ಬೆಂಗಳೂರು: ತಮಿಳು ನಾಡಿಗೆ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿರುವ ತಮಿಳು ಸೂಪರ್ಸ್ಟಾರ್ ರಜನೀಕಾಂತ್ ಗೆ ಪ್ರತಿಕ್ರಿಯೆಯಾಗಿ ರಾಜ್ಯದಲ್ಲಿನ ಜಲಾಶಯಗಳ ಸ್ಥಿತಿಗತಿಯನ್ನು ಕಣ್ಣಾರೆ ಕಂಡು ನಿಜ ಪರಿಸ್ಥಿತಿಯನ್ನು ಅರಿತುಕೊಳ್ಳುವ ಸಲುವಾಗಿ ಕರ್ನಾಟಕಕ್ಕೆ ಭೇಟಿ ನೀಡುವಂತೆ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಜನೀಕಾಂತ್ ಅವರನ್ನು ಆಹ್ವಾನಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಡಿಕೆ, ರಜನಿಕಾಂತ್ ಕಾವೇರಿ ನದಿಯ ನೀರಿನಲ್ಲಿ ತಮಿಳುನಾಡಿನ ಪಾಲನ್ನು ಬಿಡುಗಡೆ ಮಾಡಲು ಹೊಸ ಕರ್ನಾಟಕ ಸರ್ಕಾರವನ್ನು ಕೋರಿದ್ದಾರೆ. ರಾಜ್ಯದಲ್ಲಿನ ಜಲಾಶಯಗಳ ಸ್ಥಿತಿಗತಿಯನ್ನು ಅರಿಯುವ ಸಲುವಾಗಿ ಕರ್ನಾಟಕಕ್ಕೇ ಒಮ್ಮೆ ಭೇಟಿ ಕೊಡಿ ಎಂದು ನಾನು ರಜನೀಕಾಂತ್ ಅವರನ್ನು ಆಹ್ವಾನಿಸಿದ್ದೇನೆ. ರಜನೀಕಾಂತ್ ಅವರು ಕರ್ನಾಟಕಕ್ಕೆ ಭೇಟಿಕೊಟ್ಟು ಇಲ್ಲಿನ ಜಲಾಶಯಗಳ ಸ್ಥಿತಿಗತಿಯನ್ನು ಕಣ್ಣಾರೆ ಕಂಡರೆ ಅವರಿಗೆ ನಿಜಸ್ಥಿತಿಯ ಅರಿವಾಗುತ್ತದೆ ಎಂದು ಹೆಚ್ಡಿಕೆ ಹೇಳಿದರು.
I have invited Rajinikanth to come here and look at the condition of our reservoirs, water is not sufficient. I am sure he will understand: HD Kumaraswamy, CM-designate on Rajinikanth asking new Karnataka Govt to release Tamil Nadu's share of Cauvery river water pic.twitter.com/whONZbufB9
— ANI (@ANI) May 21, 2018