ಓರ್ವನನ್ನ ರಕ್ಷಣೆ ಮಾಡಲು ಹೋಗಿ ನಾಲ್ವರು ಜಲಸಮಾಧಿ..ನಾಲ್ವರ ಸಾವಿನಿಂದ ಸಿದ್ದಗಂಗಾ ಮಠದಲ್ಲಿ ನೀರವಮೌನ..!

Siddaganga Mata : ಅದು ಅಕ್ಷರ ದಾಸೋಹ, ಅನ್ನ ದಾಸೋಹ ಎಂದೇ ಖ್ಯಾತಿ ಪಡೆದಿರುವ ಹೆಸರಾಂತ ಮಠ.. ಕೋಟ್ಯಾಂತರ ಮಕ್ಕಳ ಬಾಳಿಗೆ ಬೆಳಕಾದ ನಂದಾದೀಪ ಸ್ಥಳ.. ಅಂತಹ ಸ್ಥಳದಲ್ಲಿ ಆ ಒಬ್ಬ ಬಾಲಕನ ಎಡವಟ್ಟಿಗೆ ನಾಲ್ವರು ಪ್ರಾಣಬಿಟ್ಟಿದ್ದಾರೆ.. ನಾಲ್ವರ ಸಾವಿನಿಂದ ಸಿದ್ದಗಂಗಾ ಮಠದಲ್ಲಿ ನೀರವಮೌನ ಆವರಿಸಿದೆ..  

Written by - Savita M B | Last Updated : Aug 13, 2023, 11:18 PM IST
  • ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
  • ನೀರಿನಲ್ಲಿ ಶೋಧ ನಡೆಸುತ್ತಿರುವ ಅಗ್ನಿಶಾಮಕ ದಳ
  • ಸದ್ಯ ಸ್ಥಳದಲ್ಲೇ ಮೊಕ್ಕಾಂ‌ ಹೂಡಿರುವ ಪೊಲೀಸ್ ವರಿಷ್ಠಾಧಿಕಾರಿ
ಓರ್ವನನ್ನ ರಕ್ಷಣೆ ಮಾಡಲು ಹೋಗಿ ನಾಲ್ವರು ಜಲಸಮಾಧಿ..ನಾಲ್ವರ ಸಾವಿನಿಂದ ಸಿದ್ದಗಂಗಾ ಮಠದಲ್ಲಿ ನೀರವಮೌನ..! title=

Tumkuru : ನೀರಿನಲ್ಲಿ ಶೋಧ ನಡೆಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತೊಂದು ಕಡೆ ನೀರಿನ ದಡದಲ್ಲಿ ಬಿದ್ದಿರುವ ಶವಗಳು.. ಈ ದೃಶ್ಯ ಕಂಡುಬಂದಿದ್ದು ಸಿದ್ದಗಂಗಾ ಮಠದ ಗೋ ಕಟ್ಟೆ ಬಳಿ.. ಹೌದು.. ಇಂದು ಸಿದ್ದಗಂಗಾ ಮಠದಲ್ಲಿ ಅಚಾನಕ್ಕಾಗಿ ನಡೆಯಬಾರದ ದುರ್ಘಟನೆಯೊಂದು ನಡೆದುಹೋಗಿದೆ.. ಆ ಒಂದು ಘಟನೆಯಿಂದ ದಾರುಣವಾಗಿ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ..

ಹೌದು.. ಇಂದು ಭಾನುವಾರ ಆಗಿದ್ದ ಕಾರಣ ಸಿದ್ದಗಂಗಾ ಮಠದಲ್ಲಿದ್ದ ತಮ್ಮ ಮಕ್ಕಳನ್ನ ನೋಡಲು ಪೋಷಕರು ಆಗಮಿಸಿದ್ರು.. ಅದೇ ರೀತಿ ಬೆಂಗಳೂರಿನ ಬಾಗಲಗುಂಟೆ ಮೂಲದ ಲಕ್ಷ್ಮೀ, ಯಾದಗಿರಿ ಮೂಲದ ಮಹದೇವಪ್ಪ ಇಂದು ಸಿದ್ದಗಂಗಾ ಮಠಕ್ಕೆ ಆಗಮಿಸಿದ್ರು. ಲಕ್ಷ್ಮೀ ಹಾಗೂ ಲಕ್ಷ್ಮೀ, ಮಗಳು ಲಾವಣ್ಯ ಮಗ ರಂಜಿತ್ ಹಾಗೂ ಸ್ನೇಹಿತರಾದ ಶಂಕರ್, ಹರ್ಷಿತ್ ಜೊತೆ ಸಿದ್ದಗಂಗಾ ಮಠದಲ್ಲಿರುವ ಗೋ ಕಟ್ಟೆ ಬಳಿ ಊಟ ಮಾಡಲು ತೆರಳಿದ್ದಾರೆ.. 

ಈ ವೇಳೆ ಅಲ್ಲಿದ್ದ ಮರಗಳ ಮುಂದೆ ಎಲ್ಲರು ಪೋಟೋ ಶೂಟ್ ಮಾಡಿಕೊಂಡು ಗೋ ಕಟ್ಟೆ ಬಳಿ ಸೆಲ್ಪಿ ತೆಗೆದುಕೊಂಡಿದ್ದಾರೆ.. ಬಳಿಕ ವಾಟ್ಸಪ್ ಸ್ಟೇಟಸ್ ಗೂ ಸಹ ಪೋಟೋಗಳನ್ಬ ಶೇರ್ ಮಾಡಿಕೊಂಡಿದ್ದಾರೆ.. ಬಳಿಕ ಅಲ್ಲೆ ಗೋ ಕಟ್ಟೆ ಬಳಿ ಊಟ ಮಾಡಿದ್ದಾರೆ.. ಊಟ ಮಾಡಿದ ಬಳಿಕ ಕೈ ತೊಳೆಯಲು ಗೋ ಕಟ್ಟೆ ಬಳಿ ರಂಜಿತ್ ತೆರಳಿದ್ದಾನೆ. 

