ಮುಸ್ಲಿಂ ಮಹಿಳೆಯಿಂದ ಗಣೇಶ ತಯಾರು..ಭಾವೈಕ್ಯತೆ ಮೆರೆಯುತ್ತಿರುವ ಸುಮನ್!

ಇಂದು ಎಲ್ಲೆಡೆ ಜಾತಿ, ಧರ್ಮ ಮತ ಪಂಥ ಮೇಲು ಕೀಳು ಬಡವ ಬಲ್ಲಿದ, ಹೆಣ್ಣು ಗಂಡು ಎಂಬ ಭೇಧಭಾವದ ಕಂದಕ ಕ್ಕೆ ಸಿಲುಕಿ ನರಳಾಡುತಿದ್ದು.‌ಇಂತಹ ಸಂದರ್ಭದಲ್ಲಿ ಹಿಂದುಗಳ ಹಬ್ಬ ಅದು ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ತುಂಬವ ಜೊತೆಗೆ ಹಿಂದುಗಾಳನ್ನ ಒಡಗೂಡಿಸಿದ ಗಣೇಶ ಹಬ್ಬ ನಾಡಹಬ್ಬವಾಗಿದೆ.   

Written by - Savita M B | Last Updated : Aug 19, 2023, 08:26 PM IST
  • ವಿಘ್ನ ನಿವಾರಕನನ್ನ ತಯಾರು ಮಾಡಿ ಹಿಂದು ಮುಸ್ಲಿಮ್ ಬೇಧಭಾವ ಹೊಡೆದು ಹಾಕಿದ ಮುಸ್ಲಿಂ ಸಮುದಾಯದ ಮಹಿಳೆ
  • ಶ್ರದ್ಧಾ ಭಕ್ತಿಯಿಂದ ಗಣೇಶ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ಪರಿಣಿತೆ
  • ಪರಿಸರ ಸ್ನೇಹಿ ಗಣಪ ತಯಾರಿಕೆ ಹಾಗೂ ವಿವಿಧ ರೀತಿಯ ಗಣೇಶ ವಿಗ್ರಹಳ ತಯಾರಿಕೆ ಖುಷಿ ನೀಡುತ್ತದೆ
ಮುಸ್ಲಿಂ ಮಹಿಳೆಯಿಂದ ಗಣೇಶ ತಯಾರು..ಭಾವೈಕ್ಯತೆ ಮೆರೆಯುತ್ತಿರುವ ಸುಮನ್! title=

Viral News : ಈ ಹಬ್ಬಕ್ಕೆ ಗಣೇಶ ಮೂರ್ತಿ ಇಲ್ಲ ಎಂದರೆ ಹೇಗ ವಿಘ್ನ ನಿವಾರಕನನ್ನ ತಯಾರು ಮಾಡಿ ಹಿಂದು ಮುಸ್ಲಿಮ್ ಬೇಧಭಾವ ಹೊಡೆದು ಹಾಕಿದ ಮುಸ್ಲಿಂ ಸಮುದಾಯದ ಮಹಿಳೆಯ ಈ ವಿಶೇಷ ವರದಿ ತಾವು ಓದಲೇಬೇಕು..

ಈ ಮಹಿಳೆಯ ಹೆಸರು ಸುಮನ್.. ಇವಳು ಗಣೇಶ ವಿಗ್ರಹ ತಯಾರಿಸುವುದು ಇವಳ ಕಾಯಕ ಇನ್ನು ಕಳೆದ ಕೇಲ ದಿನಗಳಿಂದ ಇದೇ ಇವಳ ಆಕೆಯ ಜೀವನೋಪಾಯದ ಪ್ರಮುಖ ಮೂಲ. ಈಕೆಯ ಕಲಾತ್ಮಕ ಕೌಶಲ್ಯಕ್ಕೆ ಯಾವುದೇ ಧರ್ಮವಿಲ್ಲ. ಹುಬ್ಬಳ್ಳಿಯ ಮೂಲದ ಮುಸ್ಲಿಂ ಮಹಿಳೆ ಕಳೆದ ನಾಲ್ಕು ವರ್ಷಗಳಿಂದ ಗಣೇಶ ಪ್ರತಿಮೆ ತಯಾರಿಸುವ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. 

ಹೀಗೇ ಶ್ರದ್ಧಾ ಭಕ್ತಿಯಿಂದ ಗಣೇಶ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ಪರಿಣಿತೆ,  ಗಣೇಶ ವಿಗ್ರಹ ತಯಾರಕರಾದ ನಿರುಪಮಾ  ಯಾದವ್ ಅವರ ಬಳಿ ಸಹಾಯಕಿಯಾಗಿ ಸುಮನ್ ಕೆಲಸ ಮಾಡುತ್ತಿದ್ದಾರೆ. ಇವರ ಜೊತೆ ಇನ್ನಿಬ್ಬರು  ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅವರು ವಿಗ್ರಹಕ್ಕೆ ಆಭರಣ ವಿನ್ಯಾಸ ಮತ್ತು ಅಂತಿಮ ಟಚ್ ನೀಡುತ್ತಾರೆ.

