ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು, ಕಾಲೇಜಿನ ಹೊರಗೆ 'We Want Justice' ಘೋಷಣೆ

 ಹೈಕೋರ್ಟಿನ ಮಧ್ಯಂತರ ಆದೇಶದ ಅನ್ವಯ ಶಿಕ್ಷಕರು, ಹಿಜಾಬ್  ತೊಟ್ಟಿದ್ದ ವಿದ್ಯಾರ್ಥಿನಿಯರನ್ನು ತಡೆದಿದ್ದಾರೆ. ಈ ವೇಳೆ ವಾಗ್ವಾದ ಗಲಾಟೆ ನಡೆದಿದೆ. 

Written by - Ranjitha R K | Last Updated : Feb 16, 2022, 12:39 PM IST
  • ಕರ್ನಾಟಕದಲ್ಲಿ 11 ಮತ್ತು 12ನೇ ತರಗತಿಯ ಶಾಲೆಗಳು ಪುನರಾರಂಭ
  • ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ತಡೆದ ಶಿಕ್ಷಕಿ
  • ಕಾಲೇಜು ಪ್ರವೇಶ ನೀಡುವಂತೆ ವಿದ್ಯಾರ್ಥಿನಿಯರ ಗಲಾಟೆ
 ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು, ಕಾಲೇಜಿನ ಹೊರಗೆ 'We Want Justice' ಘೋಷಣೆ  title=
ಕರ್ನಾಟಕದಲ್ಲಿ 11 ಮತ್ತು 12ನೇ ತರಗತಿಯ ಶಾಲೆಗಳು ಪುನರಾರಂಭ (file photo)

ವಿಜಯಪುರ : ಹಿಜಾಬ್ (Hijab Contraversy) ವಿಚಾರವಾಗಿ ಮತ್ತೆ ಗದ್ದಲ ಎದ್ದಿದೆ. ವಿಜಯಪುರದ ಕಾಲೇಜೊಂದಕ್ಕೆ ಹಿಜಾಬ್ ಧರಿಸಿಕೊಂಡು  ಬಂದ ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶ ನೀಡುವಂತೆ ಒತ್ತಾಯಿಸಿದ್ದಾರೆ. ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿಕೊಂಡೇ, ಕಾಲೇಜಿನ ಒಳಗೆ  ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಶಿಕ್ಷಕರು ಅವರನ್ನು ತಡೆದಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು, 'We Want Justice' ಎಂಬ ಘೋಷಣೆಗಳನ್ನು ಕೂಗಿದ್ದಾರೆ.

ಹೈಕೋರ್ಟ್‌ನ ಮಧ್ಯಂತರ ಆದೇಶ ಪಾಲಿಸುತ್ತಿರುವ ಶಿಕ್ಷಕರು : 
ನ್ಯಾಯಾಲಯದ ಅಂತಿಮ ಆದೇಶದವರೆಗೆ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಉಡುಗೆಗಳಿಗೆ ಅನುಮತಿ ನಿರಾಕರಿಸಿ, ಕರ್ನಾಟಕ ಹೈಕೋರ್ಟ್ (Karnataka high court) ಮಧ್ಯಂತರ ಆದೇಶವನ್ನು ನೀಡಿದೆ. ಕರ್ನಾಟಕ ಹೈಕೋರ್ಟ್ ಇಂದು ಮಧ್ಯಾಹ್ನ 2.30ಕ್ಕೆ ಹಿಜಾಬ್ ಪ್ರಕರಣದ ವಿಚಾರಣೆ ನಡೆಸಲಿದೆ. ಹೈಕೋರ್ಟಿನ ಮಧ್ಯಂತರ ಆದೇಶದ ಅನ್ವಯ ಶಿಕ್ಷಕರು, ಹಿಜಾಬ್ (Hijab) ತೊಟ್ಟಿದ್ದ ವಿದ್ಯಾರ್ಥಿನಿಯರನ್ನು ತಡೆದಿದ್ದಾರೆ. ಈ ವೇಳೆ ವಾಗ್ವಾದ ಗಲಾಟೆ ನಡೆದಿದೆ. 

ಇದನ್ನೂ ಓದಿ : ಕನ್ನಡದ ಹಿರಿಯ ಸಾಹಿತಿ, ಚೆಂಬೆಳಕಿನ‌ ಖ್ಯಾತಿಯ ಕವಿ ನಾಡೋಜ ಚೆನ್ನವೀರ ಕಣವಿ ಇನ್ನಿಲ್ಲ

ಕರ್ನಾಟಕದಲ್ಲಿ ಹೈಕೋರ್ಟ್‌ನ (Karnataka high court) ಮಧ್ಯಂತರ ಆದೇಶದ ನಂತರ 11 ಮತ್ತು 12 ನೇ ತರಗತಿಗೆ ಶಾಲೆಗಳು ಪುನರಾರಂಭಗೊಂಡಿವೆ. ಆದರೆ ಕೋರ್ಟ್ ಮಧ್ಯಂತರ ಆದೇಶದ ಹೊರತಾಗಿಯೂ, ವಿದ್ಯಾರ್ಥಿನಿಯರು ಹಿಜಾಬ್  (Hijab Contraversy) ಧರಿಸಿಕೊಂಡು ಕಾಲೇಜಿಗೆ ಬಂದಿದ್ದಾರೆ. ಮಾತ್ರವಲ್ಲ,  ಹಿಜಾಬ್ ಜೊತೆಗೆ ಕಾಲೇಜಿಗೆ ಅಡ್ಮಿಷನ್ ತೆಗೆದುಕೊಳ್ಳುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.  ಈ ಸಂದರ್ಭದಲ್ಲಿ ಶಿಕ್ಷಕಿ ವಿದ್ಯಾರ್ಥಿನಿಯರನ್ನು ತಡೆದಾಗ, ಗಲಾಟೆ ಆರಂಭವಾಗಿದೆ. 

ಇದನ್ನೂ ಓದಿ : Hijab Controversy: ಅಲ್ಪಸಂಖ್ಯಾತ ಸಮುದಾಯದ ಪರ ಕೈ ಬ್ಯಾಟಿಂಗ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News