ಕರ್ನಾಟಕದಲ್ಲಿ ಮೂವರು ಸಿಎಂ, ಹೆಚ್.ಡಿ.ಕುಮಾರಸ್ವಾಮಿ ವಿಕಲಾಂಗ ಮುಖ್ಯಮಂತ್ರಿ; ಬಿಜೆಪಿ ಲೇವಡಿ

ದೇವೇಗೌಡರ ಕುಟುಂಬ ಮೊದಲು ಮುಖ್ಯಮಂತ್ರಿ ಯಾರೆಂಬುದನ್ನು ನಿರ್ಧರಿಸಬೇಕು ಎಂದು ಬಿಜೆಪಿ ಟೀಕಿಸಿದೆ. 

Last Updated : Aug 6, 2018, 05:21 PM IST
ಕರ್ನಾಟಕದಲ್ಲಿ ಮೂವರು ಸಿಎಂ, ಹೆಚ್.ಡಿ.ಕುಮಾರಸ್ವಾಮಿ ವಿಕಲಾಂಗ ಮುಖ್ಯಮಂತ್ರಿ; ಬಿಜೆಪಿ ಲೇವಡಿ title=

ಬೆಂಗಳೂರು: ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಒಬ್ಬರೇ ಮುಖ್ಯಮಂತ್ರಿ ಅಲ್ಲ, ಮೂವರು ಮುಖ್ಯಮಂತ್ರಿಗಳಿದ್ದಾರೆ ಎಂದು ಹೇಳುವ ಮೂಲಕ ದೇವೇಗೌಡರ ಕುಟುಂಬವನ್ನು ಮತ್ತೊಮ್ಮೆ ಬಿಜೆಪಿ ಲೇವಡಿ ಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಕರ್ನಾಟಕ ರಾಜ್ಯದಲ್ಲಿ ಮೂವರು ಮುಖ್ಯಮಂತ್ರಿಗಳಿದ್ದಾರೆ. ಅವರಲ್ಲೂ, ಹೆಚ್.ಡಿ.ಕುಮಾರಸ್ವಾಮಿ ವಿಕಲಾಂಗ ಸಿಎಂ, ಹೆಚ್.ಡಿ.ರೇವಣ್ಣ ಸೂಪರ್ ಸಿಎಂ, ಹೆಚ್.ಡಿ.ದೇವೇಗೌಡ ಸುಪ್ರೀಂ ಸಿಎಂ ಎಂದು ಹೇಳಿದೆ. ಅಷ್ಟೇ ಅಲ್ಲದೆ, ಈ ರಾಜ್ಯದಲ್ಲಿ ಹಲವು ಮುಖ್ಯಮಂತ್ರಿಗಳಿದ್ದರೂ ಇನ್ನೂ ಕಾರ್ಯನಿರ್ವಹಿಸುವ ಸರ್ಕಾರಕ್ಕಾಗಿ ಕಾಯುತ್ತಿದೆ. ದೇವೇಗೌಡರ ಕುಟುಂಬ ಮೊದಲು ಮುಖ್ಯಮಂತ್ರಿ ಯಾರೆಂಬುದನ್ನು ನಿರ್ಧರಿಸಬೇಕು ಎಂದು ಟೀಕಿಸಿದೆ. 

ಇದಕ್ಕೆ ಪ್ರತಿಕ್ರಿಯಿಸಿರುವ ಜೆಡಿಎಸ್​ ನೂತನ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ವಿವೇಚನೆಯಿಂದ ಮಾತನಾಡಬೇಕು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಮಾತನಾಡಬಹುದು. ಅವರೂ ಮಾತನಾಡುತ್ತಿದ್ದಾರೆ ಅಷ್ಟೆ ಎಂದಿದ್ದಾರೆ. 

Trending News