ಗದಗ: ಅಕ್ರಮ ಮಣ್ಣು ಗಣಿಗಾರಿಕೆಗೆ ಇಬ್ಬರು ಯುವಕರ ಬಲಿ

ಅಕ್ರಮ ಮಣ್ಣು ಗಣಿಗಾರಿಕೆಗೆ ಹೊಂಡದಲ್ಲಿ‌ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಶ್ಯಾಗೋಟಿ ಗ್ರಾಮದಲ್ಲಿ ನಡೆದಿದೆ.ಮೃತಪಟ್ಟಿರುವ ಯುವಕರನ್ನು ಬಸವರಾಜ್ (17) ಹಾಗೂ ಈರಣ್ಣ (17) ಎಂದು ಗುರುತಿಸಲಾಗಿದೆ.

Written by - Zee Kannada News Desk | Last Updated : Apr 30, 2022, 04:27 PM IST
  • ಮಣ್ಣು ತೆಗೆದ ಬೃಹತ್ ಹೊಂಡದಲ್ಲಿ ಈಜಲು ಹೋಗಿ ಈ ಯುವಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
  • ಅಗ್ನಿಶಾಮಕ ಸಿಬ್ಬಂದಿಯು ಈ ಯುವಕರನ್ನು ಹೊರಕ್ಕೆ ತೆಗೆಯಲು ಮುಂದಾಗಿದ್ದಾರೆ.
ಗದಗ: ಅಕ್ರಮ ಮಣ್ಣು ಗಣಿಗಾರಿಕೆಗೆ ಇಬ್ಬರು ಯುವಕರ ಬಲಿ  title=
file photo

ಗದಗ: ಅಕ್ರಮ ಮಣ್ಣು ಗಣಿಗಾರಿಕೆಗೆ ಹೊಂಡದಲ್ಲಿ‌ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಶ್ಯಾಗೋಟಿ ಗ್ರಾಮದಲ್ಲಿ ನಡೆದಿದೆ.ಮೃತಪಟ್ಟಿರುವ ಯುವಕರನ್ನು ಬಸವರಾಜ್ (17) ಹಾಗೂ ಈರಣ್ಣ (17) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: 'ಕಿಚ್ಚ ಸುದೀಪ್ ಹೇಳಿದ್ದರಲ್ಲಿ ತಪ್ಪಿಲ್ಲ, ಆದರೆ ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ'

ಮಣ್ಣು ತೆಗೆದ ಬೃಹತ್ ಹೊಂಡದಲ್ಲಿ ಈಜಲು ಹೋಗಿ ಈ ಯುವಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಅಗ್ನಿಶಾಮಕ ಸಿಬ್ಬಂದಿಯು ಈ ಯುವಕರನ್ನು ಹೊರಕ್ಕೆ ತೆಗೆಯಲು ಮುಂದಾಗಿದ್ದಾರೆ.ಇದಕ್ಕೆ ಸ್ಥಳೀಯ ಗ್ರಾಮಸ್ಥರು ಕೈಜೋಡಿಸಿದ್ದಾರೆ ಎನ್ನಲಾಗಿದೆ.ಈ ಇಬ್ಬರು ಯುವಕರು ಪಿಯುಸಿ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್ ನಲ್ಲಿ ಮುಂದುವರೆದ ರಾಕಿ ಭಾಯ್ ಅಬ್ಬರ

ಸುಮಾರು ೨೦ ಗಂಟೆ ಕಳೆದರೂ ಇನ್ನೂ ಶವಗಳು ಸಿಕ್ಕಿಲ್ಲ. ಹೊಂಡದಲ್ಲಿ ಇಳಿದು ಶವ ಹುಡುಕಲು ಅಗ್ನಿ ಶಾಮಕ ಸಿಬ್ಬಂಧಿ ಹಿಂದೇಟು ಹಾಕುತ್ತಿದ್ದಾರೆ, ಅವರು ಕಾಟಾಚಾರಕ್ಕೆ ಎನ್ನುವಂತೆ ಬೋಟ್ ಮೇಲಿಂದಲೇ ಶವನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.ಈಗ ಅವರ ಈ ಬೇಜವಾಬ್ದಾರಿ ನಡೆಗೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ಜಿಲ್ಲೆಯಲ್ಲಿನ ಅಕ್ರಮ ಮಣ್ಣು ಗಣಿಗಾರಿಕೆಗೆ ಅಧಿಕಾರಿಗಳು ಕಡಿವಾಣ ಹಾಕದಿರುವುದಕ್ಕೆ ಈ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News