ಬೆಂಗಳೂರು: ಅದು ಮಾವುಗಳ ಲೋಕ. ಒಂದಲ್ಲಾ ಎರಡಲ್ಲಾ. ಬಗೆ ಬಗೆಯ ಮಾವಿನ ಹಣ್ಣುಗಳು ಬೆಂಗಳೂರು ಜನರನ್ನು ಕೈ ಬೀಸಿ ಕರೆಯುವಂತೆ ಭಾಸವಾಗುತ್ತೆ. ಅಲ್ಲಿ ಹೋದರೆ ಘಮ್ ಎಂದು ಮಾವುಗಳ ಗಂಧ ಎದೆ ಹೊಕ್ಕುತ್ತವೆ. ಈ ಅನುಭವ ಆಗೋದು ಬೆಂಗಳೂರಿನ ಹಾಪ್ ಕಾಮ್ಸ್ ಮಾವು ಮೇಳದಲ್ಲಿ. ಮಾವು ಮೇಳ ನಡಿತಿರೋದಾದ್ರು ಎಲ್ಲಿ..? ರೇಟೆಷ್ಟು..? ಎಲ್ಲಾ ಡೀಟೇಲ್ಸ್ ಇಲ್ಲಿದೆ ನೋಡಿ.
ಲಾಲ್ ಬಾಗ್ ಬಳಿ ಇರುವ ಹಾಪ್ ಕಾಮ್ಸ್ ನಲ್ಲಿ ಇಂದಿನಿಂದ ಮಾವು ಮೇಳ ಶುರುವಾಗಿದೆ. ಮಾವಿನ ಜೊತೆಗೆ ಹಲಸು ಕೂಡ ಮಾರಾಟಕ್ಕಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಹಾಪ್ ಕಾಮ್ಸ್ ಹಾಗೂ ತೋಟಗಾರಿಕಾ ಮಹಾಮಂಡಳಿ ಮಾವು ಮೇಳ ಆಯೋಜಿಸಿದ್ದು, ಇಂದಿನಿಂದ ಏಳು ದಿನಗಳ ಕಾಲ ನಡೆಯಲಿದೆ. ಮಾವು ಮೇಳದಲ್ಲಿ ಒಟ್ಟು 17 ತಳಿಯ ಮಾವುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್‍ನ ‘ಗ್ಯಾರಂಟಿ ಸೂತ್ರ’ ದೇಶವನ್ನು ದಿವಾಳಿ ಮಾಡುತ್ತದೆ: ಪ್ರಧಾನಿ ಮೋದಿ
ಮಾವು ಮೇಳದಲ್ಲಿ ಮಾವಿನ ದರ :
• ತೋತಾಪುರಿ - ₹31
• ಬಾದಾಮಿ - ₹132
• ಅಲ್ಫೋನ್ಸ್ - ₹139
• ರಸ್‌ಪುರಿ - ₹112
• ಸೆಂಧೂರ - ₹52
• ಬೈಗಂಪಲ್ಲಿ - ₹52
• ಮಲಗೊವಾ - ₹144
• ಸಕ್ಕರೆ ಗುತ್ತಿ - ₹122
• ಇಮಾಮ್ ಪಸಂದ್ - ₹149
• ಕೇಸರ್ - ₹104
• ಮಲ್ಲಿಕ - ₹108
ವಿಶ್ವ ವಿಖ್ಯಾತಿ ಪಡೆದ ಶ್ರೀನಿವಾಸಪುರ ಮಾವು, ಕನಕಪುರಾವು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಆಂಧ್ರಪ್ರದೇಶ, ತಮಿಳುನಾಡು ಸೇರಿ ಮಹಾರಾಷ್ಟ್ರದ ಮಾವಿನ ಹಣ್ಣುಗಳು ಇಲ್ಲಿ ಸಖತ್ ಫೇಮಸ್, ಹೀಗಾಗಿ ಜನರು ಕೂಡ ನೆಚ್ಚಿನ ಮಾವಿನ ಹಣ್ಣು ಖರೀದಿಸಲು ಮುಗಿಬಿದ್ದಿದ್ರು.
ಇದನ್ನೂ ಓದಿ: ಸಿದ್ದಗಂಗಾ ಮಠದ ವಸತಿ ನಿಲಯ ಟೆಂಡರ್ ಪ್ರಕ್ರಿಯೆ ಮುಂದುವರೆಸಲು ಸಿಎಂ ಸಿದ್ದರಾಮಯ್ಯ ಸೂಚನೆ
ಇನ್ನು ಮಾವಿನ ಜೊತೆಗೆ ಹಲಸು ಕೂಡ ಮಾರಟಕ್ಕೆ ಇಡಲಿದೆ. ಒಟ್ಟು 2 ಬಗೆಯ ಹಲಸು ಮೇಳದಲ್ಲಿ ಇಡಲಾಗಿದೆ. ಹೊರಗಿನ ಮಾರುಕಟ್ಟೆಯಲ್ಲಿ ಕೆಜಿಗೆ ನೂರಾರು ರೂಪಾಯಿ ಬೆಲೆ ಇರುವ ಹಣ್ಣುಗಳು ಇಲ್ಲಿ ಕೈಗೆಟಕುವ ಬೆಲೆಗೆ ಲಭ್ಯವಿದೆ. ಜೊತೆಗೆ ಕಾರ್ಬೋಡೈ ಆಕ್ಸಿಡ್ ರಹಿತವಾಗಿ ಹಣ್ಣುಗಳ ಶುಶ್ರೂಶೆ ಮಾಡಲಾಗಿದ್ದು ಮೇಳದಲ್ಲಿ ಕೆಮಿಕಲ್ ಫ್ರೀ ಹಣ್ಣುಗಳು ಜನರಿಗೆ ಲಭ್ಯವಾಗಲಿದೆ.
ಒಟ್ಟಾರೆ... ವರ್ಷದ ಮೇ ತಿಂಗಳು ಬಂತು ಅಂದ್ರೆ ಸಾಕು ಹಣ್ಣಿನ ರಾಜ ರಾಜಧಾನಿಯಲ್ಲಿ ಧರ್ಬಾರ್ ನಡೆಸ್ತಾನೆ..ಬೇರೆ ಯಾವ ಹಣ್ಣು ಸೇಲಾಗೋಕು ಬಿಡದಷ್ಟು ಆರ್ಭಟ ನಡೆಸ್ತಾನೆ. ಹೀಗಾಗಿಯೇ ಲಾಲ್ ಬಾಗ್ ಹಾಪ್ ಕಾಮ್ಸ್ ನಲ್ಲಿ ಈ ಮಾವುಮೇಳಕ್ಕೆ ವಿಶೇಷ ಸ್ಥಾನ ಮಾನ ಇದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.