'ಗಂಗಾವತಿ-ದರೋಜಿ ರೈಲ್ವೇ ಮಾರ್ಗದ ಸರ್ವೇ ಕಾರ್ಯ ಶೀಘ್ರ ಪ್ರಾರಂಭ'

ಗಂಗಾವತಿಯಿಂದ ದರೋಜಿಗೆ ರೈಲ್ವೇ ಮಾರ್ಗದ ಸರ್ವೇ ಕಾರ್ಯಕ್ಕೆ ಕೇಂದ್ರ ರೈಲ್ವೇ ಇಲಾಖೆ ಮತ್ತು ರೈಲ್ವೇ ಬೋರ್ಡ್ ಹಸಿರು ನಿಶಾನೆ ತೋರಿಸಿದ್ದು, ಸರ್ವೇ ಕಾರ್ಯವನ್ನು ಶೀಘ್ರವಾಗಿ ಪ್ರಾರಂಭಿಸುವಂತೆ ಬೋರ್ಡ್ನಿಂದ ಅಧಿಕೃತ ಆದೇಶ ಹೊರಡಿಸಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.

Written by - Zee Kannada News Desk | Last Updated : May 20, 2022, 10:00 PM IST
  • ಸಂಸದರ ಒತ್ತಾಯದ ಮೇರೆಗೆ ರೈಲ್ವೇ ಬೋರ್ಡ್ ಈ ಹೊಸ ರೈಲ್ವೇ ಮಾರ್ಗದ ಸರ್ವೇ ಕಾರ್ಯಕ್ಕೆ ಸಮ್ಮತಿಸಿ ಇತ್ತೀಚೆಗೆ 18 ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಿದೆ.
  • ಹೊಸ ರೈಲು ಮಾರ್ಗದಿಂದ ಗಂಗಾವತಿಯಿಂದ ನೇರವಾಗಿ ಬಳ್ಳಾರಿ, ಬೆಂಗಳೂರು, ತಿರುಪತಿ, ವಿಜಯವಾಡ ಹಾಗೂ ಇತರೆ ನಗರಗಳಿಗೆ ಹೋಗಲು ಸ್ಥಳೀಯರಿಗೆ ಅನುಕೂಲವಾಗುವುದರ ಜೊತೆಗೆ ವಾಣಿಜ್ಯ ಉದ್ದೇಶಗಳಿಗೆ ಪೂರಕವಾಗಲಿದೆ.
'ಗಂಗಾವತಿ-ದರೋಜಿ ರೈಲ್ವೇ ಮಾರ್ಗದ ಸರ್ವೇ ಕಾರ್ಯ ಶೀಘ್ರ ಪ್ರಾರಂಭ' title=
file photo

ಕೊಪ್ಪಳ : ಗಂಗಾವತಿಯಿಂದ ದರೋಜಿಗೆ ರೈಲ್ವೇ ಮಾರ್ಗದ ಸರ್ವೇ ಕಾರ್ಯಕ್ಕೆ ಕೇಂದ್ರ ರೈಲ್ವೇ ಇಲಾಖೆ ಮತ್ತು ರೈಲ್ವೇ ಬೋರ್ಡ್ ಹಸಿರು ನಿಶಾನೆ ತೋರಿಸಿದ್ದು, ಸರ್ವೇ ಕಾರ್ಯವನ್ನು ಶೀಘ್ರವಾಗಿ ಪ್ರಾರಂಭಿಸುವಂತೆ ಬೋರ್ಡ್ನಿಂದ ಅಧಿಕೃತ ಆದೇಶ ಹೊರಡಿಸಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.

ಇದನ್ನೂ ಓದಿ : Sourav Ganguly New House : 40 ಕೋಟಿ ಕೊಟ್ಟು ಹೊಸ ಬಂಗಲೆ ಖರೀದಿಸಿದ ಗಂಗೂಲಿ!

