ಮಂಡ್ಯ : ದಸರಾ ಆಯುಧ ಪೂಜೆಗೆ ಕೇವಲ 50 ರೂ ಕೊಟ್ಟ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಕೋಟಿ ಕೋಟಿ ಬೊಕ್ಕಸಕ್ಕೆ ತುಂಬಿಕೊಳ್ಳುವ ಸರ್ಕಾರ ಚಿಲ್ಲರೆ ಕಾಸು ನೀಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಘಟಕಗಳಲ್ಲಿನ ಪ್ರತಿ ವಾಹನಕ್ಕೆ ತಲಾ 50 ರೂಪಾಯಿ. ವಿಭಾಗೀಯ ಕಾರ್ಯಗಾರಕ್ಕೆ 1000 ರೂಪಾಯಿ. ಪ್ರಾದೇಶಿಕ ಕಾರ್ಯಾಗಾರಕ್ಕೆ 2000 ರೂಪಾಯಿ ಹೀಗೆ ಆಯುಧ ಪೂಜೆಗಾಗಿ ಕೆಎಸ್‌ಆರ್‌ಟಿಸಿಗೆ ಸರ್ಕಾರ ಚಿಲ್ಲರೆ ಕಾಸು ಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಇದರಂದ ಬೇಸತ್ತಿರುವ ಸಿಬ್ಬಂದಿ ಸರ್ಕಾರ ಕೋಟಿ ಕೋಟಿ ಬೊಕ್ಕಸಕ್ಕೆ ತುಂಬಿಕೊಳುತ್ತೆ. ಆದ್ರೆ ಅಷ್ಟು ನಮಗೆ ಕೊಟ್ಟಿದ್ದು ಮಾತ್ರ ಚಿಲ್ಲರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಕೈದಿ ನೇಣಿಗೆ ಶರಣು
50 ರೂ ಕೊಟ್ಟು ಶ್ರದ್ಧಾಭಕ್ತಿಯಿಂದ ಆಯುಧ ಪೂಜೆ ಮಾಡುವಂತೆ ಸರ್ಕಾರ ಸೂಚಿಸಿದೆ. 50 ರೂಪಾಯಿಗೆ ನಾಲ್ಕು ನಿಂಬೆಹಣ್ಣು ಬರುವುದಿಲ್ಲ. ಪ್ರತಿ ವರ್ಷ ಕೂಡ ಸರ್ಕಾರ ಕೆಎಸ್‌ಆರ್‌ಟಿಸಿಗೆ ಕಡಿಮೆ ಹಣ ನೀಡಿ ಆಯುಧ ಪೂಜೆ ಮಾಡುವಂತೆ ಹೇಳುತ್ತಿದೆ. ಈಗೀನ ವಸ್ತುಗಳ ಬೆಲೆ ಗಗನಕ್ಕೇರಿದೆ ಈ ಸಂದರ್ಭದಲ್ಲಿ 50 ರೂ ಕೊಡುವುದು ಎಷ್ಟು ಸರಿ?. ಅನ್ನ ಕೊಡೋ ವಾಹನಕ್ಕೆ ಸರ್ಕಾರ ಘೋರ ಮೋಸ ಮಾಡ್ತಿದೆ. ತಮ್ಮ ಇಲಾಖೆಯ ಪೂಜೆಗೆ ಕೇವಲ ಚಿಲ್ಲರೆ ಕೊಟ್ಟಿದೆ. ಕೂಡಲೇ ಸರ್ಕಾರ ಎಚ್ಚೇತ್ತು ಪ್ರತಿ ವಾಹನಕ್ಕೆ 500 ರೂಪಾಯಿ ಬಿಡುಗಡೆ ಮಾಡಬೇಕು ಎಂದು ಸಿಬ್ಬಂದಿ ಆಗ್ರಹಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.