CM Ibrahim: ಯುಗಾದಿ ಬಳಿಕ ದೊಡ್ಡ ಮಟ್ಟದ ರಾಜಕೀಯ ಪ್ರವಾಹ : ಸಿಎಂ ಇಬ್ರಾಹಿಂ ಭವಿಷ್ಯ

ಕರ್ನಾಟಕ ರಾಜ್ಯದಲ್ಲಿ ವಯೋವೃದ್ದ ರಾಜಕಾರಣಿ ಅವರು ಅಜಾತ ಶತ್ರು. ನಮ್ಮ‌ನಡೆ ಅವರ ಜೊತೆಯಲ್ಲಿ, ಇದು ಸರ್ವಸಮ್ಮತ ಅಭಿಪ್ರಾಯವಾಗಿದೆ. ಮುಂದಿನ ದಿನಗಳಲ್ಲಿ  ಅನೇಕ ಜನ ಬರ್ತಾರೆ ಯಾರಿಗೂ ಬಲವಂತ ಮಾಡೋದಿಲ್ಲ. ಯುಗಾದಿ ಮುಗಿದ ಮೇಲೆ ಎಪ್ರಿಲ್ ಮೇ ತಿಂಗಳಲ್ಲಿ ದೊಡ್ಡ ಪ್ರವಾಹ ಬರುತ್ತದೆ. ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.

Written by - RACHAPPA SUTTUR | Edited by - Yashaswini V | Last Updated : Mar 31, 2022, 01:07 PM IST
  • ಸ್ವತಂತ್ರವಾಗಿ ನಾವೇ ಸರ್ಕಾರ ಮಾಡಬೇಕು ಎಂಬ ಶಕ್ತಿ ಜೆಡಿಎಸ್ ಗೆ ಇದೆ. ಮುಂದಿನ ಚುನಾವಣೆಯಲ್ಲಿ ಮೊದಲು ಜೆಡಿಎಸ್ ನಂತರ ಬಿಜೆಪಿ ಕೊನೆಯಲ್ಲಿ ಕಾಂಗ್ರೆಸ್.
  • ಉತ್ತರ ಪ್ರದೇಶ ಹಾಗೂ ಪಂಜಾಬ್ ನಲ್ಲಿ ಏನಾಯ್ತು ಅದೇ ವಾತಾವರಣ ಕರ್ನಾಟಕದಲ್ಲೂ ಆಗುತ್ತದೆ.
  • ನಾನು ಯಾವ ಪಕ್ಷವನ್ನು ಟೀಕೆ‌ ಮಾಡೋದಿಲ್ಲ, ಯಾರನ್ನೂ ಬೈಯೋದಿಲ್ಲ- ಸಿಎಂ ಇಬ್ರಾಹಿಂ
CM Ibrahim: ಯುಗಾದಿ ಬಳಿಕ ದೊಡ್ಡ ಮಟ್ಟದ ರಾಜಕೀಯ ಪ್ರವಾಹ : ಸಿಎಂ ಇಬ್ರಾಹಿಂ ಭವಿಷ್ಯ  title=
CM Ibrahim

ಬೆಂಗಳೂರು : ಯುಗಾದಿ ವರ್ಷ ತೊಡಕಿನ ಬಳಿಕ ದೊಡ್ಡ ಮಟ್ಟದ ರಾಜಕೀಯ ಪ್ರವಾಹ ಬರುತ್ತೆ ಎಂದು ಸಿಎಂ ಇಬ್ರಾಹಿಂ ಭವಿಷ್ಯ ನುಡಿದರು. 

ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ  (CM Ibrahim) ಅವರು, "ಗುರುವಾರದ ದಿವಸ ಎಲ್ಲಾ‌ ಧರ್ಮಗಳಿಗೆ ಶ್ರೇಷ್ಠವಾದದ್ದು. ಆ ಕಾರಣಕ್ಕಾಗಿ ರಾಜೀನಾಮೆ ಕೊಟ್ಟಿದ್ದೇನೆ. ನನ್ನ ಮುಂದಿನ ನಡೆ ಇಲ್ಲಿಂದ ಆರಂಭ" ಎಂದರು. 

