ಬಾಯಿ ಸುಡಲಿದೆ ಟೀ, ಕಾಫಿ ! ದರ ಏರಿಕೆ ಬಹುತೇಕ ಫಿಕ್ಸ್.!

 ಸಿಲಿಂಡರ್ ದರ ಏರಿಕೆ, ಹಾಲು ಬೆಲೆಯಲ್ಲಿನ ಹೆಚ್ಚಳದಿಂದ ಹೋಟೆಲ್ ಮಾಲೀಕರ ಸಂಕಷ್ಟ ಕೂಡಾ ಹೆಚ್ಚಾಗಿದೆ.  ಈ ಹಿನ್ನೆಲೆಯಲ್ಲಿ ಕಾಫಿ, ಟೀ ಬೆಲೆಯಲ್ಲಿ ಏರಿಕೆಯಾಗುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.  

Written by - Ranjitha R K | Last Updated : Nov 15, 2022, 08:52 AM IST
  • ಗ್ರಾಹಕರಿಗೆ ಮತ್ತೊಂದು ಬಿಸಿ ತಟ್ಟಲಿದೆ.
  • ದುಬಾರಿಯಾಗುವುದು ಟೀ ಕಾಫಿ
  • ದರ ಏರಿಕೆ ಬಹುತೇಕ ಫಿಕ್ಸ್
ಬಾಯಿ ಸುಡಲಿದೆ ಟೀ, ಕಾಫಿ !  ದರ ಏರಿಕೆ ಬಹುತೇಕ ಫಿಕ್ಸ್.! title=
tea cofee price hike (file photo)

ಬೆಂಗಳೂರು : ಹಾಲು ದರ ಏರಿಕೆ ಬೆನ್ನಲ್ಲೇ ಇದೀಗ ಗ್ರಾಹಕರಿಗೆ ಮತ್ತೊಂದು ಬಿಸಿ ತಟ್ಟಲಿದೆ. ಹೌದು,  ಸಿಲಿಂಡರ್ ಬೆಲೆ ಏರಿಕೆ, ಹಾಲು ದರ ಏರಿಕೆ ಹಿನ್ನೆಲೆಯಲ್ಲಿ ಹೊಟೇಲ್ ನಲ್ಲಿ ಟೀ , ಕಾಫಿ ಬೆಲೆ ಕೂಡಾ ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ. 

ಹಾಲು ದರ ಏರಿಕೆ, ಸಿಲಿಂಡರ್ ಬೆಲೆ  ಏರಿಕೆ ಹೋಟೆಲ್ ಮಾಲೀಕರ ಮೇಲೆ ತೀವ್ರ ಹೊರೆಯಾಗಿದೆ. ಕಮರ್ಷಿಯಲ್ ಎಲ್ ಪಿಜಿ ಸಿಲಿಂಡರ್ ಮೇಲೆ ನೀಡುತ್ತಿದ್ದ ರಿಯಾಯಿತಿಯನ್ನು ಕೂಡಾ ರದ್ದುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತೀ ಕಮರ್ಷಿಯಲ್ ಸಿಲಿಂಡರ್ ಗೆ 300ರೂ ಹೆಚ್ಚಿನ ಬೆಲೆಯನ್ನು ಪಾವತಿಸಬೇಕಾಗುತ್ತದೆ.  ಇದರ ನಡುವೆಯೇ ಹಾಲಿನ ದರದಲ್ಲಿ ಕೂಡಾ 3 ರೂಪಾಯಿ ಹೆಚ್ಚಳವಾಗಿದೆ. 

ಇದನ್ನೂ ಓದಿ : Yadagiri: ಆನೆ ಕಾಲು ಮಾತ್ರೆ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಈ ರೀತಿ ಸಿಲಿಂಡರ್ ದರ ಏರಿಕೆ, ಹಾಲು ಬೆಲೆಯಲ್ಲಿನ ಹೆಚ್ಚಳದಿಂದ ಹೋಟೆಲ್ ಮಾಲೀಕರ ಸಂಕಷ್ಟ ಕೂಡಾ ಹೆಚ್ಚಾಗಿದೆ.  ಈ ಹಿನ್ನೆಲೆಯಲ್ಲಿ ಕಾಫಿ, ಟೀ ಬೆಲೆಯಲ್ಲಿ ಏರಿಕೆಯಾಗುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.  

ಈ ಬಗ್ಗೆ ಕೆಲವೇ ದಿನಗಳಲ್ಲಿ  ಹೋಟೆಲ್ ಮಾಲೀಕರ ಸಂಘದ ಸಭೆ ನಡೆಯಲಿದೆ. ಸಭೆಯಲ್ಲಿ ಹೋಟೆಲ್ ಮಾಲೀಕರ ಜೊತೆಗೆ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಯಲಿದೆ. ಚರ್ಚೆ ಬಳಿಕ ಟೀ  ಕಾಫಿ ದರ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಟೀ  ಕಾಫಿ ದರದಲ್ಲಿ   ಕನಿಷ್ಟ 2ರೂ ಏರಿಕೆಯಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ  ಕಾಫಿ, ಟೀ ಬೆಲೆ 10 ರೂ ನಿಂದ 15ರೂ ವರೆಗೂ ಇದೆ. ಆದರೂ ದಿಢೀರ್ ಎಂದು ಬೆಲೆ ಏರಿಕೆಮಾಡುವುದಿಲ್ಲ, ಸಭೆಯಲ್ಲಿ ಚರ್ಚಿಸಿ ನಂತರವೇ ನಿರ್ಧಾರ ತೆಗೆದುಕೊಳ್ಳುವುದಾಗಿ ಹೋಟೆಲ್ ಮಾಲೀಕರ ಸಂಘ ತಿಳಿಸಿದೆ. 

ಇದನ್ನೂ ಓದಿ : ಧರ್ಮ, ಜಾತಿಗಳ ಮಧ್ಯೆ ರಾಜಕಾರಣಿಗಳು ಜಗಳ ಹಚ್ಚುತ್ತಿದ್ದಾರೆ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News