ಡೆಲ್ಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ: ಪ್ರತ್ಯಸ್ತ್ರದ ಹುಡುಕಾಟದಲ್ಲಿ ಬಿಜೆಪಿ; ಸವಾಲಿನ ಸುಳಿಯಲ್ಲಿ ವಿಜಯೇಂದ್ರ

karnataka congress protest in delhi: ರಾಜ್ಯ ಕಾಂಗ್ರೆಸ್ ಮಾಡುತ್ತಿರುವ ಪ್ರತಿಭಟನೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ INDIA ಪಕ್ಷಗಳು ಬೆಂಬಲ ನೀಡಲಿದ್ದು, ಜೊತೆಗೆ ಮಹಾರಾಷ್ಟ್ರದ ವಿರೋಧ ಪಕ್ಷಗಳು ದ್ವನಿ ಸೇರಿಸಲಿದೆ. ಇದರಿಂದ ದಕ್ಷಿಣ ಭಾರತದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ದೊಡ್ಡ ಅಸ್ತ್ರ ಬಿಜೆಪಿ ವಿರೋಧಿ ಪಕ್ಷಗಳಿಗೆ ಸಿಗಲಿದೆ.

Written by - Prashobh Devanahalli | Edited by - Bhavishya Shetty | Last Updated : Feb 7, 2024, 03:34 PM IST
    • ರಾಜ್ಯ ಕಾಂಗ್ರೆಸ್ ಮಾಡುತ್ತಿರುವ ಪ್ರತಿಭಟನೆಗೆ INDIA ಪಕ್ಷಗಳ ಬೆಂಬಲ
    • ಭಿನ್ನಾಭಿಪ್ರಾಯ ನಡುವೆ ರಾಜ್ಯಾಧ್ಯಕ್ಷ ಪದವಿ ಪಡೆದಿರುವ ಬಿ ವೈ ವಿಜಯೇಂದ್ರ
    • ಬಿಜೆಪಿ ಪಕ್ಷದಿಂದ ಅತೀ ಹೆಚ್ಚು ಸ್ಥಾನ ಗೆಲ್ಲಿಸುವ ಅನಿವಾರ್ಯತೆ ಎದುರಾಗಿದೆ
ಡೆಲ್ಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ: ಪ್ರತ್ಯಸ್ತ್ರದ ಹುಡುಕಾಟದಲ್ಲಿ ಬಿಜೆಪಿ; ಸವಾಲಿನ ಸುಳಿಯಲ್ಲಿ ವಿಜಯೇಂದ್ರ  title=

ಬೆಂಗಳೂರು : ಕರ್ನಾಟಕ ರೂ.100 ತೆರಿಗೆ ನೀಡಿದರೆ ಕೇವಲ 12 ರೂಪಾಯಿ ಕೇಂದ್ರದಿಂದ ಬರುತ್ತಿದೆ ಎಂದು ಕಾಂಗ್ರೆಸ್ ಲೋಕಸಭೆ ಚುನಾವಣೆ ಮುನ್ನ ನಡೆಸುತ್ತಿರುವ ಪ್ರತಿಭಟನೆ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಪ್ರತ್ಯಸ್ತ್ರ ಹುಡುಕಾಟ ನಡೆಸುತ್ತಿದೆ.

ರಾಜ್ಯ ಕಾಂಗ್ರೆಸ್ ಮಾಡುತ್ತಿರುವ ಪ್ರತಿಭಟನೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ INDIA ಪಕ್ಷಗಳು ಬೆಂಬಲ ನೀಡಲಿದ್ದು, ಜೊತೆಗೆ ಮಹಾರಾಷ್ಟ್ರದ ವಿರೋಧ ಪಕ್ಷಗಳು ದ್ವನಿ ಸೇರಿಸಲಿದೆ. ಇದರಿಂದ ದಕ್ಷಿಣ ಭಾರತದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ದೊಡ್ಡ ಅಸ್ತ್ರ ಬಿಜೆಪಿ ವಿರೋಧಿ ಪಕ್ಷಗಳಿಗೆ ಸಿಗಲಿದೆ. ಇದಕ್ಕೆ ರಾಜ್ಯ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ವಿರುದ್ಧ ಬೆರಳು ಮಾಡಲು ವಿಷಯಗಳನ್ನ ಹುಡುಕುತ್ತಿದೆ. ಜೊತೆಗೆ ಕೇಂದ್ರ ಬಿಜೆಪಿ ಪ್ರಧಾನಿ ಮೋದಿ ವರ್ಚಸ್ಸು ಒಂದೇ ನಿಮ್ಮ ಚುನಾವಣೆ ಪ್ರಚಾರ ಆಗಬಾರದು ಎಂದು ಸೂಚನೆ ನೀಡಿದೆ.