ಇದನ್ನೂ ಓದಿ-ಕೈ-ದಳ ನಡುವೆ ನಿವೇಶನ ಹಂಚಿಕೆ ಒಪ್ಪಂದ?..ತುಮಕೂರಿನಲ್ಲಿ ನಿಲ್ಲದ ಹಾಲಿ-ಮಾಜಿ ಶಾಸಕರ ಟಾಕ್ ವಾರ್..!

ಈ ವೇಳೆ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾನೆ.. ಆತನನ್ನ ರಕ್ಷಣೆ ಮಾಡಲು ರಂಜಿತ್ ತಾಯಿ ಲಕ್ಷ್ಮೀ ನೀರಿಗೆ ಬಿದಿದ್ದಾರೆ.. ಲಕ್ಷ್ಮೀ ಹಾಗೂ ರಂಜಿತ್ ನನ್ನ ರಕ್ಷಣೆ ಮಾಡಲು ಹರ್ಷಿತ್ ಹಾಗೂ ಶಂಕರ್ ನೀರಿಗೆ ಬಿದಿದ್ದಾರೆ.. ಈ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ನಾಲ್ವರನ್ನ ನೋಡಿದ ಯಾದಗಿರಿ ಮೂಲದ ಮಹದೇವಪ್ಪ ರಕ್ಷಣೆ ಮಾಡಲು ನೀರಿಗೆ ಬಿದಿದ್ದಾರೆ.. ಈ ವೇಳೆ ರಂಜಿತ್ ನನ್ನ ರಕ್ಷಣೆ ಮಾಡಿದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ..

ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ತುಮಕೂರು ಎಸ್ ಪಿ ರಾಹುಲ್ ಕುಮಾರ್ , ಕ್ಯಾತಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಚರಣೆ ನಡೆಸಿ ಲಕ್ಷ್ಮೀ ಹಾಗೂ ಹರ್ಷಿತಾ ಮೃತದೇಹವನ್ನ ಹೊರತೆಗೆದಿದ್ದಾರೆ.. ಇನ್ನು ಪತ್ತೆಯಾಗದ ಶಂಕರ್, ಹಾಗೂ ಮಹದೇವಪ್ಪನ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ದಳ ಹಾಗೂ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.. 

ಇನ್ನು ಮೃತ ಹರ್ಷಿತ್, ಶಂಕರ್ ಹಾಗೂ ರಂಜಿತ್ ಸಿದ್ದಗಂಗಾ ಮಠದಲ್ಲಿ 6 ನೇ ತರಗತಿ ವಿದ್ಯಾಭ್ಯಾಸ ಮಾಡ್ತಿದ್ದು. ಇನ್ನು ಮೃತ ಹರ್ಷಿತ್ ಚಿಕ್ಕಮಗಳೂರು ಮೂಲದವನಾಗಿದ್ದು, ಶಂಕರ್ ರಾಮನಗರದ ಮಾಗಡಿ ಮೂಲದವನು, ಮಹದೇವಪ್ಪ ಯಾದಗಿರಿ ಮೂಲದವದರಾಗಿದ್ದು ತಮ್ಮ ಪುತ್ರ ಪವನ್ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಆತನ ಯೋಗಕ್ಷೇಮ ವಿಚಾಯ ಬಂದಿದ್ದ ಮಹಾದೇವಪ್ಪ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೋಷಕರು ಆಗಮಿಸಿದ್ದು ಅವರ ಅಕ್ರಂಧನ ಮುಗಿಲು ಮುಟ್ಟಿದೆ..

ಸದ್ಯ ಸ್ಥಳದಲ್ಲೇ ಮೊಕ್ಕಾಂ‌ ಹೂಡಿರುವ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಹಾಗೂ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಮೃತರ ಕುಟುಂಬಕ್ಕೆ ಸಾತ್ವಾಂನ ಹೇಳಿ ಸಿಎಂ ವಿಶೇಷ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸೋದಾಗಿ ಭರವಸೆ ನೀಡಿದ್ದಾರೆ. 

ಒಟ್ನಲ್ಲಿ ಕೋಟ್ಯಾಂತರ ಮಕ್ಕಳ ಬಾಳಿಗೆ ಬೆಳಕಾಗಿದ್ದ ಆ ಪುಣ್ಯಕ್ಷೇತ್ರದಲ್ಲಿ ನಾಲ್ವರು ಸಾವನ್ನಪ್ಪಿದ್ದು ಇಡೀ ಸಿದ್ದಗಂಗಾ ಮಠದಲ್ಲಿ ಸ್ಮಶಾನದ ಮೌನ ಆವರಿಸಿದೆ..

ಇದನ್ನೂ ಓದಿ-77ನೇ ಸ್ವಾತಂತ್ರ್ಯ ದಿನಾಚರಣೆಗೆ ಕೌಂಟ್‌ಡೌನ್‌, ಮದುವಣಗಿತ್ತಿಯಂತೆ ಸಿಂಗಾರಗೊಂಡ ಮಾಣಿಕ್‌ ಷಾ ಮೈದಾನ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News