ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧೆ ಎಂದು ಘೋಷಿಸಿದ ಹೆಚ್.ಡಿ.ಕುಮಾರಸ್ವಾಮಿ

ತಮ್ಮ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಅಬ್ಬರಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಯಾವುದೇ ಕಾರಣಕ್ಕೂ ನಾನು ಚನ್ನಪಟ್ಟಣ ಕ್ಷೇತ್ರ ಬಿಟ್ಟು ಹೋಗುವುದಿಲ್ಲ, ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದರು.

Written by - Prashobh Devanahalli | Edited by - Manjunath N | Last Updated : Oct 22, 2022, 07:27 PM IST
  • ನಾನು ಚನ್ನಪಟ್ಟಣದಿಂದಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ.
  • ರಾಜ್ಯದ 120ಕ್ಕೂ ಹೆಚ್ಚು ಕಡೆ ನಾನು ಸಂಚಾರ ಮಾಡಬೇಕು.
  • ನನ್ನ ಕಾರ್ಯಕರ್ತರೇ ನನ್ನ ಚುನಾವಣೆ ನಡೆಸುತ್ತಾರೆ ಎಂದು ರಾಜಕೀಯ ವಿರೋಧಿಗಳಿಗೆ ಹೆಚ್‌.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟರು.
  ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧೆ ಎಂದು ಘೋಷಿಸಿದ ಹೆಚ್.ಡಿ.ಕುಮಾರಸ್ವಾಮಿ title=
file photo

ಚನ್ನಪಟ್ಟಣ/ರಾಮನಗರ: ತಮ್ಮ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಅಬ್ಬರಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಯಾವುದೇ ಕಾರಣಕ್ಕೂ ನಾನು ಚನ್ನಪಟ್ಟಣ ಕ್ಷೇತ್ರ ಬಿಟ್ಟು ಹೋಗುವುದಿಲ್ಲ, ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡಿದರು.

ಚನ್ನಪಟ್ಟಣದಲ್ಲಿ ಇಂದು ಅಲ್ಪಸಂಖ್ಯಾತರ ಘಟಕದ ಕಚೇರಿ ಉದ್ಘಾಟನೆ ನೆರವೇರಿಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಹಲವಾರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವಂತೆ ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕರೆಯುತ್ತಿದ್ದಾರೆ. ಆದರೆ ನಾನು ಆದರೆ, ನಾನು ಚನ್ನಪಟ್ಟಣದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ. ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಿಲ್ಲ  ಎಂದು ಹೇಳಿದರು.ಇದೇ ವೇಳೆ ಬಿಜೆಪಿ ಸರಕಾರ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್ ವಿರುದ್ಧ ಸಿಡಿಮಿಡಿಯಾದ ಹೆಚ್‌ಡಿಕೆ ಅವರು; ಇಂಥ ವ್ಯಕ್ತಿಗಳನ್ನು ( ಸಿ.ಪಿ.ಯೋಗೇಶ್ವರ್) ತರದವರನ್ನು ಇನ್ನೂ ನೂರು ಜನರನ್ನು ಕಳಿಸಲಿ, ನಾನು ಹೆದರಿ ಪಲಾಯನ ಮಾಡುವ ಪೈಕಿ ಅಲ್ಲ ಎಂದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಕೊಳಕು ಮಾಡಿ ಹಾಳು ಮಾಡಿದ್ದು ಅವರು. ಅದನ್ನೆಲ್ಲ ನಾನು ಈಗ ನಾನು ಕ್ಲೀನ್ ಮಾಡುತ್ತಿದ್ದೇನೆ. ಸಿ.ಪಿ.ಯೋಗೇಶ್ವರ್ ಅಂಬೇಡ್ಕರ್ ಭವನ ಕಟ್ಟುವುದಕ್ಕೆ ಕೂಡ ಬಿಡುತ್ತಿಲ್ಲ. ವಿನಾಕಾರಣ ಚನ್ನಪಟ್ಟಣ ಜನರಿಗೆ ತೊಂದರೆ ಕೊಡ್ತಾ ಇದ್ದಾರೆ. ಚನ್ನಪಟ್ಟಣಕ್ಕೆ ಯೋಗೇಶ್ವರ್ ಅಂತಹ 100 ಜನರನ್ನ ಕರೆದುಕೊಂಡು ಬನ್ನಿ, ನಾನು ಯಾವುದಕ್ಕೂ ತಲೆ ಕೆಡೆಸಿಕೊಳ್ಳೋದಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ನೇರವಾಗಿ ಚಾಟಿ ಬೀಸಿದರು.