ಇದನ್ನೂ ಓದಿ: ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಲ್ಲಬೇಡಿ, ಹಾಲು ಕೊಡುವ ಕೆಚ್ಚಲು ಕತ್ತರಿಸಬೇಡಿ: ಸಿದ್ದರಾಮಯ್ಯ

ವಿಜಯೇಂದ್ರ ಮುಂದೆ ಲೋಕ ಸಮರ ಸವಾಲು :

ಪಕ್ಷದ ಒಳಗೆ ಭಿನ್ನಾಭಿಪ್ರಾಯ ನಡುವೆ ರಾಜ್ಯಾಧ್ಯಕ್ಷ ಪದವಿ ಪಡೆದಿರುವ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಅತೀ ಹೆಚ್ಚು ಸ್ಥಾನ ಗೆಲ್ಲಿಸುವ ಅನಿವಾರ್ಯತೆ ಎದುರಾಗಿದೆ. ಸದ್ಯ ಕಮಲ ನಾಯಕರು ನಮ್ಮ ಟಾರ್ಗೆಟ್ 28 ಎಂದು ಹೇಳುತ್ತಿದ್ದಾರೆ ಆದರೆ ವಾಸ್ತವವಾಗಿ ಎಷ್ಟು ಸ್ಥಾನ ಎಂದು ಪಕ್ಷದವರೇ ಎನಿಸುತ್ತಿದ್ದಾರೆ, ಸ್ಥಳೀಯ ಮುಖಂಡರು ಪಕ್ಷ ತೊರೆದರು. ಈ ರೀತಿ ವಿವಿಧ ಕಾರಣದಿಂದ ಕಳೆದ ಭಾರಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಚಿತ್ರಣ ಕಾಂಗ್ರೆಸ್ ಅವರಿಗೆ ಕ್ಷೇನಿಸಿತ್ತು.ಬಿಜೆಪಿ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಈ ಭಾರಿ ಲೋಕಸಭೆಯಲ್ಲಿ ಬಿಜೆಪಿ 17 ಸ್ಥಾನ ಗೆಲ್ಲುವುದು ನಿಶ್ಚಿತ, ಕಳೆದ ಚುನಾವಣೆಯಲ್ಲಿ ಬಂದ ಸ್ಥಾನ ಈ ಭಾರಿ ಬರುವುದು ಕಷ್ಟ ಎಂದು ಹೇಳುತ್ತಾರೆ.

ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಕಾಂಗ್ರೆಸ್ ಗಿಂತ ಹೆಚ್ಚಿನ ಸಂಸದರನ್ನು ಗೆಲ್ಲಿಸಲೇಬೇಕಿದೆ. ಲಿಂಗಾಯತ ನಾಯಕ ಇಮೇಜ್ ಇರುವ ಬಿ ಎಸ್ ವೈ ಅವರ ಪುತ್ರನಿಗೂ ಅದೇ ಇಮೇಜ್ ಬಿಂಬಿಸುವ ಪ್ರಯತ್ನ ನಡೆದಿದೆ. ಇದನ್ನು ಮತದಾರ ಒಪ್ಪುತ್ತಾರ?

ಕಾಂಗ್ರೆಸ್ ಈ ಭಾರಿ ಚುನಾವಣೆಯಲ್ಲಿ 17 ಸ್ಥಾನ ಗೆಲ್ಲಬಹುದು ಎಂದು ಅಂದಾಜಿಸಿದೆ. ಇದನ್ನ ಅರಿತಿರುವ ಬಿಜೆಪಿ ಕಾಂಗ್ರೆಸ್ ಓಟಕ್ಕೆ ಕಡಿವಾಣ ಹಾಕಲು ವಿಜಯೇಂದ್ರ ಹಾಗೂ ಟೀಂ ಕೌಂಟರ್ ವಿಷಯ ಅನ್ವೇಷಣೆಯಲ್ಲಿ ತೊಡಗಿದ್ದಾರೆ. ಇದರ ಜೊತೆಗೆ ಬಿಜೆಪಿ ಪ್ರಭಾಲ್ಯ ಹೊಂದಿರುವ ಕ್ಷೇತ್ರದಲ್ಲಿ ಹದ್ದಿನ ಕಣ್ಣು ಇಟ್ಟಿದ್ದು, ಸ್ಥಳೀಯ ಮುಖಂಡರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗದಂತೆ ಮುತುವರ್ಜಿ ವಹಿಸಿದ್ದಾರೆ.

ಇದನ್ನೂ ಓದಿ: ಈ ಬೀಜವನ್ನು ಅರೆದು ಹಚ್ವಿದರೆ ಬಿಳಿ ಕೂದಲು ಪರ್ಮನೆಂಟ್ ಆಗಿ ಕಪ್ಪಾಗುವುದಲ್ಲದೆ, ದಷ್ಟಪುಷ್ಟವಾಗಿ ಬೆಳೆಯುತ್ತೆ!

2009 ಚುನಾವಣೆಯಿಂದಲೂ ಬಿಜೆಪಿ 28 ಕ್ಷೇತ್ರಗಳ ಪೈಕಿ 16ಗಿಂತ ಹೆಚ್ಚಿನ ಸ್ಥಾನ ಗೆದ್ದಿದೆ, ಕನಿಷ್ಠ ಆದರೂ ಕಾಂಗ್ರೆಸ್ ಗಿಂತ ಹೆಚ್ಚಿನ ಸ್ಥಾನ ಗೆಲ್ಲಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News