ಗಂಗಾವತಿಯಿಂದ ದರೋಜಿಯ 36 ಕಿ.ಮೀ ಉದ್ದದ ರೈಲ್ವೇ ಮಾರ್ಗದ ಸರ್ವೇ ಕಾಮಗಾರಿಗೆ ಕೇಂದ್ರ ರೈಲ್ವೇ ಬೋರ್ಡ್ನಿಂದ 18 ಲಕ್ಷ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಿದ್ದು, ಗಂಗಾವತಿ ಭಾಗದ ಜನರ ಬಹುಕಾಲದ ಕನಸು ನನಸಾಗುವ ಕಾಲ ಹತ್ತಿರವಾಗುತ್ತಿದೆ.

ಹೊಸ ರೈಲು ಮಾರ್ಗದ ಸರ್ವೇ ಕಾರ್ಯಕ್ಕೆ ಈ ಹಿಂದೆ 2020ರಲ್ಲಿ ರೈಲ್ವೇ ಬೋರ್ಡ್ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಬಳಸುವಂತೆ ಅಧಿಕೃತವಾಗಿ ಸೂಚಿಸಿತ್ತು. ಆದರೆ ಕೋವಿಡ್-19 ಕಾರಣಗಳಿಂದಾಗಿ 2 ವರ್ಷ ಸಂಸದರ ಪ್ರದೇಶಾಭಿವೃದ್ಧಿ ಅನುದಾನ ಮಂಜೂರಾಗದೇ ಇದ್ದುದರಿಂದ ಸರ್ವೇ ಕಾರ್ಯ ಪ್ರಾರಂಭವಾಗಿರಲಿಲ್ಲ.

ಇದನ್ನೂ ಓದಿ: ಕಾರ್ಮಿಕರ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಿದ ಕೇಜ್ರಿವಾಲ್ ಸರ್ಕಾರ

ಸಂಸದರು ಈ ಹೊಸ ರೈಲು ಮಾರ್ಗ ಕಾಮಗಾರಿಗೆ ಕೇಂದ್ರ ಸರ್ಕಾರವೇ ಅನುದಾನ ಒದಗಿಸಿ ಸರ್ವೇ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರದ ರೈಲ್ವೇ ಮಂತ್ರಿ ಮತ್ತು ರೈಲ್ವೇ ಬೋರ್ಡ್ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಹಾಗೂ ಸಂಸತ್ತಿನ ಅಧಿವೇಶನದಲ್ಲಿ ಈ ವಿಷಯ ಕುರಿತು ಎಲ್ಲರ ಗಮನ ಸೆಳೆದು ಒತ್ತಾಯಿಸಿದ್ದರು.

ಸಂಸದರ ಒತ್ತಾಯದ ಮೇರೆಗೆ ರೈಲ್ವೇ ಬೋರ್ಡ್ ಈ ಹೊಸ ರೈಲ್ವೇ ಮಾರ್ಗದ ಸರ್ವೇ ಕಾರ್ಯಕ್ಕೆ ಸಮ್ಮತಿಸಿ ಇತ್ತೀಚೆಗೆ 18 ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆಗೊಳಿಸಿದೆ.  ಹೊಸ ರೈಲು ಮಾರ್ಗದಿಂದ ಗಂಗಾವತಿಯಿಂದ ನೇರವಾಗಿ ಬಳ್ಳಾರಿ, ಬೆಂಗಳೂರು, ತಿರುಪತಿ, ವಿಜಯವಾಡ ಹಾಗೂ ಇತರೆ ನಗರಗಳಿಗೆ ಹೋಗಲು ಸ್ಥಳೀಯರಿಗೆ ಅನುಕೂಲವಾಗುವುದರ ಜೊತೆಗೆ ವಾಣಿಜ್ಯ ಉದ್ದೇಶಗಳಿಗೆ ಪೂರಕವಾಗಲಿದೆ.

ಈ ಕುರಿತಾಗಿ ಸಂಸದರು ಪ್ರಧಾನ ಮಂತ್ರಿಗಳಿಗೆ, ಕೇಂದ್ರ ರೈಲ್ವೇ ಮಂತ್ರಿಗಳಿಗೆ, ರೈಲ್ವೇ ಬೋರ್ಡ್ ಅಧ್ಯಕ್ಷರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ಸಂಸದರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News