Janardhana Reddy: ಡಿ.25ಕ್ಕೆ ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಘೋಷಣೆ..?

ತಮ್ಮ 1 ವಾರದ ಪ್ರವಾಸದ ಭಾಗವಾಗಿ ನಾಳೆಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಗಾಲಿ ಜನಾರ್ದನ ರೆಡ್ಡಿ ಸಂಚರಿಸಲಿದ್ದಾರೆ. ಪಕ್ಷ ಘೋಷಣೆಗೂ ಮುನ್ನ ರೆಡ್ಡಿ ರಾಜ್ಯದ ಮಠ-ಮಂದಿರಗಳಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

Written by - Puttaraj K Alur | Last Updated : Dec 18, 2022, 10:09 AM IST
  • ಡಿ.25ಕ್ಕೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ, ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಘೋಷಣೆ ಸಾಧ್ಯತೆ
  • ನಾಳೆಯಿಂದ ಒಂದು ವಾರ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಜನಾರ್ದನ ರೆಡ್ಡಿ ಭಾಗಿ
  • ಪಕ್ಷ ಘೋಷಣೆಗೂ ಮುನ್ನ ರಾಜ್ಯದ ಮಠ-ಮಂದಿರಗಳಿಗೆ ಭೇಟಿ ನೀಡಲಿರುವ ಜನಾರ್ದನ ರೆಡ್ಡಿ
Janardhana Reddy: ಡಿ.25ಕ್ಕೆ ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಘೋಷಣೆ..?  title=
ಜನಾರ್ದನ್ ರೆಡ್ಡಿಯಿಂದ ಹೊಸ ಪಕ್ಷ?

ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಡಿ.25ರಂದು ಹೊಸ ಪಕ್ಷ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಸುಳಿವು ನೀಡಿರುವ ಅವರು, ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಮುಂದಿನ ವಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.  

ಡಿ.25ರಂದು ಬೆಂಗಳೂರಿನಲ್ಲಿ ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ ಕರೆದಿದ್ದಾರೆ. ಒಂದು ವಾರದ ವಿಶ್ರಾಂತಿ ಬಳಿಕ ಮತ್ತೆ ಓಡಾಟು ಶುರು ಮಾಡಿರೋ ರೆಡ್ಡಿ, ತಮ್ಮ ಪ್ರವಾಸದ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇಂದು(ಡಿ.18) ಗಂಗಾವತಿಯಲ್ಲಿ ಸುದ್ದಿಗೋಷ್ಠಿ ಕರೆಯುವುದಾಗಿ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ತಿಳಿಸಿದ್ದು, ತೀವ್ರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ನಕಲಿ ಜೇನು ಮಾರಾಟ ಜಾಲ : ರಸ್ತೆ ಬದಿ ಮಾರುವ ಜೇನು ಖರೀದಿಸುವ ಮುನ್ನ ಎಚ್ಚರ..!

ತಮ್ಮ 1 ವಾರದ ಪ್ರವಾಸದ ಭಾಗವಾಗಿ ನಾಳೆಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಗಾಲಿ ಜನಾರ್ದನ ರೆಡ್ಡಿ ಸಂಚರಿಸಲಿದ್ದಾರೆ. ಪಕ್ಷ ಘೋಷಣೆಗೂ ಮುನ್ನ ರೆಡ್ಡಿ ರಾಜ್ಯದ ಮಠ-ಮಂದಿರಗಳಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.

ಡಿ.19ರಂದು ತುಮಕೂರಿನ ಸಿದ್ದಗಂಗಾ ಮಠ ಮತ್ತು ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ, ಡಿ.20ಕ್ಕೆ ಗದಗಿನ ಪುಟ್ಟರಾಜ ಗವಾಯಿಗಳು ಮತ್ತು ತೋಂಟದಾರ್ಯ ಶ್ರೀಗಳ ಗದ್ದುಗೆ ದರ್ಶನ, ಡಿ.21ಕ್ಕೆ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಭಾಗದ ಮುಖಂಡರನ್ನು ಭೇಟಿ ಮಾಡಲಿರುವ ರೆಡ್ಡಿ ಚರ್ಚೆ ನಡೆಸಲಿದ್ದಾರೆ. ಡಿ.22ರಂದು ಗಂಗಾವತಿಯ ದುರ್ಗಾದೇವಿ ಜಾತ್ರೆಯಲ್ಲಿ ರೆಡ್ಡಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ: ಗ್ರಾಮ ವಾಸ್ತವ್ಯ ಮಾಡುವ ಹಳ್ಳಿಗಳ ಅಭಿವೃದ್ಧಿಗೆ 1 ಕೋಟಿ ರೂ.ಗಳನ್ನು ಮಂಜೂರು: ಸಿಎಂ ಬೊಮ್ಮಾಯಿ 

ಕೊನೆಗೆ ಡಿ.25ರಂದು ಬೆಂಗಳೂರಿನ ಪಾರಿಜಾತ ಅಪಾರ್ಟ್ಮೆಂಟ್‌ನಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ರೆಡ್ಡಿ ತಮ್ಮ ರಾಜಕೀಯ ಪಕ್ಷದ ಹೆಸರು ಪ್ರಕಟ ಮಾಡಲಿದ್ದಾರೆಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News