ನನ್ನ ಮೇಲೆ ಏನು ಹೊರೆ ಇತ್ತು ಅದನ್ನು ಕಳಚಿ ಕೊಂಡಿದ್ದೇನೆ. ನನ್ನ ಮುಂದಿನ ನಡೆಯನ್ನು ಎಚ್.ಡಿ. ದೇವೇಗೌಡರ (HD Devegowda) ಪಾಲಿಗೆ ಬಿಟ್ಟಿದ್ದೇನೆ. ಅವರು ಮಾರ್ಗದರ್ಶಕರು. ದೇಶಕ್ಕೆ ಮಾರ್ಗದರ್ಶನ ಕೊಟ್ಟವರು, ಅಜಾತ ಶತ್ರು" ಎಂದರು.

ಇದನ್ನೂ ಓದಿ- ಕುದುರೆ-ಹಸುಗೆ ಸಿಕ್ಕ ಮನ್ನಣೆ ಕಪ್ಪು ಬಣ್ಣದ ಕಂಬಳದ ಕೋಣನಿಗೆ ಪ್ರಾಧಾನ್ಯತೆ ಸಿಕ್ಕಿಲ್ಲ- ಬಿ ಕೆ ಹರಿಪ್ರಸಾದ್

ಕರ್ನಾಟಕ ರಾಜ್ಯದಲ್ಲಿ ವಯೋವೃದ್ದ ರಾಜಕಾರಣಿ ಅವರು ಅಜಾತ ಶತ್ರು. ನಮ್ಮ‌ನಡೆ ಅವರ ಜೊತೆಯಲ್ಲಿ, ಇದು ಸರ್ವಸಮ್ಮತ ಅಭಿಪ್ರಾಯವಾಗಿದೆ. ಮುಂದಿನ ದಿನಗಳಲ್ಲಿ  ಅನೇಕ ಜನ ಬರ್ತಾರೆ ಯಾರಿಗೂ ಬಲವಂತ ಮಾಡೋದಿಲ್ಲ. ಯುಗಾದಿ ಮುಗಿದ ಮೇಲೆ ಎಪ್ರಿಲ್ ಮೇ ತಿಂಗಳಲ್ಲಿ ದೊಡ್ಡ ಪ್ರವಾಹ ಬರುತ್ತದೆ. ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದರು. 

ಸ್ವತಂತ್ರವಾಗಿ ನಾವೇ ಸರ್ಕಾರ ಮಾಡಬೇಕು ಎಂಬ ಶಕ್ತಿ ಜೆಡಿಎಸ್ ಗೆ ಇದೆ. ಮುಂದಿನ ಚುನಾವಣೆಯಲ್ಲಿ ಮೊದಲು ಜೆಡಿಎಸ್ (JDS) ನಂತರ ಬಿಜೆಪಿ ಕೊನೆಯಲ್ಲಿ ಕಾಂಗ್ರೆಸ್. ಉತ್ತರ ಪ್ರದೇಶ ಹಾಗೂ ಪಂಜಾಬ್ ನಲ್ಲಿ ಏನಾಯ್ತು ಅದೇ ವಾತಾವರಣ ಕರ್ನಾಟಕದಲ್ಲೂ ಆಗುತ್ತದೆ. ನಾನು ಯಾವ ಪಕ್ಷವನ್ನು  ಟೀಕೆ‌ ಮಾಡೋದಿಲ್ಲ, ಯಾರನ್ನೂ ಬೈಯೋದಿಲ್ಲ ಎನ್ನುವ ಮೂಲಕ ಎಲ್ಲರಲ್ಲು ವಿಶ್ವಾಸ ಉಳಿಸಿಕೊಳ್ಳುವ ಸಂದೇಶ ನೀಡಿದರು.

"ಅನ್ಯರ ಡೊಂಕು ನೀವೇಕೆ  ತಿದ್ದುವಿರಯ್ಯ" ಎಂಬ ಬಸವಣ್ಣನವರ ವಚನ ಹೇಳಿದ ಇಬ್ರಾಹಿಂ, ಇಂದು ನನ್ನ ರಾಜೀನಾಮೆಯನ್ನು ಸಭಾಪತಿಗಳು ಅಂಗೀಕರಿಸಿದ್ದಾರೆ. ಇಷ್ಟು ದಿನ ಜೊತೆಗಿದ್ದ ಕಾಂಗ್ರೆಸ್ ಕಾರ್ಯಕರ್ತರು, ಒಳ್ಳೊಳ್ಳೆ ಸ್ನೇಹಿತರಿದ್ದರು. ವಿಧಿಯಿಲ್ಲ ಬಿಡಬೇಕಾತಯ್ತು. ಅವರೆಲ್ಲರಿಗೂ ಧನ್ಯವಾದ ಹೇಳ್ತೀನಿ ಎಂದರು.