ಇದನ್ನೂ ಓದಿ: Puneetha Parva: ಸೂರ್ಯ,ಚಂದ್ರ ಇರೋವರೆಗೂ ಅಪ್ಪು ಶಾಶ್ವತ: ದು‌ನಿಯಾ ವಿಜಯ್

ಗುದ್ದಲಿ ಪೂಜೆ ಮಾಡಬೇಕಾದರೆ ನಿಯಮ ಏನಿದೆ ಎನ್ನುವುದು ಇವರಿಗೆ ಗೊತ್ತಿಲ್ಲವೆ? ಈ ಸರಕಾರಕ್ಕೆ ಶಿಷ್ಟಾಚಾರ ಏನೆಂಬುದು ಗೊತ್ತಿಲ್ಲವೇ? ಸ್ವಲ್ಪವಾದರೂ ವಿವೇಚನೆ ಬೇಡವೇ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಚನ್ನಪಟ್ಟಣ ತಹಶೀಲ್ದಾರ್ ವಿರುದ್ಧವೂ ಕಿಡಿಕಿಡಿಯಾದ ಮಾಜಿ ಮುಖ್ಯಮಂತ್ರಿಗಳು; ನನ್ನ ಕ್ಷೇತ್ರದಲ್ಲಿ ಬಂದು ಆತ ಆಟವಾಡುತ್ತಿದ್ದಾರೆ. ಮುಂದಿನ ಆರು ತಿಂಗಳ ಬಳಿಕ ಆತ ಎಲ್ಲಿರುತ್ತರೆ ಎನ್ನುವುದು ಗೊತ್ತಿದೆ. ನಮ್ಮ ಕುಟುಂಬದಲ್ಲಿ ಇಂಥವರನ್ನು ಲಕ್ಷಾಂತರ ಜನರನ್ನು ನೋಡಿದ್ದೇವೆ. ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಲೂಟಿ ಹೊಡೆಯುತ್ತಿದ್ದಾರೆ. ಕೆಲ ಕಳ್ಳರ ಜೊತೆ ಸೇರಿ ಆ ತಹಶೀಲ್ದಾರ್ ರೈತರಿಗೆ ತೊಂದರೆ ಕೊಡ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು

ನಾನು ಯಾರಿಗೋ ಹೆದರಿ ರಾಮನಗರ ಬಿಟ್ಟು ಹೋಗುವ ಮಗ ಅಲ್ಲ. ನಾನು ದೇವೇಗೌಡರ ಕುಟುಂಬದಲ್ಲಿ ಹುಟ್ಟಿರೋದು.ಎಲ್ಲದಕ್ಕೂ ಹೋರಾಟ ಮಾಡುವ ಶಕ್ತಿ ನಮ್ಮ ಅಪ್ಪ ನನಗೆ ಕೊಟ್ಟಿದ್ದಾರೆ. ನಾನು ಚನ್ನಪಟ್ಟಣದಿಂದಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ರಾಜ್ಯದ 120ಕ್ಕೂ ಹೆಚ್ಚು ಕಡೆ ನಾನು ಸಂಚಾರ ಮಾಡಬೇಕು. ನನ್ನ ಕಾರ್ಯಕರ್ತರೇ ನನ್ನ ಚುನಾವಣೆ ನಡೆಸುತ್ತಾರೆ ಎಂದು ರಾಜಕೀಯ ವಿರೋಧಿಗಳಿಗೆ ಹೆಚ್‌.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟರು.

ಇದನ್ನೂ ಓದಿ: ತಾಯಿಗರ್ಭದಲ್ಲಿದ್ದಾಗಲೇ ಅಪ್ಪು-ನಾನು ಭೇಟಿಯಾಗಿದ್ದೇವು : ಯುವರತ್ನನನ್ನು ಸ್ಮರಿಸಿದ ನಟ ಸೂರ್ಯ..!

ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ತಾಲ್ಲೂಕು ಜೆಡಿಎಸ್ ಅಲ್ಪಸಂಖ್ಯಾತರ ಘಟದ ಅಧ್ಯಕ್ಷ ಸೈಯ್ಯದ್ ಫಾಜಿಲ್ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಹಾಜರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News