ಚಾಮರಾಜನಗರ : ದೇವರಿಗೆ ತಮ್ಮ ಇಷ್ಟಾರ್ಥ ಫಲಿಸಲೆಂದು ಭಕ್ತರು ವಿವಿಧ ಹರಕೆ, ಕೋರಿಕೆ ಪತ್ರಗಳನ್ನು ಹಾಕುವುದು ಸಾಮಾನ್ಯ. ಅದರಂತೆ, ಇಲ್ಲೋರ್ವ ಯುವತಿ ತಾನಿಚ್ಛೆಪಟ್ಟ ಯುವಕ ಸಿಗಲಿ ಎಂದು ಪತ್ರ ಹಾಕಿ ಬೇಡಿಕೊಂಡಿದ್ದಾಳೆ.
ಚಾಮರಾಜನಗರ ತಾಲೂಕಿನ ಮುಕ್ಕಡಹಳ್ಳಿ ಗ್ರಾಮದ " ಮಾಯಮ್ಮ ದೇವಮ್ಮ" ದೇವಾಲಯದಲ್ಲಿ ಇಂದು ಹುಂಡಿ ಎಣಿಕೆ ನಡೆದ ವೇಳೆ ಯುವತಿಯೊಬ್ಬಳು ಹಾಕಿದ್ದ ಪತ್ರ ಸಿಕ್ಕಿದೆ. ' ದೇವರೆ, ನನ್ನ ಮೂರ್ತಿನಾ ಬಿಟ್ಟು ಯಾರೂ ನನ್ನ ಕುತ್ತಿಗೆಗೆ ತಾಳಿ ಕಟ್ಟಬಾರದು' ಎಂದು ಆ ಪತ್ರದಲ್ಲಿ ಬರೆದು ಪ್ರಾರ್ಥನೆ ಸಲ್ಲಿಸಿದ್ದಾಳೆ. ಆದರೆ ಆ ಯುವತಿಯ ಪ್ರಾರ್ಥನೆ ಫಲಿಸಿತೇ ಇಲ್ಲವೇ ಎಂಬುದು ಸದ್ಯ ನಿಗೂಢವಾಗಿದೆ.
ಇದನ್ನೂ ಓದಿ : ಎರಡು ದಾಖಲೆ ಬರೆದ ಪಂಚರತ್ನ ರಥಯಾತ್ರೆ.! ರೆಕಾರ್ಡ್ ಬುಕ್ ಸೇರಿದ ಹೆಚ್ ಡಿಕೆ ಹಾರಗಳು .!
ಕೆಲ ದಿನಗಳ ಹಿಂದೆಯಷ್ಟೇ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯ ಹುಂಡಿ ಎಣಿಕೆ ಕಾರ್ಯ ನಡೆದಿದ್ದ ವೇಳೆ ಪತ್ರಗಳು, ಆಹ್ವಾನ ಪತ್ರಿಕೆಗಳು ಕೂಡ ಪತ್ತೆಯಾಗಿತ್ತು. ಏಸು ಭಕ್ತನೋರ್ವ ಕ್ರಿಸ್ತ ಹುಟ್ಟಿದ ಬಗೆ, ಕ್ರಿಸ್ತನನ್ನು ನಂಬಿದ್ದೆಲ್ಲಾ ಬರೆದು ದೇವರ ಹುಂಡಿಗೆ ಹಾಕಿದ್ದಾನೆ. " ದೇವರ ರಾಜ್ಯ ಸಮೀಪಿಸಿದೆ" ಎಂಬ ನಿಗೂಢಾರ್ಥ ವಾಕ್ಯವನ್ನು ಬರೆಡಿದ್ದಾನೆ.
ಇನ್ನು, ಯುವಕನೋರ್ವ ತನಗೆ ಹುಡುಗಿ ಕರುಣಿಸು, ಪ್ರೀತಿಯ ದೇವರೆ ಎಂದು ಶಿವಲಿಂಗದ ಚಿತ್ರ ಬರೆದು ಹುಂಡಿಗೆ ಹಾಕಿ ಪ್ರಾರ್ಥಿಸಿದ್ದಾನೆ. ಯುವತಿ ಭಾವಚಿತ್ರ, ಆಹ್ವಾನ ಪತ್ರಿಕೆಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿತ್ತು.
ಇದನ್ನೂ ಓದಿ : ಪ್ರಯಾಣಿಕರಿಗೆ ಶಾಕ್ ನೀಡಿದ ಬಿಎಂಟಿಸಿ.! ಮುಂದಿನ ವಾರದಿಂದ ಟಿಕೆಟ್ ದರ ಹೆಚ್ಚಳ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.