ಇದನ್ನೂ ಓದಿ- 'ಶೋಷಿತರನ್ನು ಮೇಲೆತ್ತಲು ಪ್ರಯತ್ನ ಮಾಡಿದವರಲ್ಲಿ ಬ್ರಾಹ್ಮಣರು ಮೊದಲಿಗರು' : ಗೋವಿಂದ ಕಾರಜೋಳ

ಪದವಿ ಕೊಟ್ಟಾಗ ಯಾವತ್ತು ಇಟ್ಟುಕೊಳ್ಳಬಾರದು ಸ್ವಯಂ ಪ್ರೇರಿತವಾಗಿ  ಬಿಟ್ಟುಕೊಟ್ಟಿದ್ದೇನೆ. ಇನ್ಮುಂದೆ ಜನ ನನ್ನನ್ನು ಕೈಹಿಡಿತಾರೆ. ಜನರಿಗೆ ನಾನು ಇಷ್ಟೇ ಹೇಳೋದು, "ಎನ್ನ ನಾಮ ಕ್ಷೇಮಾ ನಿಮ್ಮದಯೇ. ಎನ್ನ ನಾಮ ಅಪಮಾನ ನಿಮ್ಮದಯೇ. ಎನ್ನ ಹಾನಿ ವೃದ್ದಿ ನಿಮ್ಮದಯೇ ಬಳ್ಳಿಗೆ ಕಾಯಿ ಧನ್ಯತೆ ಕೂಡಲಸಂಗಮದೇವ" ಎಂದು ವಚನ‌ ಉಲ್ಲೇಖ ಮಾಡಿದ ಅವರು, ನಾನು ಕಾಯಿ ಇದ್ದ ಹಾಗೇ, ನೀವು ಬಳ್ಳಿ ಇದ್ದ ಹಾಗೇ, 
ಇಷ್ಟು ದಿನ ನನನ್ನು ಕಾಪಾಡಿದ್ದೀರಾ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಉದ್ಬವಿಸಿರುವ ಸಾಮರಸ್ಯ ವಿಚಾರವಾಗಿ ಪ್ರತಿಕ್ರಿಯೆ ನೀಡಿ, 
"ನಾನು ಬಿಜೆಪಿಯವರಿಗೆ ಮನವಿ ಮಾಡ್ತೀನಿ. ಮತೀಯ ಭಾವನೆ ಏನಿದೆ? ಅಮಿತ್ ಶಾ ಸಹ ಪಾರ್ಲಿಮೆಂಟ್ ನಲ್ಲಿ ಹೇಳಿದ್ದಾರೆ. ಹಿಂಸೆಯಿಂದ  ಎಲೆಕ್ಷನ್‌ ಗೆಲ್ಲೋದಿಲ್ಲ. ನಾವು ಐಡಿಯಾಲಜಿ ಮೇಲೆ ಎಲೆಕ್ಷನ್ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ದೊಡ್ಡವರೇ ಹಾಗೇ ಹೇಳುವಾಗ ನೀವು ಯಾಕೆ...?" ಎಂದು ಪ್ರಶ್ನಿಸಿದರು.

ಹೀಗಿರುವಾಗ ಇಲ್ಲಿ ಈ ಕಟ್ಟು ಆ ಕಟ್ಟು ಚರಕ ಕಟ್ಟು ತಲೆ ಕಟ್ಟು ಮಲೆ ಕಟ್ಟು ಅಂತ ಸುಮ್ಮನೆ ಬೇಡದಿರುವ ವಿಷಯಗಳನ್ನೆಲ್ಲ ವಿವಾದ ಮಾಡಿಕೊಳ್ಳುವುದು ಸರಿಯಲ್ಲ ಎಂದರು‌.‌

ಇವತ್ತು ಬಪ್ಪ ಬ್ಯಾರಿ ಕಟ್ಟಿಸಿದ ದೇವಸ್ಥಾನದಲ್ಲಿ ಅಂಗಡಿ ಹಾಕಬಾರದು, ಆದ್ರೆ ಆ ದೇವಿ ಪ್ರಸಾದವನ್ನು ಆ ಪೂಜಾರಿಯವರು ಮನೆ ತಲುಪಿಸುವ ಕೆಲಸ ಮಾಡಿದ್ದಾರೆ. ಇದೇ ಕೂಡಿ ಬಾಳಿ ಬದುಕುವ ಸಂದೇಶ ತೋರಿಸುತ್ತೆ. ಇದೇ ಭಾರತ ಕರ್ನಾಟಕದ ಸಂಸ್ಕೃತಿ ಎಂದರು‌.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News