ಅನಧಿಕೃತ ನೀರಿನ‌ ಸಂಪರ್ಕ ಹೊಂದಿದ್ದರೆ ದಾಖಲಾಗುತ್ತೆ ಕ್ರಿಮಿನಲ್‌ಕೇಸ್

ಈಗಾಗಲೇ 1 ಸಾವಿರಕ್ಕೂ ಹೆಚ್ಚು ಅನಧಿಕೃತ ಸಂಪರ್ಕದ ವಿರುದ್ಧ ಪೊಲೀಸ್‌‌ಠಾಣೆಯಲ್ಲಿ ದೂರು ದಾಖಲು.

Last Updated : Nov 21, 2018, 11:06 AM IST
ಅನಧಿಕೃತ ನೀರಿನ‌ ಸಂಪರ್ಕ ಹೊಂದಿದ್ದರೆ ದಾಖಲಾಗುತ್ತೆ ಕ್ರಿಮಿನಲ್‌ಕೇಸ್ title=

ಬೆಂಗಳೂರು: ಅನಧಿಕೃತವಾಗಿ ನೀರಿನ ಸಂಪರ್ಕ ಹೊಂದಿರುವ ಬಳಕೆದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣದಡಿ ಎಫ್‌ಐಆರ್ ದಾಖಲಿಸಿ, ಕ್ರಮ ಕೈಗೊಳ್ಳುವಂತೆ ಜಲಮಂಡಳಿ ಅಧಿಕಾರಿಗಳಿಗೆ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ಬಿಡಬ್ಲ್ಯೂಎಸ್‌ಎಸ್‌ಬಿ ವಿಮರ್ಷಣಾ ಸಭೆ ನಿಗಮದ ಸಂಪೂರ್ಣ ಮಾಹಿತಿ ಪಡೆದರು.

ಬೆಂಗಳೂರಿನಲ್ಲಿ ಪೈಪ್‌ಲೈನ್‌ ಗಳಿದಂಲೇ ಶೇ.25 ರಷ್ಟು ನೀರು ಸೋರಿಕೆಯಾಗುತ್ತಿದೆ. ಇದನ್ನು ಹೊರತು ಪಡಿಸಿ ನೀರಿನ‌ ಶುಲ್ಕ ಪಾವತಿಸದೇ, ಅನಧಿಕೃತ ಸಂಪರ್ಕ ಹೊಂದಿ ನೀರು ಬಳಕೆ ಮಾಡುವವರು ಇದ್ದಾರೆ. ಈಗಾಗಲೇ 1 ಸಾವಿರಕ್ಕೂ ಹೆಚ್ಚು ಅನಧಿಕೃತ ಸಂಪರ್ಕದ ವಿರುದ್ಧ ಪೊಲೀಸ್‌‌ಠಾಣೆಗೆ ದೂರು‌ ನೀಡಿದ್ದೇವೆ. ಆದರೆ ಎಫ್‌ಐಆರ್‌ ದಾಖಲಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೇವಲ ದೂರು ನೀಡುವುದರಿಂದ ಅನಧಿಕೃತ ಸಂಪರ್ಕವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ.‌ ಅಂಥವರ ವಿರುದ್ಧ ಎಫ್‌ಐಆರ್‌‌ ದಾಖಲಿಸಿ.‌ ಇದರಿಂದ, ಅನಧಿಕೃತ ಸಂಪರ್ಕ ಹೊಂದಲು ಮುಂದಾಗುವುದಿಲ್ಲ. ಯಾವುದೇ ದೂರಾದರೂ ಕ್ರಿಮಿನಲ್‌ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಿದರು. 

ಇದರ ಜೊತೆಗೆ ಪೈಪ್‌ಲೈನ್‌ ಮೂಲಕವೂ ಸೋರಿಕೆಯಾಗುತ್ತಿರುವ ಬಗ್ಗೆ ಶೇ.25 ರಷ್ಟು ಎಂದು ಅಂದಾಜಿಸಲಾಗಿದೆ. ಆದರೆ ನಿಖರತೆ ಇಲ್ಲ. ಎಷ್ಟೆಲ್ಲ ಹಳೆಯ ಪೈಪ್‌ಲೈನ್‌ ಇದೆ ಹಾಗೂ ಎಲ್ಲೆಲ್ಲಿ ಸೋರಿಕೆಯಾಗುತ್ತಿದೆ ಎಂಬುದರ ಬಗ್ಗೆ ಆಡಿಟ್ ನಡೆಸಿ, ವರದಿ ತರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಳೇ ನೀರಿನ ಪೈಪ್‌ಲೈನ್‌ ಬದಲಿಸುವ ಕಾರ್ಯ ನಡೆಸಿದ್ದು ದಕ್ಷಿಣ, ಪಶ್ಚಿಮ, ಕೇಂದ್ರ ಭಾಗದಲ್ಲಿ ಯುಎಫ್‌ಡಬ್ಲ್ಯೂ ಯೋಜನೆ ಕೈಗೊಂಡು, 635 ಕೋಟಿ ರೂ. ವೆಚ್ಚದಲ್ಲಿ 132 ಕಿ.ಮೀ. ಉದ್ದದ ಅತ್ಯಂತ ಹಳೆಯ ಪೈಪ್‌ಲೈನ್‌ ಬದಲಿಸಲಾಗಿದೆ. ಇದರಿಂದ ಸೋರಿಕೆ ಪ್ರಮಾಣ ಈ ಭಾಗದಲ್ಲಿ ಕಡಿಮೆಯಾಗಿದೆ. ಆದರೆ ಸಂಪೂರ್ಣ ಸೋರಿಕೆಯನ್ನು‌ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Trending News