿ ಸೇರಿದಂತೆ ಇಡೀ ಕುಟುಂಬ ಸಚಿವ ಈಶ್ವರಪ್ಪನೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಸರ್ಕಾರಕ್ಕೆ ನೈತಿಕತೆ ಇದ್ರೆ ಈಶ್ವರಪ್ಪನವರನ್ನ ವಜಾ ಮಾಡಿ ಕೂಡಲೇ ಬಂಧಿಸಿಬೇಕು. ಬಿಜೆಪಿ ಸರ್ಕಾರದ ಕಮಿಷನ್ ದಂಧೆಯಿಂದ ರಾಜ್ಯದಲ್ಲಿ ಗುತ್ತಿಗೆದಾರರು ಕಿರುಕುಳ ಅನುಭವಿಸುವಂತಾಗಿದೆ.

ಈಶ್ಬರಪ್ಪನವರ ರಾಜಕೀಯ ಆರಂಭವೇ ಅಮಾಯಕ ಹೆಣಗಳ ಮೇಲೆ ರಾಜಕೀಯ ನಡೆಸಿದ್ದು. ಕಾಂಗ್ರೆಸ್ ಪಕ್ಷಕ್ಕೆ ಹೆಣದ ಮೇಲೆ ರಾಜಕೀಯ ಮಾಡಿದ ಇತಿಹಾಸವೇ ಇಲ್ಲ.ಈಶ್ವರಪ್ಪನವರನ್ನ ವಜಾ‌ಮಾಡಿ, ಬಂಧಿಸಿ ತನಿಖೆ ನಡೆಸದೇ ಇದ್ದರೇ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಹೋರಾಟ ನಡೆಸಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News