ದೇವೇಗೌಡರ ಅಮರನಾಥ ಯಾತ್ರೆ ಮುಂದೂಡಿಕೆ

ಅಮರನಾಥ ಸುತ್ತ‌ಮುತ್ತ ಭಾರೀ ಮಳೆ ಹಿನ್ನಲೆಯಲ್ಲಿ ಅಮರನಾಥ ಯಾತ್ರೆ ಮುಂದೂಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು.

Last Updated : Jul 24, 2018, 12:38 PM IST
ದೇವೇಗೌಡರ  ಅಮರನಾಥ ಯಾತ್ರೆ ಮುಂದೂಡಿಕೆ title=
File Photo

ಬೆಂಗಳೂರು: ಅಮರನಾಥ ಸುತ್ತ‌ಮುತ್ತ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ನಾಳೆ(ಜು.25) ರಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಮ್ಮ ಕುಟುಂಬದವರೊಂದಿಗೆ ಕೈಗೊಂಡಿದ್ದ ಅಮರನಾಥ ಯಾತ್ರೆಯನ್ನು ಮುಂದೂಡಿದ್ದಾರೆ.

ಅಮರನಾಥ ಸುತ್ತ‌ಮುತ್ತ ಎಡಬಿಡದೆ ಮಳೆ ಸುರಿಯುತ್ತಿದ್ದು ಜುಲೈ 28 ರ ಬಳಿಕ ಯಾತ್ರೆ ಕೈಗೊಳ್ಳುವಂತೆ ಜಮ್ಮು ಕಾಶ್ಮಿರದ ರಾಜ್ಯಪಾಲರು ಮನವಿ ಮಾಡಿರುವುದರಿಂದ ಯಾತ್ರೆಯನ್ನು ಮುಂದೂಡಲಾಗಿದೆ. 

ಜಮ್ಮು ಕಾಶ್ಮೀರ ರಾಜ್ಯಪಾಲ ಎನ್‌.ಎನ್.ವೊಹ್ರಾ, ದೇವೇಗೌಡರಿಗೆ ದೂರವಾಣಿ ಮೂಲಕ ಅಮರನಾಥದ ಸುತ್ತಮುತ್ತ ಭಾರೀ ಮಳೆ ಸುರಿಯುತ್ತಿದ್ದು, ಜುಲೈ 28 ರ ಬಳಿಕ ಯಾತ್ರೆ ಕೈಗೊಳ್ಳುವಂತೆ ಮನವಿ ಮಾಡಿದ್ದರು. ರಾಜ್ಯಪಾಲರ ಮನವಿ ಸ್ವೀಕರಿಸಿರುವ ಹೆಚ್ಡಿಡಿ ಅಮರನಾಥ ಯಾತ್ರೆಯನ್ನು ಮುಂದೂಡಿದ್ದಾರೆ.
 

Trending News