ಹುಬ್ಬಳ್ಳಿಯ ಪುಣ್ಯ ಭೂಮಿಗೆ ನಮಸ್ಕಾರ"-ಕನ್ನಡದಲ್ಲಿ ಪ್ರಧಾನಿ ಮೋದಿ ಭಾಷಣ

ಹುಬ್ಬಳ್ಳಿಯ ಸಿದ್ಧಾರೂಢ ಮಠ, ಮೂರು ಸಾವಿರ ಮಠದ ಪುಣ್ಯ ಭೂಮಿಗೆ ನಮಸ್ಕಾರ. ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಪುಣ್ಯ ನಾಡಿಗೆ ನನ್ನ ನಮಸ್ಕಾರಗಳು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕನ್ನಡದಲ್ಲಿಯೇ ಭಾಷಣ ಮಾಡುವ ಮೂಲಕ ಹುಬ್ಬಳ್ಳಿಯ ಜನತೆಗೆ ಅಭಿನಂದನೆ ಸಲ್ಲಿಸಿದರು.

Written by - Zee Kannada News Desk | Last Updated : Jan 12, 2023, 08:11 PM IST
  • ಸಿದ್ದೇಶ್ವರ ಸ್ವಾಮೀಜಿಯವರ ದೇಹಾಂತ್ಯವಾಗಿದೆ. ಸಿದ್ದೇಶ್ವರ ಸ್ವಾಮೀಜಿಯವರಿಗೆ ಶೃದ್ಧಾಂಜಲಿ ಸಲ್ಲಿಸುತ್ತೇನೆ
  • ಸ್ವಾಮಿ ವಿವೇಕಾನಂದರು ಕರ್ನಾಟಕದ ಜೊತೆಗೆ ನಂಟು ಹೊಂದಿದ್ದಾರೆ
  • ಅವರು ಹುಬ್ಬಳ್ಳಿ- ಧಾರವಾಡ ಮಾರ್ಗವಾಗಿ ಯಾತ್ರೆ ಮಾಡಿದ್ದಾರೆ
ಹುಬ್ಬಳ್ಳಿಯ ಪುಣ್ಯ ಭೂಮಿಗೆ ನಮಸ್ಕಾರ"-ಕನ್ನಡದಲ್ಲಿ ಪ್ರಧಾನಿ ಮೋದಿ ಭಾಷಣ  title=
Photo Courtsey: Twitter

ಹುಬ್ಬಳ್ಳಿ: ಹುಬ್ಬಳ್ಳಿಯ ಸಿದ್ಧಾರೂಢ ಮಠ, ಮೂರು ಸಾವಿರ ಮಠದ ಪುಣ್ಯ ಭೂಮಿಗೆ ನಮಸ್ಕಾರ. ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಪುಣ್ಯ ನಾಡಿಗೆ ನನ್ನ ನಮಸ್ಕಾರಗಳು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕನ್ನಡದಲ್ಲಿಯೇ ಭಾಷಣ ಮಾಡುವ ಮೂಲಕ ಹುಬ್ಬಳ್ಳಿಯ ಜನತೆಗೆ ಅಭಿನಂದನೆ ಸಲ್ಲಿಸಿದರು.

ಯುವಜನೋತ್ಸವಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಪಂಡಿತ ಬಸವರಾಜ ರಾಜಗುರು, ಸವಾಯಿ ಗಂಧರ್ವರ ಸೇವೆ ನಿಜಕ್ಕೂ ಸ್ಮರಣೀಯವಾಗಿದೆ ಎಂದರು.

ಇದನ್ನೂ ಓದಿ: ಪ್ರಧಾನಿ ರೋಡ್‌ ಶೋ ವೇಳೆ ಭದ್ರತಾ ಲೋಪ : ಗೇಟ್‌ ಹಾರಿ ಮೋದಿ ಕಡೆ ಬಂದ ವ್ಯಕ್ತಿ - ವಿಡಿಯೋ ನೋಡಿ

ಸಿದ್ದೇಶ್ವರ ಸ್ವಾಮೀಜಿಯವರ ದೇಹಾಂತ್ಯವಾಗಿದೆ. ಸಿದ್ದೇಶ್ವರ ಸ್ವಾಮೀಜಿಯವರಿಗೆ ಶೃದ್ಧಾಂಜಲಿ ಸಲ್ಲಿಸುತ್ತೇನೆ. ಸ್ವಾಮಿ ವಿವೇಕಾನಂದರು ಕರ್ನಾಟಕದ ಜೊತೆಗೆ ನಂಟು ಹೊಂದಿದ್ದಾರೆ. ಅವರು ಹುಬ್ಬಳ್ಳಿ- ಧಾರವಾಡ ಮಾರ್ಗವಾಗಿ ಯಾತ್ರೆ ಮಾಡಿದ್ದಾರೆ. ಸ್ವಾಮೀಜಿ ಶಿಕಾಗೋ ಯಾತ್ರೆಗೆ ಮೈಸೂರು ಅರಸರು ಸಹಾಯ ಮಾಡಿದ್ದರು. ಯುವ ಶಕ್ತಿಯಿದ್ದರೆ ಭವಿಷ್ಯ ನಿರ್ಮಾಣ ಮಾಡುವುದು ಸರಳ ಎಂದು ವಿವೇಕಾನಂದರು ಹೇಳಿದ್ದರು ಎಂದು ಅವರು ಹೇಳಿದರು.

ಇದನ್ನೂ ಓದಿ: CM Basavaraj Bommai: ಕೆಟ್ಟ ಸಂಸ್ಕೃತಿ ರಾಜಕಾರಣಕ್ಕೆ ಪ್ರವೇಶಿಸಲು ಕಾಂಗ್ರೆಸ್ ಮಹಾದ್ವಾರ: ಸಿಎಂ ಬೊಮ್ಮಾಯಿ

ಕರ್ನಾಟಕದ ಭೂಮಿಯೂ ಮಹಾನ್ ವ್ಯಕ್ತಿಗಳನ್ನು ಕೊಟ್ಟಿದೆ. ಕಿತ್ತೂರು ರಾಣಿ ಚೆನ್ನಮ್ಮ ದೇಶದ ಅಗ್ರ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸಂಗೊಳ್ಳಿ  ರಾಯಣ್ಣ ಅವರಂತಹ ಮಹಾನ್ ವೀರರ ಹೋರಾಟ ಬ್ರಿಟಿಷರನ್ನು ನಡಗಿಸಿತ್ತು. ಹುಬ್ಬಳ್ಳಿಯ ನಾರಾಯಣ ಡೋಣಿಯಂತಹ ಬಾಲಕ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಸಿಯಾಚಿನ್‌ನ ಚಳಿಯಲ್ಲಿ ಆರು ದಿನಗಳ ಕಾಲ ಸಾವಿನೊಂದಿಗೆ ಸೆಣಸಾಡಿದ್ದರು ಎಂದು ಈ ಭಾಗದ ಸಾಧಕರನ್ನು ಸ್ಮರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News