ಹಾಸನ: ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ, ದೇವರು ನನಗೆ ಎರಡು ಬಾರಿ ಸಿಎಂ ಆಗಲು ಅವಕಾಶ ನೀಡಿದ, ಈಗ ನಾನು ರಾಜಕೀಯದಿಂದ ದೂರ ಸರಿಯಬೇಕೆಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
HD Kumaraswamy: I'm observing where today's politics is going. It's not for good people, it's about caste infatuation. Don't bring in my family. I'm done. Let me live in peace. I don't have to continue in politics. I did good when I was in power. I want space in people's heart. https://t.co/kbRcqOdXkA
— ANI (@ANI) August 3, 2019
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ನನಗೆ ಎರಡು ಬಾರಿ ಸಿಎಂ ಆಗಲು ಅವಕಾಶ ಸಿಕ್ಕಿದ್ದು ದೇವರು ಕೊಟ್ಟ ಅವಕಾಶ. ನಾನು ಆಕಸ್ಮಿಕವಾಗಿ ಈ ರಾಜ್ಯದ ಸಿಎಂ ಆಗಿ ಬಂದವನು. ಈ ರಾಜಕೀಯ ವ್ಯವಸ್ಥೆಯಲ್ಲಿ ನಾನೇ ಹಿಂದೆ ಸರಿಯಬೇಕು ಎಂದು ಕೊಂಡಿದ್ದೇನೆ. ನನಗೆ ರಾಜಕೀಯದಲ್ಲಿ ಮುಂದುವರೆಯಲೇಬೇಕೆಂಬ ಹುಚ್ಚಿಲ್ಲ' ಎಂದು ಸ್ಪಷ್ಟಪಡಿಸಿದರು.
ಇನ್ನು ನಿಖಿಲ್ ಹಾಗೂ ಪ್ರಜ್ವಲ್ ಅವರ ಹೆಸರುಗಳನ್ನು ತರುತ್ತಿರುವ ಬಗ್ಗೆ ಮಾತನಾಡಿದ ಅವರು ' ನನ್ನ ಕುಟುಂಬವನ್ನು ಪದೇ ಪದೇ ಎಳೆಯಬೇಡಿ.ಹುಣಸೂರು ಹಾಗೂ ಕೆ.ಆರ್ ಪೇಟೆ ಸೇರಿ ಉಳಿದ ಕ್ಷೇತ್ರಗಳಲ್ಲಿಯೂ ಸಹಿತ ಅಭ್ಯರ್ಥಿಗಳಿದ್ದಾರೆ ಆದರೆ ಯಾರೂ ಪ್ರಜ್ವಲ್ ಹಾಗೂ ನಿಖಿಲ್ ಅವರ ಹೆಸರನ್ನು ತೇಲಿ ಬಿಟ್ಟಿದ್ದಾರೆ. ಈ ರೀತಿ ಕಪೋಲಕಲ್ಪಿತ ಸುದ್ದಿಗಳನ್ನು ಯಾರು ಮಾಡಬೇಡಿ ಎಂದರು.
Ex-K'taka CM HD Kumaraswamy: I'm thinking of going away from politics. I came to politics accidentally. I became CM accidentally. God gave me opportunity to become CM twice. I wasn't there to satisfy anyone. In 14 months I did good work towards state's development. I'm satisfied. pic.twitter.com/INraWOhRwa
— ANI (@ANI) August 3, 2019
ಪ್ರಸಕ್ತ ರಾಜಕೀಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೆಚ್ಡಿಕೆ ' ಇವತ್ತಿನ ರಾಜಕೀಯ ಎಲ್ಲಿಗೆ ತಲುಪುತ್ತಿದೆ ಎನ್ನುವುದನ್ನು ನಾನು ಗಮನಿಸುತ್ತಿದ್ದೇನೆ. ಇದು ಜನರಿಗೆ ನಿಜಕ್ಕೂ ಒಳ್ಳೆಯದಲ್ಲ. ಇದೆಲ್ಲಾ ಜಾತಿ ಮೋಹ, ನನ್ನ ಕುಟುಂಬವನನ್ನು ಇದರಲ್ಲಿ ಎಳೆದು ತರಬೇಡಿ. ನನಗೆ ಸಾಕಾಗಿ ಹೋಗಿದೆ. ನನಗೆ ರಾಜಕಾರಣದಲ್ಲಿ ಮುಂದುವರೆಯುವ ಇಚ್ಚೆಯಿಲ್ಲ, ಅಧಿಕಾರದಲ್ಲಿದ್ದಾಗ ನಾನು ಒಳ್ಳೆಯದನ್ನು ಮಾಡಿದೆ. ಈಗ ಜನರ ಹೃದಯದಲ್ಲಿ ಸ್ಥಾನ ಬೇಕಾಗಿದೆ ಅಷ್ಟೇ ಎಂದು' ಹೇಳಿದರು.