ಪಿಯುಸಿ ತೇರ್ಗಡೆಯಾಗಿದ್ದಿರಾ? ಹಾಗಿದ್ದಲ್ಲಿ ಈ ಜಿಲ್ಲೆಯ ಯುವಕರಿಗೆ ಇಲ್ಲಿದೆ ಉದ್ಯೋಗದ ಸುವರ್ಣಾವಕಾಶ..!

ಕೊಪ್ಪಳ ಜಿಲ್ಲೆಯ ಕುಷ್ಟಗಿ ಪುರಸಭೆಗೆ ಡೇನಲ್ಮ್ ಅಡಿಯಲ್ಲಿ ಸಂಪನ್ಮೂಲ ವ್ಯಕ್ತಿಗಳ ನೇಮಕಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

Written by - Zee Kannada News Desk | Last Updated : Jan 16, 2022, 06:35 AM IST
  • ಕೊಪ್ಪಳ ಜಿಲ್ಲೆಯ ಕುಷ್ಟಗಿ ಪುರಸಭೆಗೆ ಡೇನಲ್ಮ್ ಅಡಿಯಲ್ಲಿ ಸಂಪನ್ಮೂಲ ವ್ಯಕ್ತಿಗಳ ನೇಮಕಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ
ಪಿಯುಸಿ ತೇರ್ಗಡೆಯಾಗಿದ್ದಿರಾ? ಹಾಗಿದ್ದಲ್ಲಿ ಈ ಜಿಲ್ಲೆಯ ಯುವಕರಿಗೆ ಇಲ್ಲಿದೆ ಉದ್ಯೋಗದ ಸುವರ್ಣಾವಕಾಶ..! title=

ಬೆಂಗಳೂರು: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪುರಸಭೆಗೆ ಡೇನಲ್ಮ್ ಅಡಿಯಲ್ಲಿ ಸಂಪನ್ಮೂಲ ವ್ಯಕ್ತಿಗಳ ನೇಮಕಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನದಯಾಳ ಅಂತ್ಯೋದಯ ಯೋಜನೆ-ರಾಷ್ಟ್ರೀಯಯ ನಗರ ಜೀವನೋಪಾಯ ಅಭಿಯಾನ (ಡೇನಲ್ಮ್) ಯೋಜನಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಯನ್ನು ಸೃಜಿಸಿ ಗೌರವ ಧನ  ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಬೇಕಾಗಿದ್ದು, ಅರ್ಹ ಸ್ವ-ಸಹಾಯ ಸಂಘಗಳ ಸದಸ್ಯರಿಂದ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Big News: ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ, ಧಗಧಗಿಸಿ ಹೊತ್ತಿ ಉರಿದ ಶಾಂಪಿಂಗ್ ಮಾಲ್!

ಸಂಪನ್ಮೂಲ ವ್ಯಕ್ತಿಗಳ ಹುದ್ದೆ ಹಾಗೂ ಅರ್ಹತೆ ವಿವರ;

ಹುದ್ದೆಯ ಹೆಸರು, ಸಮುದಾಯ ಸಂಪನ್ಮೂಲ ವ್ಯಕ್ತಿ. ಹುದ್ದೆಗಳ ಸಂಖ್ಯೆ 2 (ಎರಡು), ಮಾಸಿಕ ರೂ 8000 ಟಿ.ಎ ಗರಿಷ್ಠ ರೂ 2000 ಗೌರವಧನ ನೀಡಲಾಗುವುದು.

ಕನಿಷ್ಠ ಪಿ.ಯು.ಸಿ ತೆರ್ಗಡೆಯಾಗಿರಬೇಕು.

ಕಂಪ್ಯೂಟರ್ ನಿರ್ವಹಣೆ ಜ್ಞಾನ (ಪ್ರಮಾಣ ಪತ್ರ) ಹೊಂದಿರಬೇಕು.

ಕುಷ್ಟಗಿ ಪುರಸಭೆ ವ್ಯಾಪ್ತಿಯ ಸ್ವ-ಸಹಾಯ ಸಂಘದಲ್ಲಿ ಕನಿಷ್ಠ ಮೂರು ವರ್ಷದಿಂದ ಸದಸ್ಯೆಯಾಗಿರಬೇಕು

ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯೆಯಾಗಿರಬೇಕು.

ಸ್ವ-ಸಹಾಯ ಸಂಘದಲ್ಲಿ ಆಂತರಿಕ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿಸಿರಬೇಕು.

ಸ್ವ-ಸಹಾಯ ಸಂಘದಲ್ಲಿ ಆಂತರಿಕ ಸಾಲ ಪಡೆದು ಕಟ ಬಾಕಿದಾರರಾಗಿರಬಾರದು.

ವಯಸ್ಸು 18 ರಿಂದ 45 ವರ್ಷದೊಳಗಿರಬೇಕು. ಸರ್ಕಾರಿ/ ಅರೆ ಸರಕಾರಿ/ ಎನ್.ಜಿ.ಓಗಳಲ್ಲಿ ಉದ್ಯೋಗಸ್ಥರಾಗಿರಬಾರದು.

ಕಡ್ಡಾಯವಾಗಿ ಮಹಿಳೆಯವರಿಗೆ ಮಾತ್ರ.

ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಸಮಿತಿಯ ನಿರ್ಣಯವೇ ಅಂತಿಮವಾದದ್ದು, ಆಸಕ್ತ ಅಭ್ಯರ್ಥಿಗಳು ಕಾರ್ಯಾಲಯದ ಅವಧಿಯಲ್ಲಿ ಸಮುದಾಯ ಸಂಘಟನಾಧಿಕಾರಿಗಳನ್ನು ಸಂಪರ್ಕಿಸಿ ನಿಗದಿ ಪಡಿಸಿದ ಅರ್ಜಿ ನಮೂನೆಯಲ್ಲಿ ಧೃಢೀಕೃತ ದಾಖಲೆಗಳೊಂದಿಗೆ ಜ. 21 ರೊಳಗಾಗಿ ಅರ್ಜಿ ಸಲ್ಲಿಸಬೇಕು.ಅವಧಿ ಮೀರಿಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News