ನೀವು ತಿಂಡಿ ಪೋತರೇ? ಹಾಗಿದ್ದರೆ ಈ ಹಬ್ಬದಲ್ಲಿ ಸವಿಯಿರಿ ನೂರಾರು ಬಗೆಯ ತಿಂಡಿ...

'ತಿಂಡಿ ಪೋತರ ಹಬ್ಬ'ದಲ್ಲಿ ವಿವಿಧ ಬಗೆಯ ಆಹಾರ ಪದಾರ್ಥಗಳು ದೊರೆಯುವುದಷ್ಟೇ ಅಲ್ಲದೇ, ಮನರಂಜನಾ ಕಾರ್ಯಕ್ರಮ ಸಹ ನಡೆಯಲಿದೆ. 

Last Updated : Oct 4, 2018, 04:14 PM IST
ನೀವು ತಿಂಡಿ ಪೋತರೇ? ಹಾಗಿದ್ದರೆ ಈ ಹಬ್ಬದಲ್ಲಿ ಸವಿಯಿರಿ ನೂರಾರು ಬಗೆಯ ತಿಂಡಿ... title=

ಬೆಂಗಳೂರು: ನಿಮಗೆ ಎಲ್ಲಾ ರೀತಿಯ ಆಹಾರವನ್ನು ಟೇಸ್ಟ್ ಮಾಡುವ ಹವ್ಯಾಸವಿದೆಯೇ? ನೀವು ತಿಂಡಿ ಪೋತರೇ? ಹಾಗಿದ್ದರೆ ಬೆಂಗಳೂರಿನಲ್ಲಿ ನಾಳೆಯಿಂದ ನಡೆಯಲಿರುವ 'ತಿಂಡಿ ಪೋತರ ಹಬ್ಬ'ದಲ್ಲಿ ಮರೆಯದೇ ಭಾಗವಹಿಸಿ. ಎಲ್ಲಿ, ಯಾವಾಗ ನಡೆಯುತ್ತೆ ಅಂತ ಯೋಚಿಸುತ್ತಿದ್ದೀರಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್...

ವೀಕ್ಷಣ ವೆಂಚರ್‌ ಸಂಸ್ಥೆ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅ.5 ರಿಂದ 7ರವರೆಗೆ 'ತಿಂಡಿ ಪೋತರ ಹಬ್ಬ' ನಡೆಯಲಿದೆ. ಈ ಹಬ್ಬದಲ್ಲಿ ವಿವಿಧ ಬಗೆಯ ಆಹಾರ ಪದಾರ್ಥಗಳು ದೊರೆಯುವುದಷ್ಟೇ ಅಲ್ಲದೇ, ಮನರಂಜನಾ ಕಾರ್ಯಕ್ರಮ ಸಹ ನಡೆಯಲಿದೆ. ಒಂದು ಸಾವಿರಕ್ಕೂ ಹೆಚ್ಚು ಬಗೆಯ ಸಾಂಪ್ರದಾಯಿಕ ದಕ್ಷಿಣ ಹಾಗೂ ಉತ್ತರ ಭಾರತದ ಆಹಾರಗಳು, ದೇಸಿ ಮತ್ತು ವಿದೇಶಿ ತಿನಿಸುಗಳು ಹಬ್ಬದಲ್ಲಿ ಲಭ್ಯವಿರಲಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಿಹಿಕಹಿ ಚಂದ್ರು, ಮೂರು ದಿನಗಳ ಕಾಲ ನಡೆಯುವ 'ತಿಂಡಿ ಪೋತರ ಹಬ್ಬ'ಕ್ಕೆ ಅಕ್ಟೋಬರ್ 5 ರಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಚಾಲನೆ ನೀಡಲಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಟಿ.ಎ. ಶರವಣ, ಸಂಸದ ಪಿ.ಸಿ.ವೋಹನ್‌, ನಿವೃತ್ತ ಐಪಿಎಸ್‌ ಅಧಿಕಾರಿ ಶಂಕರ ಬಿದರಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು. 
 

Trending News