ಇದನ್ನೂ ಓದಿ-ಕರ್ನಾಟಕದ ಬಿಜೆಪಿ ಮೇಲೆ ಹೈಕಮಾಂಡ್ ನಾಯಕರು ಎಳ್ಳಷ್ಟೂ ಭರವಸೆ ಇಟ್ಟುಕೊಂಡಿಲ್ಲವೇ?: ಕಾಂಗ್ರೆಸ್ ವ್ಯಂಗ್ಯ

ಹಣಕಾಸಿನ ಸಮಸ್ಯೆಯಿಂದಾಗಿ ಸುಮನ್ ತಮ್ಮ ಮನೆಯ ಬಳಿಯಿದ್ದ ವಿಗ್ರಹ ತಯಾರಿಕೆ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಪರಿಸರ ಸ್ನೇಹಿ ಗಣಪ ತಯಾರಿಕೆ ಹಾಗೂ ವಿವಿಧ ರೀತಿಯ ಗಣೇಶ ವಿಗ್ರಹಳ ತಯಾರಿಕೆ ಖುಷಿ ನೀಡುತ್ತದೆ ಎನ್ನುವ ಸುಮನ್ ಅವರ ಕೆಲಸ ಕುರಿತು ಗಣೇಶ ಮೂರ್ತಿ ತಯಾರಿಸುವ ಘಟಕದ ಮಾಲೀಕರಾದ ನಿರುಪಮಾ ಹೇಳುವುದು ಹೀಗೆ..

ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹ ನಿಷೇಧದ ನಂತರ ಕಾಗದದ ವಿಗ್ರಹ ತಯಾರಿಸಲು ಆರಂಭಿಸಿದೆ. ಮುಸ್ಲಿಂ ಸಮುದಾಯದ ಮಹಿಳೆ ಸೇರಿದಂತೆ ವಿವಿಧ ಸಮುದಾಯಗಳ ಮೂವತ್ತು ಮಂದಿ ಕೆಲಸ ಮಾಡುವ ಇಲ್ಲಿ 
ಉತ್ತಮ ಗುಣಮಟ್ಟದ ಮಣ್ಣು ಸಿಗುವುದು ಈ ದಿನಗಳಲ್ಲಿ ತುಂಬಾ ಕಷ್ಟ, ಜೇಡಿ ಮಣ್ಣಿನಿಂದ ತಯಾರಿಸುವ ಗಣೇಶ ಪ್ರತಿಮೆಗಳು ಬೇಗ ಬಿರುಕು ಬಿಡುತ್ತವೆ. ಆದ್ದರಿಂದ ವಿಗ್ರಹ ತಯಾರಕರಲ್ಲಿ ಜನಪ್ರಿಯವಾಗಿರುವ 'ಪೊರ್ಬಂದರ್ ಚಾಕ್ ಮಿಟ್ಟಿ' ಮತ್ತು ವೃತ್ತಪತ್ರಿಕೆಗಳೊಂದಿಗೆ ವಿಗ್ರಹಗಳನ್ನು ತಯಾರಿಸುತ್ತಾರೆ.

ಸೀಮೆ ಸುಣ್ಣದ ಪುಡಿ ಮತ್ತು ವೃತ್ತಪತ್ರಿಕೆಯ ಸಂಯೋಜನೆಯು ಕಡಿಮೆ ತೂಕವಿದ್ದು ಅದರಿಂದ ಬಿರುಕು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಭಾಗದಲ್ಲಿ ಇವರೊಬ್ಬರೇ ಕಾಗದದಿಂದ ಗಣೇಶ ತಯಾರಿಸುವವರಾಗಿದ್ದಾರೆ. ಪ್ರತಿ ವರ್ಷ ಸುಮಾರು ೫೦೦ ವಿಗ್ರಹ ರಡಿ ಮಾಡುತ್ತಾರೆ. ಆದರೆ ಈ ವರ್ಷ ಅತಿಯಾದ ಮಳೆಯಿಂದ ಗಣೇಶ ಮೂರ್ತಿ ಕಡಿಮೆ ಮಾಡಲಾಗಿದೆ. ‌ಆರ್ಥಿಕ ಹೊರೆ ಸಹ ಹೆಚ್ಚಾಗಿದೆ.

ಇದನ್ನೂ ಓದಿ-"ಉತ್ತರ ಕರ್ನಾಟಕದ ಜನಪದ ಪರಂಪರೆಗೆ ಕಾಯಕಲ್ಪ ಬೇಕಿದೆ"

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News